Editor

ಪುತ್ತೂರು: ‘ಹಿಟ್ ಅ್ಯಂಡ್ ರನ್’|ಸ್ಕೂಟಿ ಸವಾರ ದುರ್ಮರಣ

ಪುತ್ತೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ಸವಾರ ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ಅ.12 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ. ನಿಡ್ಪಳ್ಳಿ ಗ್ರಾಮದ ವಾಲ್ತಾಜೆ‌ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ ದುರ್ದೈವಿ. ಅ.12ರ ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು ತರುತ್ತಿದ್ದವೇಳೆ ಮಿತ್ತೂರು ಮಸೀದಿ ಸಮೀಪದದ ಹೆದ್ದಾರಿಯಲ್ಲಿ

ಪುತ್ತೂರು: ‘ಹಿಟ್ ಅ್ಯಂಡ್ ರನ್’|ಸ್ಕೂಟಿ ಸವಾರ ದುರ್ಮರಣ Read More »

‘ಸಿನಿಮಾದಲ್ಲಿ ಹುಡುಗರನ್ನೂ ಕಾಸ್ಟಿಂಗ್ ಕೌಚ್ ಅಟ್ಯಾಕ್ ಮಾಡುತ್ತೆ’ – ಅನುಭವ ಬಿಚ್ಚಿಟ್ಟ ಕಿರುತೆರೆ ನಟ

ಮುಂಬೈ: ಕಿರುತೆರೆ ನಟ ಜೀಶಾನ್ ಖಾನ್ ಬಿಗ್ ಬಾಸ್ ಓಟಿಟಿ(Bigg Boss OTT)ಯಲ್ಲಿ ಕಾಣಿಸಿಕೊಂಡ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಜನರು ಸಹ ಜೀಶಾನ್ ಖಾನ್ (Zeeshan Khan) ಅವರನ್ನು ಗುರುತಿಸುತ್ತಿದ್ದಾರೆ. ತಮ್ಮ ಬಣ್ಣದ ಲೋಕದ ಆರಂಭದ ದಿನಗಳ ಬಗ್ಗೆ ಮಾತನಾಡಿರುವ ಜೀಶಾನ್ ಖಾನ್, ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಯ ನಿರ್ದೇಶಕರ ಬಳಿ ಆಡಿಶನ್ ಗೆ ತೆರಳಿದ್ದಾಗ ಆದ ಅನುಭವ ಹಂಚಿಕೊಂಡಿದ್ದು, ‘ನನ್ನನ್ನು ಅವರ ಪ್ರೊಜೆಕ್ಟ್ ಗೆ ಆಯ್ಕೆ

‘ಸಿನಿಮಾದಲ್ಲಿ ಹುಡುಗರನ್ನೂ ಕಾಸ್ಟಿಂಗ್ ಕೌಚ್ ಅಟ್ಯಾಕ್ ಮಾಡುತ್ತೆ’ – ಅನುಭವ ಬಿಚ್ಚಿಟ್ಟ ಕಿರುತೆರೆ ನಟ Read More »

ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜ್ಯಾಂ| ಮುಳುಗಿದ ವಾಹನಗಳು

ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಟ್ಯಾಕ್ಸಿ ಮತ್ತು ಕಾರುಗಳಿಗೆ ಹಾನಿಯಾಗಿದ್ದು, ನಗರದ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಾಮುತ್ತ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇಂಜಿನ್ ಗಳಿಗೆ ನೀರು ನುಗ್ಗಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿವೆ. ಅದಲ್ಲದೆ ಭಾರಿ ಮಳೆಯಿಂದ ಟರ್ಮಿನಲ್ ಮುಂಭಾಗ ನೀರು ನಿಂತಿತ್ತು. ಟರ್ಮಿನಲ್ ಬಳಿ 2 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಸದ್ಯ ಸಹಜ ಸ್ಥಿತಿಗೆ ಮರಳಿದ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿಂತಿದ್ದ ಭಾರಿ

ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜ್ಯಾಂ| ಮುಳುಗಿದ ವಾಹನಗಳು Read More »

ಮತಾಂತರಕ್ಕೆ ಯತ್ನ ಆರೋಪ| ಪ್ರಾರ್ಥನೆ ನಡೆಯುತ್ತಿದ್ದ ಮನೆ ಮೇಲೆ ಭಜರಂಗದಳದಿಂದ ದಾಳಿ

ಧಾರವಾಡ: ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ದಯಾಸಾಗರ ಎಂಬುವವರ ಮನೆ ಮೇಲೆ ಭಜರಂಗದಳದ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರನ್ನು ಕಾರ್ಯಕರ್ತರು ಹೊರಕಳಿಸಿದ್ದಾರೆ. ಅಳ್ನಾವರ ಮತ್ತು ಸುತ್ತಮುತ್ತಲಿನ ಗ್ರಾಮಗಳ‌ ಹಿಂದೂಗಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಹಿಂದೂಗಳನ್ನು ಸೇರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಇತ್ತೀಚೆಗೆ ಮತಾಂತರಗೊಂಡಿರುವ ಕೆಲವರಿಂದ ಪ್ರಾರ್ಥನೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಈ

ಮತಾಂತರಕ್ಕೆ ಯತ್ನ ಆರೋಪ| ಪ್ರಾರ್ಥನೆ ನಡೆಯುತ್ತಿದ್ದ ಮನೆ ಮೇಲೆ ಭಜರಂಗದಳದಿಂದ ದಾಳಿ Read More »

ಅಣ್ಣನಿಲ್ಲದ‌ ಸಮಯದಲ್ಲಿ ಅತ್ತಿಗೆಯ ಸರಸಕ್ಕೆ ಎಳೆದ ಮೈದುನ| ದೂರು ದಾಖಲು

ಭೋಪಾಲ್: ಇಲ್ಲಿನ ಮಹಿಳೆಯೊಬ್ಬಳಿಗೆ ಆಕೆಯ ಮೈದುನ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನ ವಿರುದ್ದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಶನಿವಾರ ರಾತ್ರಿ ತನ್ನ ಪತಿ ಇಲ್ಲದಿದ್ದಾಗ ಮೈದುನ ಕಿರುಕುಳ ನೀಡಿರುವುದಾಗಿ ಮಹಿಳೆ ಆರೋಪಿಸಿ ದೂರು ನೀಡಿದ್ದಾಳೆ. ಪೊಲೀಸರ ಪ್ರಕಾರ, ದೂರುದಾರ ಮಹಿಳೆ ಸುಖಿ-ಸೆವಾನಿಯಾ ನಿವಾಸಿಯಾಗಿದ್ದು, ಶನಿವಾರ ರಾತ್ರಿ ವೃತ್ತಿಯಲ್ಲಿ ಚಾಲಕನಾಗಿರುವ ಪತಿ ಕೆಲಸದ ನಿಮಿತ್ತ ಊರ ಹೊರಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾಳೆ. ಆಕೆಯ ಮೈದುನ ಪತಿಯನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ದ.

ಅಣ್ಣನಿಲ್ಲದ‌ ಸಮಯದಲ್ಲಿ ಅತ್ತಿಗೆಯ ಸರಸಕ್ಕೆ ಎಳೆದ ಮೈದುನ| ದೂರು ದಾಖಲು Read More »

ಬೆಂಗಳೂರಿನಲ್ಲಿ ಕಾಣೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ| ಸುಖಾಂತ್ಯ ಪಡೆದ ನಾಪತ್ತೆ ಪ್ರಕರಣ

ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಾಲ್ವರು ಮಕ್ಕಳು ಪತ್ತೆಯಾಗಿದ್ದು, ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಜಿಬಿ ಲೇಔಟ್‌ನ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಮೃತವರ್ಷಿಣಿ ಮನೆಯಿಂದ ಹೋಗಬೇಕಾದ್ರೆ 70 ಗ್ರಾಂ ಚಿನ್ನದ ನೆಕ್ಲೆಸ್, 3000 ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಕ್ಕಳ

ಬೆಂಗಳೂರಿನಲ್ಲಿ ಕಾಣೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ| ಸುಖಾಂತ್ಯ ಪಡೆದ ನಾಪತ್ತೆ ಪ್ರಕರಣ Read More »

ಕುಕ್ಕೆ ದೇಗುಲದಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಸೇವೆಗೆ ಅವಕಾಶ|

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. 2 ಡೋಸ್‌ ಲಸಿಕೆ ಪಡೆದ ಮತ್ತು 72 ಗಂಟೆ ಮುಂಚಿತವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿದ್ದರೆ ಮಾತ್ರ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸೇವೆ ಮತ್ತು ದರ್ಶನ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಮಾತ್ರವಲ್ಲದೇ ಈ ಸಿಬಂದಿ ಭಕ್ತರಿಗೆ ಕೋವಿಡ್‌ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. 100

ಕುಕ್ಕೆ ದೇಗುಲದಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಸೇವೆಗೆ ಅವಕಾಶ| Read More »

ಕಳಚಿದ ಯಕ್ಷರಂಗದ ಕೊಂಡಿ| ಪ್ರಸಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

ಸುಳ್ಯ: ಯಕ್ಷರಂಗದ ಮೇರು ಪ್ರತಿಭೆ, ಕಂಚಿನ ಕಂಠದ ಭಾಗವತ ಪದ್ಯಾಣ ಗಣಪತಿ ಭಟ್ ಇಂದು(ಅ.11) ಬೆಳಿಗ್ಗೆ ನಿಧನರಾಗಿದ್ದಾರೆ.ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಕಂಠದಿಂದ ಪ್ರಸಿದ್ಧಿಯನ್ನು ಹೊಂದಿದ ಪದ್ಯಾಣ ಗಣಪತಿ ಭಟ್ ರವರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಪದ್ಯಾಣದವರು. ಹಲವು ದಶಕಗಳಿಂದ ಹಲವು ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಕಲಾ ಸೇವೆ ಮಾಡಿದ್ದಾರೆ. ಪದ್ಯಾಣ’ ಪದವೇ ಸಂಗೀತ ಶೋತೃಗಳಲ್ಲಿ ಸಂಚಲನೆಯನ್ನುಂಟು ಮಾಡುವಂಥದ್ದು, ಪದ್ಯಾಣ ಕುಟುಂಬ ದಲ್ಲಿ ಜನಿಸಿದವರೆಲ್ಲರೂ ಸಂಗೀತ ಅಥವಾ ಯಕ್ಷಗಾನ ಕಲಾವಿದರೆಂಬುದು ವಾಸ್ತವ ಸಂಗತಿ.

ಕಳಚಿದ ಯಕ್ಷರಂಗದ ಕೊಂಡಿ| ಪ್ರಸಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ Read More »

ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ

ಮಂಗಳೂರು: ಉಪನ್ಯಾಸಕಿಯೊಬ್ಬರು ತನ್ನ ಫೇಸ್‌ಬುಕ್‌ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಪುನಸ್ಕಾರಗಳನ್ನು ಲಘುವಾಗಿ ಚಿತ್ರಿಸಿದ ರೀತಿ ಬರೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸುಳ್ಯದ ಪದವಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯೋರ್ವರು ಮಾಡಿದ ಅವಹೇಳನಕಾರಿ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿಂದೂ ವಿರೋದಿ ಪೋಸ್ಟ್ ಹಾಕಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಪೂಜೆ ಮಾಡುವ ಬ್ರಾಹ್ಮಣರ ಫೋಟೋವನ್ನು ಮುಂದಿಟ್ಟುಕೊಂಡು, ಈ ಸೋಂಬೇರಿಗಳು

ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ Read More »

ಉಗ್ರರೊಂದಿಗೆ ಎನ್ ಕೌಂಟರ್ ಚಕಮಕಿ| ನಿಯೋಜಿತ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ|

ಪೂಂಚ್: ಕಿರಿಯ ನಿಯೋಜಿತ ಅಧಿಕಾರಿ ಸೇರಿದಂತೆ ಐವರು ಸೇನಾ ಯೋಧರು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮರಾಗಿದ್ದಾರೆ. ಇಂದು ನಸುಕಿನ ಜಾವದಿಂದ ತೀವ್ರ ಪ್ರಮಾಣದ ಗುಂಡಿನ ಚಕಮಕಿ ಉಗ್ರಗಾಮಿಗಳು ಮತ್ತು ಯೋಧರ ನಡುವೆ ಏರ್ಪಟ್ಟಿತು. ಇದರಲ್ಲಿ ಸೇನಾ ಯೋಧರು ಹುತಾತ್ಮರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಪೂಂಚ್ ಜಿಲ್ಲೆಯ ಸುರಂಕೊಟೆಯ ಡಿಕೆಜಿ ಹತ್ತಿರ ಗ್ರಾಮವೊಂದರಲ್ಲಿ ಈ ಕಾರ್ಯಾಚರಣೆ ನಡೆಯಿತು. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಪಡೆದ

ಉಗ್ರರೊಂದಿಗೆ ಎನ್ ಕೌಂಟರ್ ಚಕಮಕಿ| ನಿಯೋಜಿತ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ| Read More »