Editor

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್​ ನಿಧನ

ಬೆಂಗಳೂರು: ಬಬ್ರುವಾಹನ ಖ್ಯಾತಿಯ ಸ್ಯಾಂಡಲ್​ವುಡ್​ನ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್​ ವಿಧಿವಶರಾಗಿದ್ದಾರೆ.ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಕೆಳದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಚಂದ್ರಶೇಖರ ಅವರು ಹುಲಿ ಹಾಲಿನ ಮೇವು, ಬಬ್ರುವಾಹನ ಸೇರಿದಂತೆ ಹಲವು ಸಿನಿಮಾಗಳ ನಿರ್ದೇಶಕರಾಗಿ ಖ್ಯಾತರಾಗಿದ್ದರು. ಅದಲ್ಲದೆ ಸಿನಿಮಾ ವಿತರಕರಾಗಿ ಹಾಗೂ ಕರ್ನಾಟಕ ಫಿಲಂ ಛೇಂಬರ್ ಮತ್ತು SIFCCRIPನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇಂದು ಬೆಳಗ್ಗೆಯಿಂದ ಶಿವಾನಂದ ಸರ್ಕಲ್ ಬಳಿಯ […]

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್​ ನಿಧನ Read More »

38 ಹೆಂಡಿರ ಗಂಡ 89 ಮಕ್ಕಳ ಅಪ್ಪ 33 ಮೊಮ್ಮಕ್ಕಳ ತಾತ ಇನ್ನಿಲ್ಲ

ಮಿಜೋರಾಮ್: ಭಾರತದ ಸಣ್ಣ ರಾಜ್ಯದಲ್ಲಿ ವಿಶ್ವದಲ್ಲೇ ದೊಡ್ಡ ಕುಟುಂಬ ಹೊಂದಿದ್ದ ವ್ಯಕ್ತಿಯೊಬ್ಬರು ನಿಧನರಾಗಿದ್ದಾರೆ. 38 ಪತ್ನಿಯರಿಗೆ ನಲ್ಮೆಯ ಪತಿಯಾಗಿ, 89 ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ ಮತ್ತು 33 ಮೊಮ್ಮಕ್ಕಳಿಗೆ ಮುದ್ದಿನ ಅಜ್ಜನಾಗಿದ್ದ ಮಿಜೋರಾಮ್ ನ ಜಿಯೋನಾ ಚಾನಾ (76 ವ.) ಅವರು ಇಹಲೋಕ ತ್ಯಾಜಿಸಿದ್ದಾರೆ. ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾನಾ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.

38 ಹೆಂಡಿರ ಗಂಡ 89 ಮಕ್ಕಳ ಅಪ್ಪ 33 ಮೊಮ್ಮಕ್ಕಳ ತಾತ ಇನ್ನಿಲ್ಲ Read More »

ಸಂಪೂರ್ಣ ಸೀಲ್ ಡೌನ್ ಆದ ದ.ಕ ಜಿಲ್ಲೆಯ 17 ಗ್ರಾಮಗಳಲ್ಲಿ ಏನೇನಿರುತ್ತೆ ಗೊತ್ತಾ?

ಮಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಗೊಳಿಸಲು ದ.ಕ ಜಿಲ್ಲೆಯ 17 ಗ್ರಾಮಗಳನ್ನು ಜೂನ್ 14 ರಿಂದ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದ್ದು, ಈ ಗ್ರಾಮ ಪಂಚಾಯತ್ ಗಳಲ್ಲಿ ಕೆಲವು ಸೂಚಿತ ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ. ಉಳಿದಂತೆ ಗ್ರಾಮಕ್ಕೆ ಒಳಪ್ರವೇಶ ಹಾಗೂ ನಿರ್ಗಮನಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು. ಸೀಲ್‌ ಡೌನ್ ಮಾಡಲಾದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವಶ್ಯಕತೆಯನ್ನು ಆಧರಿಸಿ ಪಾವತಿ ಆಧಾರದ ಮೇಲೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡಲು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಾರ್ಯಪಡೆಗಳು ಕ್ರಮವಹಿಸಬೇಕು. ಈ ಗ್ರಾಮಪಂಚಾಯತ್

ಸಂಪೂರ್ಣ ಸೀಲ್ ಡೌನ್ ಆದ ದ.ಕ ಜಿಲ್ಲೆಯ 17 ಗ್ರಾಮಗಳಲ್ಲಿ ಏನೇನಿರುತ್ತೆ ಗೊತ್ತಾ? Read More »

ಬರ್ತ್ ಡೇ ದಿನ 1 ರೂ.ಗೆ ಪೆಟ್ರೋಲ್ ಮಾರಿದ ಆದಿತ್ಯ ಠಾಕ್ರೆ ಬೆಂಬಲಿಗರು

ಮುಂಬೈ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಪ್ರತಿನಿತ್ಯ ಏರುತ್ತಲೇ ಸಾಗಿದೆ. ಅನೇಕ ವಿರೋಧ ಪಕ್ಷಗಳು ಈ ಬಗ್ಗೆ ಈಗಾಗಲೇ ಹೋರಾಟಗಳನ್ನೂ ಆರಂಭಿಸಿವೆ. ಆದರೆ ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ಅವರ ಶಿವಸೇನೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ವಿಶೇಷ ರೀತಿಯಲ್ಲಿ ಸೆಡ್ಡು ಹೊಡೆಯಲಾಗಿದೆ. ಪೆಟ್ರೋಲ್​ ಬೆಲೆ ಲೀಟರ್​ಗೆ 100 ದಾಟಿದ್ದರೂ ಉದ್ಧವ್​ ಠಾಕ್ರೆ ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗಿದೆ. ಮಹಾರಾಷ್ಟ್ರದ ಡೊಂಬಿವಲಿ ಯುವ ಸೇನೆ ಈ ರೀತಿ ವಿಶೇಷ ಪ್ರಯತ್ನ

ಬರ್ತ್ ಡೇ ದಿನ 1 ರೂ.ಗೆ ಪೆಟ್ರೋಲ್ ಮಾರಿದ ಆದಿತ್ಯ ಠಾಕ್ರೆ ಬೆಂಬಲಿಗರು Read More »

ಕೊನೆಗೂ ಮದುವೆಯಾದ ಮಮತಾ ಬ್ಯಾನರ್ಜಿ: ಏನಿದು ಅಸಲಿ ಸ್ಟೋರಿ? ಇಲ್ಲಿದೆ ಪುಲ್ ಡೀಟೈಲ್

ರಾಜಕೀಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಡ ಪಕ್ಷಗಳು ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದರೇ, ತಮಿಳುನಾಡಿನಲ್ಲಿ ಇಬ್ಬರು ಸತಿ-ಪತಿಗಳಾಗಿ ಜೊತೆಗೆ ನಡೆಯುವ ಪ್ರಮಾಣ ಮಾಡಿದ್ದಾರೆ. ಸೇಲಂ ಜಿಲ್ಲೆಯಲ್ಲಿ ‘ಸೋಶಿಯಲಿಸಂ’ ಎಂಬ ಯುವಕ ಮತ್ತು ‘ಮಮತಾ ಬ್ಯಾನರ್ಜಿ’ ಎಂಬ ಯುವತಿಯ ನಡುವೆ ಸರಳ ವಿವಾಹ ನಡೆದಿದೆ. ಕಾಂಗ್ರೆಸ್ ಬೆಂಬಲಿಗರ ಕುಟುಂಬದ ಮದುಮಗಳು ಪಿ ಮಮತಾ ಬ್ಯಾನರ್ಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕೆಯ ಪೋಷಕರು ಪಶ್ಚಿಮ ಬಂಗಾಳದ ಹಾಲಿ ಸಿಎಂ ಮಮತಾ ಬ್ಯಾನರ್ಜಿಯವರು 20 ವರ್ಷಗಳ ಹಿಂದೆ

ಕೊನೆಗೂ ಮದುವೆಯಾದ ಮಮತಾ ಬ್ಯಾನರ್ಜಿ: ಏನಿದು ಅಸಲಿ ಸ್ಟೋರಿ? ಇಲ್ಲಿದೆ ಪುಲ್ ಡೀಟೈಲ್ Read More »

ಜೂ.14 ರಿಂದ 21 ರವರೆಗೆ ದ.ಕ ಜಿಲ್ಲೆಯ 17 ಗ್ರಾ.ಪಂ ಸೀಲ್ ಡೌನ್

ಮಂಗಳೂರು: ಕೋವಿಡ್ ಸೋಕಿನ ಪ್ರಮಾಣ ಕಡಿಮೆಗೊಳಿಸುವ ಸಲುವಾಗಿ ದ.ಕ. ಜಿಲ್ಲೆಯ 17 ಗ್ರಾಪಂಗಳನ್ನು ಜೂ.14ರಿಂದ ಬೆಳಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ದ.ಕ.ಜಿ.ಪಂ ಸಿಇಒ ಅವರ ವರದಿ ಆಧರಿಸಿ 50ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾಪಂಗಳನ್ನು ಸೀಲ್ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ,

ಜೂ.14 ರಿಂದ 21 ರವರೆಗೆ ದ.ಕ ಜಿಲ್ಲೆಯ 17 ಗ್ರಾ.ಪಂ ಸೀಲ್ ಡೌನ್ Read More »

ಪೈಲಟ್ ಗೆ ಬಾಗಿಲು ತೆರೆದ ಬಿಜೆಪಿ, ಕಾಂಗ್ರೆಸ್ ಗೆ ರೆಡ್ ಅಲರ್ಟ್

ಜೈಪುರ: ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ಗಾಗಿ ಬಿಜೆಪಿ ತನ್ನ ಪಕ್ಷದ ಬಾಗಿಲು ತೆರೆದಿದೆ. ಪರೋಕ್ಷವಾಗಿ ಈ ಬಗ್ಗೆ ಸಂಕೇತ ನೀಡಿರುವ ಬಿಜೆಪಿ ನಾಯಕ, ದೇಶಕ್ಕೆ ಮೊದಲ ಆದ್ಯತೆ ನೀಡುವ ಎಲ್ಲಾ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.ರಾಜಸ್ಥಾನ ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಈ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ದೃಷ್ಟಿಕೋನವಿಲ್ಲ. ಹೀಗಾಗಿ ನಾಯಕರು

ಪೈಲಟ್ ಗೆ ಬಾಗಿಲು ತೆರೆದ ಬಿಜೆಪಿ, ಕಾಂಗ್ರೆಸ್ ಗೆ ರೆಡ್ ಅಲರ್ಟ್ Read More »

ಮೋದಿ ಓರ್ವ ಹೇಡಿಯಂತೆ ವರ್ತಿಸುತ್ತಿದ್ದಾರೆ – ಪ್ರಿಯಾಂಕಾ ಗಾಂಧಿ ಟೀಕೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ದಾಳಿ ನಡೆಸಿದ್ದಾರೆ. “ಪ್ರಧಾನಿ ಮೋದಿ ಹೇಡಿಯಂತೆ ವರ್ತಿಸಿದ್ದಾರೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ಸರ್ಕಾರದ ಪ್ರಶ್ನೆಗಳನ್ನು ಕೇಳುತ್ತಿರುವ ಕಾಂಗ್ರೆಸ್‌ನ “ಜಿಮ್ಮೆದಾರ್ ಕೌನ್ (ಯಾರು ಜವಾಬ್ದಾರರು)” ಅಭಿಯಾನದ ಭಾಗವಾಗಿ, ಪ್ರಿಯಾಂಕ ಗಾಂಧಿ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿರ್ವಹಣೆಯಲ್ಲಿ “ಆಡಳಿತದಲ್ಲಿ ಅಸಮರ್ಥತೆ”ಯನ್ನು ತೋರಿದೆ ಎಂದು ಬೊಟ್ಟು ಮಾಡಿದ್ದಾರೆ.ಈ ಬಗ್ಗೆ

ಮೋದಿ ಓರ್ವ ಹೇಡಿಯಂತೆ ವರ್ತಿಸುತ್ತಿದ್ದಾರೆ – ಪ್ರಿಯಾಂಕಾ ಗಾಂಧಿ ಟೀಕೆ Read More »

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್

ಮೈಸೂರು: ನಾನು ಮುಖ್ಯಮಂತ್ರಿಯಾದರೆ ಭೂಗಳ್ಳರು, ಖನಿಜ ಕಳ್ಳರನ್ನು ಜೈಲಿಗಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತೇನೆ. ನನಗೆ 5 ವರ್ಷಗಳ ಕಾಲಾವಕಾಶ ಬೇಕಿಲ್ಲ, ಕೇವಲ 5 ತಿಂಗಳು ಅವಕಾಶ ಕೊಟ್ಟರೆ ಸಾಕು ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಮೈಸೂರಿನಲ್ಲಿ ಭೂ ಮಾಫಿಯಾ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧವೂ ಭೂ ಹಗರಣ ಆರೋಪ ಕೇಳಿಬಂದಿದೆ. ಹೀಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಅಕ್ರಮಗಳನ್ನು ತಡೆಗಟ್ಟುವ

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್ Read More »

ಕಚ್ಚಿದ ಹಾವನ್ನು ಜೊತೆಗೆ ಹಿಡಿದುಕೊಂಡು ಆಸ್ಪತ್ರೆಗೆ ಬಂದ

ಬಳ್ಳಾರಿ: ಹಾವು ಅಂದ್ರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಇನ್ನು ಹಾವು ಕಚ್ಚಿದ್ರೆ ಇನ್ನೆಷ್ಟು ಭಯ ಆಗ್ಬೇಡ. ಆದ್ರೆ ಇಲ್ಲೊಬ್ಬ ಭೂಪ ಕಚ್ಚಿದ ಹಾವನ್ನೇ ಧೈರ್ಯವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಈ ವಿಚಿತ್ರ ಘಟನೆ ನಡೆದಿದ್ದು ಬಳ್ಳಾರಿ‌ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿಯಲ್ಲಿ. ಗ್ರಾಮದ ಕಾಡಪ್ಪ ಎಂಬುವವನೇ ಹಾವು ಕಡಿತಕ್ಕೊಳಗಾದವನು.ಕಾಡಪ್ಪ ಎಲ್ಲೋ ಹೋಗಿದ್ದಾಗ ಹಾವು ಕಚ್ಚಿದೆ. ಅದೆಲ್ಲಿತ್ತೋ ಕೋಪ ಕಚ್ಚಿದ ಹಾವನ್ನ ಹಿಡಿದು ಆಸ್ಪತ್ರೆಗೆ ಬಂದಿದ್ದಾನೆ. ಹಾವನ್ನು ನೋಡಿ ಆಸ್ಪತ್ರೆಯವರೆಲ್ಲ ಗಾಬರಿಯಾಗಿದ್ದಾರೆ. ಆತನಿಗೆ ಬೈದು ಬುದ್ದಿ

ಕಚ್ಚಿದ ಹಾವನ್ನು ಜೊತೆಗೆ ಹಿಡಿದುಕೊಂಡು ಆಸ್ಪತ್ರೆಗೆ ಬಂದ Read More »