Editor

ಡ್ರಗ್ಸ್ ದಂಧೆ ಪ್ರಕರಣ| ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ

ಮುಂಬೈ: ಹೈಪ್ರೋಫೈಲ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವಂತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು, ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಸೇರಿದಂತೆ ಮೂವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಂತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ

ಡ್ರಗ್ಸ್ ದಂಧೆ ಪ್ರಕರಣ| ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ Read More »

ಮತ್ತೆ ಮತ್ತೆ ಕಂಪಿಸುತ್ತಿರುವ ಬಸವನಾಡು ವಿಜಯಪುರ| ಇದು ಅಪಾಯದ ಮುನ್ಸೂಚನೆಯೇ?

ವಿಜಯಪುರ : ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಆತಂಕದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಸೇರಿ ಹಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ 10.30 ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ‌ ಅನುಭವ ಆಗುತ್ತಿರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದ್ದು, ಇಂದು ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ನ್ಯಾಶನಲ್ ಜಿಯೋಫಿಜಿಕಲ್

ಮತ್ತೆ ಮತ್ತೆ ಕಂಪಿಸುತ್ತಿರುವ ಬಸವನಾಡು ವಿಜಯಪುರ| ಇದು ಅಪಾಯದ ಮುನ್ಸೂಚನೆಯೇ? Read More »

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ವೈಷ್ಣವಿ ದಯಾನಂದ

ಮಡಿಕೇರಿ: ಗರಿಷ್ಠ ಸಂಖ್ಯೆಯ ಪ್ರಾಣಿಗಳ ಹೆಸರು ಮತ್ತು ಅವುಗಳ ಮರಿಗಳನ್ನು ಹೇಳುವುದರ ಮೂಲಕ ವೈಷ್ಣವಿ.ಕೆ.ಡಿ.ಇಂಡಿಯಾ ಬುಕ್ ಆಫ್ ರೆಕಾರ್ಡ್ ಲ್ಲಿ ಸ್ಥಾನ ಪಡೆದಿದ್ದಾಳೆ ಮಡಿಕೇರಿಯ ವೈಷ್ಣವಿ ದಯಾನಂದ್. ಇವಳು ಕೂಡಕಂಡಿ ಓಂಶ್ರೀ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಡಿಕೇರಿಯ ಸಹ ಪ್ರಾಧ್ಯಾಪಕ ಡಾ.ದಯಾನಂದ. ಕೆ.ಸಿ ಯವರ ಪುತ್ರಿ. ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ಒಂದನೆ ತರಗತಿಯ ವಿದ್ಯಾರ್ಥಿನಿ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ವೈಷ್ಣವಿ ದಯಾನಂದ Read More »

ಎರಡು ಮದುವೆಯಾದ ಕುಮಾರಸ್ವಾಮಿಗೆ ಬ್ಲೂಪಿಲಂ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ – ಬಿಜೆಪಿ ತಿರುಗೇಟು

ಬೆಂಗಳೂರು: ಆರ್ ಎಸ್ಎಸ್ ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಿರಂತರ ವಾಗ್ದಾಳಿ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ಅಶ್ವಥ್​ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅಶ್ವಥ್​ ನಾರಾಯಣ ಅವರು ಎಚ್​ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಎಚ್​ಡಿಕೆ ಕ್ಷಮೆ ಕೇಳಬೇಕು.

ಎರಡು ಮದುವೆಯಾದ ಕುಮಾರಸ್ವಾಮಿಗೆ ಬ್ಲೂಪಿಲಂ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ – ಬಿಜೆಪಿ ತಿರುಗೇಟು Read More »

ವಾಲ್ಮೀಕಿ ಜಯಂತಿ| ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಿಎಂ|

ಬೆಂಗಳೂರು : ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2020 ಹಾಗೂ 2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ವಾಲ್ಮೀಕಿ ಜಯಂತಿಯಂದು ನೀಡಲಾಗುವಂತ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಿದೆ. 2020ನೇ ಸಾಲಿಗೆ ಐದು ಸಾಧಕರು ಹಾಗೂ 2021ನೇ ಸಾಲಿಗೆ ಆರು ಸಾಧಕರು ಸೇರಿದಂತೆ 11 ಸಾಧಕರಿಗೆ ಈ ಬಾರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2020 ನೇ ಸಾಲಿನಲ್ಲಿ ವಾಲ್ಮೀಕಿ

ವಾಲ್ಮೀಕಿ ಜಯಂತಿ| ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಿಎಂ| Read More »

ಕಿಸ್ ಕೊಡಲಿಲ್ಲವೆಂದು ಗುಂಡಿಟ್ಟು ಕೊಂದ ಮಹಿಳೆ|

ಅಮೆರಿಕಾ: ತನಗೆ ಮುತ್ತು ಕೊಡೆಂದು ಕೇಳಿದಾಗ ಆತ ನಿರಾಕರಿಸಿದ ಎನ್ನುವ ಕಾರಣಕ್ಕೆ 28 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ಇಲಿನೋಯಿಯಲ್ಲಿ ನಡೆದಿದೆ. ಸಧ್ಯ ಆಕೆಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ಹೆಸರು ಕ್ಲಾಡಿಯಾ ರೆಸೆಂಡಿಜ಼್‌-ಫ್ಲೋರೆಸ್.ಈಕೆ ತನ್ನಿಬ್ಬರು ಗೆಳೆಯರೊಂದಿಗೆ ನೈಟ್‌ ಔಟ್‌ ನಲ್ಲಿ ಭಾಗಿಯಾಗಿದ್ದಳು. ತಾನು ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್‌ ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಿದ್ದಾರೆ. ಈ ಬಳಿಕ ರೆಸೆಂಡಿಜ಼್‌ ತನಗೊಂದು ಮುತ್ತು ಕೊಡು ಎಂದು ಜೇಮ್ಸ್ ಜೋನ್ಸ್‌ ಗೆ ಕೇಳಿಕೊಂಡಿದ್ದಾಳೆ.

ಕಿಸ್ ಕೊಡಲಿಲ್ಲವೆಂದು ಗುಂಡಿಟ್ಟು ಕೊಂದ ಮಹಿಳೆ| Read More »

ಸ್ಕ್ಯಾನಿಂಗ್ ಸೆಂಟರ್ ನ ಶೌಚಗೃಹದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಕೃತಿ| ಸಾರ್ವಜನಿಕರಿಂದ ಬಿತ್ತು ಧರ್ಮದೇಟು|

ತುಮಕೂರು: ಸ್ಕ್ಯಾನಿಂಗ್ ಸೆಂಟರ್​ವೊಂದರ ಶೌಚಗೃಹದಲ್ಲಿ ಮೊಬೈಲ್​ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ದೃಶ್ಯ ಸೆರೆ ಹಿಡಿದು ವಿಕೃತಿ ಮೆರೆದ ಕಾಮುಕನಿಗೆ ಧರ್ಮದೇಟು ಬಿದ್ದಿದೆ. ನಗರದ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ತೆಗೆಯುತ್ತಿದ್ದವನಿಗೆ ಮಂಗಳವಾರ ಸಾರ್ವಜನಿಕರೇ ಥಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹರೀಶ್ (35) ಆರೋಪಿ. ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನಲ್ಲಿ ವರ್ಷದಿಂದ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಈತ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಮಹಿಳೆಯೊಬ್ಬರು ಅನುಮಾನದಿಂದ ಮೊಬೈಲ್

ಸ್ಕ್ಯಾನಿಂಗ್ ಸೆಂಟರ್ ನ ಶೌಚಗೃಹದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಕೃತಿ| ಸಾರ್ವಜನಿಕರಿಂದ ಬಿತ್ತು ಧರ್ಮದೇಟು| Read More »

ಅ.24ರಿಂದ ಒಂದು ವಾರ ಕನ್ನಡ ಕಂಪು| ವಿಶಿಷ್ಟ ಕಾರ್ಯಕ್ರಮಕ್ಕೆ ತಯಾರಿ|

ಬೆಂಗಳೂರು: ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಣೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ ತಿಂಗಳ 24ರಿಂದ 30ರವರೆಗೆ ಒಂದು ವಾರ ಕಾಲ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಮಾತಾಡ್‌ ಮಾತಾಡ್‌ ಕನ್ನಡ ಎಂಬ ಘೋಷ ವಾಕ್ಯದ ಕಲ್ಪನೆಯಲ್ಲಿ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗಿದ್ದು, ಈ ಒಂದು ವಾರ ಕಾಲ ಆರು ರೀತಿಯ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ. ಅಭಿಯಾನದ ವೇಳೆ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡದಲ್ಲಿಯೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು,

ಅ.24ರಿಂದ ಒಂದು ವಾರ ಕನ್ನಡ ಕಂಪು| ವಿಶಿಷ್ಟ ಕಾರ್ಯಕ್ರಮಕ್ಕೆ ತಯಾರಿ| Read More »

ನಟಿ ಸಂಜನಾ ಗಲ್ರಾಣಿಗೆ ವಂಚನೆ| ಸ್ನೇಹಿತನ ವಿರುದ್ದ ಎಫ್ಐಆರ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಜನಾ ಗಲ್ರಾಣಿಗೆ ಸ್ನೇಹಿತನಿಂದಲೇ ವಂಚನೆಯಾಗಿದ್ದು ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕ್ಯಾಸಿನೊದಲ್ಲಿ ಹಣ ಹೂಡಿಕೆ ಮಾಡುವುದಾಗಿ ರಾಹುಲ್ ಥೋನ್ಸೆ ಸಂಜನಾಗೆ ಕಳೆದ ಮೂರು ವರ್ಷಗಳಿಂದ ಹಣದ ಹೂಡಿಕೆ ವಿಚಾರದಲ್ಲಿ ವಂಚನೆ ಎಸಗಿರುವುದು ಗೊತ್ತಾಗಿದ್ದು ಇಂದಿರಾನಗರ ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ಶ್ರೀಮತಿ ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಮೂವರ ವಿರುದ್ಧವೂ ಐಪಿಸಿ ಸೆಕ್ಷನ್ 120 ಬಿ,

ನಟಿ ಸಂಜನಾ ಗಲ್ರಾಣಿಗೆ ವಂಚನೆ| ಸ್ನೇಹಿತನ ವಿರುದ್ದ ಎಫ್ಐಆರ್ Read More »

ಉಳ್ಳಾಲ: ಯುವಕನಿಗೆ ಚೂರಿ ಇರಿತ – ಆರೋಪಿ ಪರಾರಿ, ಪೊಲೀಸರಿಂದ ಶೋಧ

ಮಂಗಳೂರು: ಉಳ್ಳಾಲದ ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಗೊಂಡವರನ್ನು ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಹರೀಶ್ ಎಂದು ಗುರುತಿಸಲಾಗಿದೆ. ಉಳ್ಳಾಲ ಪೊಲೀಸರು ಗಾಯಾಳುಗಳನ್ನು ತೊಕ್ಕೊಟ್ಟುವಿನಲ್ಲಿರುವ ಆಸ್ಪತ್ರೆಗೆ ಸೇರಿಸಿದ್ದಾರೆ. ಮೊಗವೀರಪಟ್ನ ನಿವಾಸಿಯೊಬ್ಬ ವಿಶಾಲ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ವೈಯಕ್ತಿಕ ದ್ವೇಷದಿಂದ ನಡೆದಿರುವ ಕೃತ್ಯ ಎಂದು ಶಂಕಿಸಲಾಗಿದ್ದು, ಸದ್ಯ ವಿಶಾಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉಳ್ಳಾಲ: ಯುವಕನಿಗೆ ಚೂರಿ ಇರಿತ – ಆರೋಪಿ ಪರಾರಿ, ಪೊಲೀಸರಿಂದ ಶೋಧ Read More »