Ad Widget

ಬರ್ತ್ ಡೇ ದಿನ 1 ರೂ.ಗೆ ಪೆಟ್ರೋಲ್ ಮಾರಿದ ಆದಿತ್ಯ ಠಾಕ್ರೆ ಬೆಂಬಲಿಗರು

ಮುಂಬೈ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಪ್ರತಿನಿತ್ಯ ಏರುತ್ತಲೇ ಸಾಗಿದೆ. ಅನೇಕ ವಿರೋಧ ಪಕ್ಷಗಳು ಈ ಬಗ್ಗೆ ಈಗಾಗಲೇ ಹೋರಾಟಗಳನ್ನೂ ಆರಂಭಿಸಿವೆ. ಆದರೆ ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ಅವರ ಶಿವಸೇನೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ವಿಶೇಷ ರೀತಿಯಲ್ಲಿ ಸೆಡ್ಡು ಹೊಡೆಯಲಾಗಿದೆ. ಪೆಟ್ರೋಲ್​ ಬೆಲೆ ಲೀಟರ್​ಗೆ 100 ದಾಟಿದ್ದರೂ ಉದ್ಧವ್​ ಠಾಕ್ರೆ ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಮಹಾರಾಷ್ಟ್ರದ ಡೊಂಬಿವಲಿ ಯುವ ಸೇನೆ ಈ ರೀತಿ ವಿಶೇಷ ಪ್ರಯತ್ನ ಮಾಡಿದೆ. ಅಲ್ಲಿನ ಉಸ್ಮಾ ಪೆಟ್ರೋಲ್​ ಬಂಕ್​ನಲ್ಲಿ ಭಾನುವಾರ ಬೆಳಗ್ಗೆಯಿಂದ ಕೇವಲ ಒಂದು ರೂಪಾಯಿಗೆ 1 ಲೀಟರ್​ ಪೆಟ್ರೋಲ್ ಮಾರಾಟ ಮಾಡಲಾಗಿದೆ. ಮುಂಬೈನಲ್ಲಿ ಪೆಟ್ರೋಲ್​ ದರ 102 ರೂಪಾಯಿ ತಲುಪಿರುವಾಗ ಇಷ್ಟೊಂದು ಕಡಿಮೆ ಬೆಲೆಗೆ ಪೆಟ್ರೋಲ್​ ಸಿಗುತ್ತಿರುವ ವಿಚಾರ ತಿಳಿದ ಜನರು ಬೆಳಗ್ಗೆಯಿಂದಲೂ ಕ್ಯೂ ನಿಂತು ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದಾರೆ. ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಈ ರೀತಿ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಿರುವುದಾಗಿ ತಿಳಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *