Editor

ಮುಂಬೈಯಲ್ಲಿ ರಸ್ತೆ ಅಪಘಾತ| ಉಡುಪಿ ಮೂಲದ ವ್ಯಕ್ತಿ ಮೃತ್ಯು..!!

ಮುಂಬೈ : ಏಳು ವರ್ಷಗಳಿಂದ ಮುಂಬೈ‌ನ ಶಿಪ್ ಯಾರ್ಡ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಉಡುಪಿ ಕೊಳಲಗಿರಿ ಮೂಲದ ವ್ಯಕ್ತಿಯೋರ್ವರು ಮಹಾರಾಷ್ಟ್ರದ ಚೆಂಬೂರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಘಟನೆ ಸಂಭವಿಸಿದೆ.ಮೃತರನ್ನು ರೋಶನ್ ಡಿ ಸೋಜಾ(33) ಗುರುತಿಸಲಾಗಿದೆ. ಇವರು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮುಂಬೈಯಲ್ಲಿ ರಸ್ತೆ ಅಪಘಾತ| ಉಡುಪಿ ಮೂಲದ ವ್ಯಕ್ತಿ ಮೃತ್ಯು..!! Read More »

ಬೆಳ್ತಂಗಡಿ : ಅಪ್ಪ ಮಗ ನಕ್ಸಲ್ ನಂಟು ಆರೋಪ |9 ವರ್ಷದ ಬಳಿಕ ಹೊರಬಿದ್ದ ತೀರ್ಪು|

ಮಂಗಳೂರು: ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದ್ದ ಬೆಳ್ತಂಗಡಿಯ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ನಕ್ಸಲ್ ನಂಟು ಹೊಂದಿದ್ದ ಆರೋಪದ ತೀರ್ಪು 9 ವರ್ಷಗಳ ಬಳಿ ನಿನ್ನೆ ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, 2012ರ ಮಾರ್ಚ್ 03ರಂದು ನಕ್ಸಲ್ ನಿಗ್ರಹ ಪಡೆಯಿಂದ ವಿಠಲ ಮಲೆಕುಡಿಯ ಮತ್ತು ಆತನ ತಂದೆ ಬಂಧನವಾಗಿತ್ತು. ಇದೀಗ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಅಂತಿಮ ತೀರ್ಪು ಪ್ರಕಟಿಸಿದದ್ದು ಇಬ್ಬರೂ ನಿರಪರಾಧಿಗಳು

ಬೆಳ್ತಂಗಡಿ : ಅಪ್ಪ ಮಗ ನಕ್ಸಲ್ ನಂಟು ಆರೋಪ |9 ವರ್ಷದ ಬಳಿಕ ಹೊರಬಿದ್ದ ತೀರ್ಪು| Read More »

ಕಾರ್ಕಳ: ದನದ ಕಾಲು ಕಡಿದು ವಾರಸುದಾರರಿಗೆ ಜೀವ ಬೆದರಿಕೆ, ದೂರು ದಾಖಲು

ಕಾರ್ಕಳ: ಗದ್ದೆಗೆ ಬಂದು ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಭಾಗಿಯಾಗಿದ್ದ ಆರೋಪಿಯ ಮಕ್ಕಳು ದೂರುದಾರರಿಗೆ ಜೀವ ಬೆದರಿಕೆಯೊಡ್ಡಿದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಎರ್ಲಪ್ಪಾಡಿಯ ಸಂತೋಷ್ ಹೆಗ್ಡೆ ದೂರು ನೀಡಿದವರು. ಸಾಕು ದನಗಳನ್ನು ಮೇಯಲೆಂದು ಬೈಲು ಗದ್ದೆಗೆ ಬಿಟ್ಟಿದ್ದರು. ಮೇವಿಗಾಗಿ ಬಿಟ್ಟ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿದ್ದು, ಇದರಿಂದ ಕುಪಿತಗೊಂಡ ಅಮಣ್ಣಿ ಕತ್ತಿಯಿಂದ ದನದ ಕಾಲು ಕಡಿದಿದ್ದಾರೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟು ದೂರುದಾರ

ಕಾರ್ಕಳ: ದನದ ಕಾಲು ಕಡಿದು ವಾರಸುದಾರರಿಗೆ ಜೀವ ಬೆದರಿಕೆ, ದೂರು ದಾಖಲು Read More »

ತುಳುವಲ್ಲೊಂದು ಡ್ಯಾನ್ಸ್ ಸಾಂಗ್| ವಿಶ್ವಮಟ್ಟದಲ್ಲಿ ಧೂಳೆಬ್ಬಿಸ್ತಿದೆ ಮಂಗಳೂರು ಹುಡುಗರ ಈ ಹಾಡು..!

ಮಂಗಳೂರು: ಪ್ರಾದೇಶಿಕ ಭಾಷೆಯಾದ ತುಳುವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಮಂಗಳೂರಿನ ತಂಡವೊಂದು ವಿಶ್ವ ದರ್ಜೆ ಗುಣಮಟ್ಟದ ಡ್ಯಾನ್ಸ್ ವೀಡಿಯೊ ಸಾಂಗ್ ‘ಡ್ಯಾನ್ಸ್ ಡ್ಯಾನ್ಸ್’ ಅನ್ನು ರಚಿಸಿದ್ದಾರೆ. ಅಮೆರಿಕದ ಬಿಎಂಎಸ್ ರೇಡಿಯೋ ನೆಟ್‌ವರ್ಕ್ ಚಿಕಾಗೋದಲ್ಲಿ ಪ್ರಸಾರಗೊಳ್ಳುತ್ತಿರುವ ಮೊದಲ ತುಳು ಹಾಡು ಇದಾಗಿದೆ ಎಂದು ಹಾಡಿನ ನಿರ್ದೇಶಕ, ವೈದ್ಯ ಡಾ.ನಿತಿನ್ ಎಸ್. ಅವರು ತಿಳಿಸಿದ್ದಾರೆ. ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಎನ್ ಆಯಂಡ್ ಎನ್ (ಡಾ ನಿತಿನ್ ಆಯಂಡ್ ನಿಶಾನ್ ಎಸ್.) ಕ್ರಿಯೆಷನ್ಸ್

ತುಳುವಲ್ಲೊಂದು ಡ್ಯಾನ್ಸ್ ಸಾಂಗ್| ವಿಶ್ವಮಟ್ಟದಲ್ಲಿ ಧೂಳೆಬ್ಬಿಸ್ತಿದೆ ಮಂಗಳೂರು ಹುಡುಗರ ಈ ಹಾಡು..! Read More »

ಬಾಗಿಲು ಇಲ್ಲದ ಬಸ್ಸಿನಲ್ಲಿ ಪ್ರಯಾಣಿಸ್ತಿದೀರಾ?| ಎಚ್ಚರ ತಪ್ಪಿದರೆ ಪ್ರಾಣ ಕಳ್ಕೋಬೇಕಾದೀತು ಜೋಕೆ|

ಡಿಜಿಟಲ್ ಡೆಸ್ಕ್: ಆಕೆ ಬಾಗಿಲು ಇಲ್ಲದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ ಅದೇಕೋ ಆಕೆ ತಾನು ಇಳಿಯುವ ಜಾಗ ತಲುಪಿದಾಗ ಕುಳಿತಿದ್ದ ಸೀಟಿನಿಂದ ಎದ್ದಳು. ವೇಗವಾಗಿ ಚಲಿಸುತ್ತಿದ್ದ ಆ ಬಸ್ಸಿನಲ್ಲಿ ಆಯತಪ್ಪಿದ ಆಕೆ ತೆರೆದ ಬಾಗಿಲಿನಿಂದ ಹೊರಕ್ಕೆಸೆಯಪಟ್ಟಿದ್ದಾಳೆ. ಸ್ವಲ್ಪ ಎಚ್ಚರ ತಪ್ಪಿದ್ದರಿಂದ ಆಕೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ‌ ತಲುಪಿದ್ದಾಳೆ. ಈ ಘಟನೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ನೀವೂ ಜಾಗರೂಕರಾಗಿ ಬಸ್ಸು ನಿಂತ ನಂತರವೇ ಇಳಿಯಿರಿ, ಒಂದೊಮ್ಮೆ ಬಸ್ಸು ನಿಲ್ಲುವ ಮೊದಲು ಎದ್ದರೆ ಅನಾಹುತ ತಪ್ಪಿದಲ್ಲ.ವಿಡಿಯೋ

ಬಾಗಿಲು ಇಲ್ಲದ ಬಸ್ಸಿನಲ್ಲಿ ಪ್ರಯಾಣಿಸ್ತಿದೀರಾ?| ಎಚ್ಚರ ತಪ್ಪಿದರೆ ಪ್ರಾಣ ಕಳ್ಕೋಬೇಕಾದೀತು ಜೋಕೆ| Read More »

ಉದ್ಯಮಿ, ಬಿಜೆಪಿ ಹಿರಿಯ ನಾಯಕ ಸುಧೀರ್ ಘಾಟೆ ವಿಧಿವಶ| ಕಂಬನಿ ಮಿಡಿದ ಅಭಿಮಾನಿಗಳು|

ಮಂಗಳೂರು: ಉದ್ಯಮಿ, ಬಿಜೆಪಿ ಹಿರಿಯ ನಾಯಕ ಸುಧೀರ್ ಘಾಟೆ(64) ಅವರು ಶುಕ್ರವಾರ ನಿಧನರಾದರು. 1992 ರಲ್ಲಿ ಜಾಹೀರಾತು ಸಂಸ್ಥೆ,’ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಕಟ್ಟಿ ಬೆಳೆಸಿದ್ದ ಸುಧೀರ್ ಘಾಟೆ ಮಂಗಳೂರಿನ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಇವರು ಸಂಸ್ಥೆಯಲ್ಲಿ 500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದರು. ಆರ್ ಎಸ್‌ಎಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದ ಸುಧೀರ್ ಘಾಟೆ 1995ರಲ್ಲಿ ರಾಜ್ಯ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಕಟ್ಟಿದ್ದರು. ಬಿಎಂಎಸ್ ನ

ಉದ್ಯಮಿ, ಬಿಜೆಪಿ ಹಿರಿಯ ನಾಯಕ ಸುಧೀರ್ ಘಾಟೆ ವಿಧಿವಶ| ಕಂಬನಿ ಮಿಡಿದ ಅಭಿಮಾನಿಗಳು| Read More »

ಗೆಳತಿಯ ಬಾಯ್ ಪ್ರೆಂಡ್ ನಿಂದ ಅತ್ಯಾಚಾರ| ಮಹಿಳೆ ಆಸ್ಪತ್ರೆಗೆ ದಾಖಲು|

ಗದಗ: ರಾತ್ರಿ ವೇಳೆ ಮನೆಗೆ ನುಗ್ಗಿದ್ದ ಯುವಕ ಒಂಟಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗದಗ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೆಳತಿಯ ಬಾಯ್ ಫ್ರೆಂಡ್‍ನಿಂದಲೇ ಅತ್ಯಾಚಾರ ನಡೆದಿದೆ ಅಂತ ಸಂತ್ರಸ್ತೆ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅತ್ಯಾಚಾರವೆಸಗಿದ ಆರೋಪಿ ರಫಿಕ್ ಚಿಂಚಲಿಯನ್ನು ಗದಗ ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಸಂತ್ರಸ್ತೆ ಹಾಗೂ ಅವಳ ಸ್ನೇಹಿತೆ ಇಬ್ಬರು ಗದಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರು ಒಂದೇ ಬಾಡಿಗೆ ಮನೆಯಲ್ಲಿ

ಗೆಳತಿಯ ಬಾಯ್ ಪ್ರೆಂಡ್ ನಿಂದ ಅತ್ಯಾಚಾರ| ಮಹಿಳೆ ಆಸ್ಪತ್ರೆಗೆ ದಾಖಲು| Read More »

ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಶಸ್ತ್ರಾಸ್ತ್ರಗಳ ತರಬೇತಿ| ಸ್ಥಳ ತನಿಖೆಗೆ ತೆರಳಲು ಮುಂದಾದ ಅಮಿತ್ ಶಾ|

ನವದೆಹಲಿ: ಕಾಶ್ಮೀರದಲ್ಲಿ ಪಾಕ್ ಉಗ್ರರು ಶಸ್ತ್ರಾಸ್ತ್ರಗಳ ಬಳಸುವ ಬಗ್ಗೆ ತರಬೇತಿ ಕೊಡುತ್ತಿರುವ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತು ವೀಡಿಯೋವನ್ನು ಬಿಡುಗಡೆ ಮಾಡಿರುವ ವಾಹಿನಿ ಈ ಸಾಕ್ಷ್ಯವನ್ನು ಪಾಕ್ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಲು ಮುಂದಾಗಿದ್ದಾರೆ. ವೀಡಿಯೋದಲ್ಲಿ ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ಮೂಲದ ಉಗ್ರರು ತರಬೇತಿ ನೀಡುತ್ತಿರುವ ಅಂಶ ಒಳಗೊಂಡಿದೆ. ಕಾಶ್ಮೀರದಲ್ಲಿ ಇತ್ತಿಚೆಗೆ ಬಂಧಿಸಲಾಗಿದ್ದ ಉಗ್ರನಿಂದ ವಶ ಪಡೆಸಿಕೊಂಡಿದ್ದ ಮೊಬೈಲ್‌ನಿಂದ

ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಶಸ್ತ್ರಾಸ್ತ್ರಗಳ ತರಬೇತಿ| ಸ್ಥಳ ತನಿಖೆಗೆ ತೆರಳಲು ಮುಂದಾದ ಅಮಿತ್ ಶಾ| Read More »

ಮಹಿಳಾ ಕಾಂಗ್ರೇಸ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್‌ಗೆ ಫಿನಾಯಿಲ್ ರವಾನೆ| ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ ಫಿನಾಯಿಲ್

ಕೊಪ್ಪಳ: ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಳೀನ್ ಕುಮಾರ್ ಕಟೀಲ್‌ಗೆ ಅಂಚೆ ಮುಖಾಂತರ ಫಿನಾಯಿಲ್ ತಲುಪಿಸುವಂತೆ, ಇಂದು ಕೊಪ್ಪಳ ನಗರದ ಅಂಚೆ ಕಚೇರಿ ಮುಂಭಾಗದಲ್ಲಿ ಅರ್ಧ ಗಂಟೆ ಪ್ರತಿಭಟನಾರ್ಥ ಮೌನವಾಗಿ ಕುಳಿತು, ಸಂಸದ ನಳೀನ್ ಕುಮಾರ್‌ಗೆ ಫಿನಾಯಲ್ ಕಳಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ,

ಮಹಿಳಾ ಕಾಂಗ್ರೇಸ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್‌ಗೆ ಫಿನಾಯಿಲ್ ರವಾನೆ| ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ ಫಿನಾಯಿಲ್ Read More »

100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ – ಸಿದ್ದರಾಮಯ್ಯ ಟೀಕೆ

ಬೆಂಗಳೂರು: 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ? ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. 100 ಕೋಟಿ ಲಸಿಕೆ ವಿತರಿಸಿದ ಹಿನ್ನೆಲೆಯಲ್ಲಿ ಕೇದ್ರ ಸರ್ಕಾರ ಸಂಭ್ರಮಾಚಾರಣೆಗೆ ಮುಂದಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ – ಸಿದ್ದರಾಮಯ್ಯ ಟೀಕೆ Read More »