Editor

ರಾಜ್ಯಾದ್ಯಂತ ‌ಮುಂದಿನ ನಾಲ್ಕು ದಿನ ಭಾರೀ‌‌ ಮಳೆ ಮುನ್ಸೂಚನೆ, ಹಲವು‌ ಜಿಲ್ಲೆಗಳಲ್ಲಿ ಅಲರ್ಟ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಳೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಮಗಳೂರು. ಹಾಸನ, ಕೊಡಗು ಜಿಲ್ಲೆಗಳಲ್ಲಿ ಅ. 24 ರಿಂದ 27ರವರೆಗೆ

ರಾಜ್ಯಾದ್ಯಂತ ‌ಮುಂದಿನ ನಾಲ್ಕು ದಿನ ಭಾರೀ‌‌ ಮಳೆ ಮುನ್ಸೂಚನೆ, ಹಲವು‌ ಜಿಲ್ಲೆಗಳಲ್ಲಿ ಅಲರ್ಟ್ Read More »

ರಾಜ್ಯದಲ್ಲಿ ಅಬ್ಬರಿಸಿದ ಸ್ವಾತಿಮಳೆ| ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಸಾವು| ಅಪಾರ ಹಾನಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮವಾಗಿ ಮಳೆ ಸುರಿದಿದ್ದು ಸಿಡಿಲಿಗೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಹಳೇ ಮೈಸೂರಿನ ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಕೃಷಿಗೂ ಅಪಾರ ನಷ್ಟವಾಗಿದೆ.ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ರೈತ ಲಾಡೆನ್ಸಾಬ್‌(29), ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸಿದ್ದಪ್ಪ(40), ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿಯ ಲೋಕೇಶ್‌ ನಾಯಕ (47)ಯಲ್ಲಾಪುರ ತಾಲೂಕಿನ ಕಿರವತ್ತಿಯ ಖಾರೇವಾಡದ ಜನಾಬಾಯಿ ಕಾನು ಶೆಳಕೆ (40) ಮೃತಪಟ್ಟವರು.

ರಾಜ್ಯದಲ್ಲಿ ಅಬ್ಬರಿಸಿದ ಸ್ವಾತಿಮಳೆ| ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಸಾವು| ಅಪಾರ ಹಾನಿ Read More »

ಕ್ರಿಕೆಟ್ ಅಂಗಳದಲ್ಲಿಂದು ಇಂಡೋ ಪಾಕ್ ಕದನ| ಜಯಗಳಿಸಲು ಟೀಂ ಇಂಡಿಯಾ ‌ಮಾಸ್ಟರ್ ಪ್ಲ್ಯಾನ್

ದುಬೈ: ಟಿ20 ವಿಶ್ವಕಪ್ ನಲ್ಲಿ ಇಂಡಿಯಾ ಇಂದು ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎದಿರುಬದಿರಾದಾಗ ಸಹಜವಾಗಿಯೇ ಆಟದ ಉತ್ಸಾಹವೂ ಹೆಚ್ಚಾಗುತ್ತದೆ. ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ 5 ಬಾರಿ ಪಾಕ್ ವಿರುದ್ಧ ಸೆಣಸಾಡಿತ್ತು. ಈ ಪೈಕಿ ಐದರಲ್ಲೂ ಭಾರತ ಗೆಲುವು ಕಂಡಿದೆ. 2007 ರ ಚೊಚ್ಚಲ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲಿ ಮತ್ತು ಫೈನಲ್ ನಲ್ಲಿ ಭಾರತ-ಪಾಕ್ ಎದುರಾಗಿತ್ತು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದ್ದವು. ಮತ್ತೆ 2012

ಕ್ರಿಕೆಟ್ ಅಂಗಳದಲ್ಲಿಂದು ಇಂಡೋ ಪಾಕ್ ಕದನ| ಜಯಗಳಿಸಲು ಟೀಂ ಇಂಡಿಯಾ ‌ಮಾಸ್ಟರ್ ಪ್ಲ್ಯಾನ್ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷಾದಿ ದ್ವಾದಶ ರಾಶಿಗಳ ಈ ವಾರದ ವಾರಭವಿಷ್ಯ ಇಲ್ಲಿದೆ. ಸಮಸ್ಯೆಗಳು ಹಾಗೂ ಅದರ ಪರಿಹಾರವನ್ನು ಸೂಚಿಸಲಾಗಿದೆ. ನಿಮ್ಮ ರಾಶಿಗಳ ವಾರಭವಿಷ್ಯ ತಿಳಿದುಕೊಂಡು ಅದರಂತೆ ಮುಂದುವರೆಯಿರಿ. ಶುಭವಾಗಲಿ ಮೇಷ ರಾಶಿಉದ್ಯೋಗ ಆಕಾಂಕ್ಷಿಗಳಿಗೆ ಶುಭವಾರ್ತೆ ಕೇಳಿಬರಬಹುದು. ಆದಾಯದಲ್ಲಿ ತಕ್ಕಮಟ್ಟಿನ ಹೆಚ್ಚಳವನ್ನು ಕಂಡು ಆರ್ಥಿಕ ವಿಷಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ತ್ರೀ ವರ್ಗದವರು ಸಂತೋಷದಿಂದ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.ಅನಗತ್ಯ ಸಿಟ್ಟಿನಿಂದ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಹುದು. ಆದ್ದರಿಂದ ಶಾಂತಿ ಸಮಾಧಾನದಿಂದ ವರ್ತಿಸುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪಕಾಲ ಮುಂದೂಡುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಉತ್ತಮ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

14 ವರ್ಷಗಳ ಬಳಿಕ ಏರಿಕೆಯಾಗಲಿದೆ ಬೆಂಕಿಪೆಟ್ಟಿಗೆ ಬೆಲೆ| ಇದು ಬೆಲೆಏರಿಕೆ ಇಫೆಕ್ಟ್|

ಶಿವಕಾಶಿ: ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ ಸರದಿ. ಇದೂ ಕೂಡ ಈಗ ಬೆಲೆಏರಿಕೆಯ ಬೆಂಕಿ ಹಚ್ಚಲಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ. ಒಂದು ರೂಪಾಯಿಯಿದ್ದ ಬೆಲೆ

14 ವರ್ಷಗಳ ಬಳಿಕ ಏರಿಕೆಯಾಗಲಿದೆ ಬೆಂಕಿಪೆಟ್ಟಿಗೆ ಬೆಲೆ| ಇದು ಬೆಲೆಏರಿಕೆ ಇಫೆಕ್ಟ್| Read More »

ಪ್ರವಾಸಿಗರನ್ನು ಕಾಡಲ್ಲೇ ಬಿಟ್ಟುಬಂದ ಚಾಲಕ!

ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬದ ಹತ್ತು ಜನ ಸದಸ್ಯರನ್ನು ಅರಣ್ಯದಲ್ಲಿ ಬಿಟ್ಟು ಬಂದ ಘಟನೆ ಬಂಡಿಪುರದಲ್ಲಿ ನಡೆದಿದೆ. ಮೈಸೂರು, ಬಂಡಿಪುರ, ಮಲೈಮಹದೇಶ್ವರ ಬೆಟ್ಟ ಮತ್ತಿತರ ಸ್ಥಳಕ್ಕೆ ಪ್ರವಾಸಕ್ಕೆಂದು ಅ.18 ರಂದು ಹಾಸನದಿಂದ ಚಾಮುಂಡೇಶ್ವರಿ ಟೆಂಪೋ ಟ್ರಾವೆಲರ್‌ ಸಂಸ್ಥೆಯ ವಾಹನದಲ್ಲಿ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಬಲಮುರಿ ಜಲಪಾತಕ್ಕೆ ತೆರಳಿ ಊಟ ಮುಗಿಸಿದ ಬಳಿಕ ಚಾಲಕ ಬಂದು ವಾಹನ ಕೆಟ್ಟು ಹೋಗಿದೆ ಬೇರೆ ವಾಹನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅದರಂತೆ ಮಧ್ಯಾಹ್ನದಿಂದ ಕಾದು ಸುಸ್ತಾದ ಬಳಿಕ ರಾತ್ರಿ 7 ಗಂಟೆಯಲ್ಲಿ

ಪ್ರವಾಸಿಗರನ್ನು ಕಾಡಲ್ಲೇ ಬಿಟ್ಟುಬಂದ ಚಾಲಕ! Read More »

ಸುಳ್ಯ: ಅಂದು ಬಿಕಿನಿಯೊಂದಿಗೆ ಚೆಲ್ಲಾಟ| ಇಂದು ಹಂದಿ ಫಾರ್ಮ್ ನಿಂದ ತೊಳಲಾಟ| ತೊಡಿಕಾನ ಮಲ್ಲಿಕಾರ್ಜುನನ ಪವಿತ್ರತೆಗೆ ಸ್ಥಳೀಯರಿಂದಲೇ ಧಕ್ಕೆ| ಏನಿದು ಸ್ಟೋರಿ, ಇಲ್ಲಿದೆ ಸಂಪೂರ್ಣ ‌ಸುದ್ದಿ..

ಪುತ್ತೂರು : ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರವೊಂದಕ್ಕೆ ಹಂದಿ ಫಾರ್ಮ್ ಒಂದರಿಂದ ಅಪಚಾರವಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಗುಡಿಗೆ ಪಕ್ಕದಲ್ಲೇ ಈ ಹಂದಿ ಫಾರ್ಮ್ ಕಾರ್ಯಾಚರಿಸುತ್ತಿದ್ದು, ಇದರಿಂದಾಗಿ ದೇವಸ್ಥಾನದ ಪಾವಿತ್ಯಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಹೊಸತೋಟ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಸ್ಥಳೀಯ ವ್ಯಕ್ತಿಯೋರ್ವರು ಹಂದಿಯ ಫಾರ್ಮ್ ಆರಂಭಿಸಿದ್ದು, ಈ ಫಾರ್ಮ್ ಆರಂಭಕ್ಕೆ ಮೊದಲೇ ಸ್ಥಳೀಯರು ಆಕ್ಷೇಪ ಸಲ್ಲಿಸಿದ್ದಾರೆ. ಈ ಸಂಬಂಧ

ಸುಳ್ಯ: ಅಂದು ಬಿಕಿನಿಯೊಂದಿಗೆ ಚೆಲ್ಲಾಟ| ಇಂದು ಹಂದಿ ಫಾರ್ಮ್ ನಿಂದ ತೊಳಲಾಟ| ತೊಡಿಕಾನ ಮಲ್ಲಿಕಾರ್ಜುನನ ಪವಿತ್ರತೆಗೆ ಸ್ಥಳೀಯರಿಂದಲೇ ಧಕ್ಕೆ| ಏನಿದು ಸ್ಟೋರಿ, ಇಲ್ಲಿದೆ ಸಂಪೂರ್ಣ ‌ಸುದ್ದಿ.. Read More »

ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

ವಾಷಿಂಗ್ಟನ್: ಅಮೆರಿಕಾದಲ್ಲಿ ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಹೊಂದಿರದ ಯಾವುದೇ ಸಂಪೂರ್ಣ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕಾದ 37 ರಾಜ್ಯಗಳಲ್ಲಿ 650ಕ್ಕೂ ಹೆಚ್ಚು ಜನರು ಸಾಲ್ಮೊನೆಲ್ಲಾ ಎಂಬ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, 75% ಜನರು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಈರುಳ್ಳಿ ಬಳಸಿದ ಖಾದ್ಯ ಅಥವಾ ಹಸಿ ಈರುಳ್ಳಿಯನ್ನು ಹೊಂದಿರುವ ಭಕ್ಷ್ಯಗಳನ್ನು ಆಹಾರದ ಜೊತೆಗೆ ಸೇವಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಮೆಕ್ಸಿಕೋದ ಚಿಹುವಾದಿಂದ ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಈ ವೈರಸ್

ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು Read More »

ಧರ್ಮಸ್ಥಳ: ಅ.24ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ಅ. 24ರಂದು ರವಿವಾರ ಸರಳವಾಗಿ ನಡೆಯಲಿದೆ. ಆ ಪ್ರಯುಕ್ತ ದಿನ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಬಳಿಕ ಸಂಜೆ 5ಕ್ಕೆ ಮಹೋತ್ಸವ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್‌ ಅಭಿನಂದನ ಭಾಷಣ ಮಾಡುವರು. ಆ ಬಳಿಕ ಡಾ| ಹೆಗ್ಗಡೆಯವರು ಮುಂದಿನ ವರ್ಷದ ಹೊಸ

ಧರ್ಮಸ್ಥಳ: ಅ.24ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ Read More »

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಮಾಡಿದ ವಕೀಲ ನಿಗೂಢ ನಾಪತ್ತೆ |ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಗೆ ಗೇಟ್ ಪಾಸ್| ವಕಾಲತ್ತು ‌ಅಧಿಕಾರ ಮೊಟಕು|

ಮಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ನಾಪತ್ತೆಯಾಗಿದ್ದು, ಮಂಗಳೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರ ನಡುವೆ ವಕೀಲ ರಾಜೇಶ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ ನ್ಯಾಯಾಲಯ ಮಧ್ಯಂತರ ಜಾಮೀನನ್ನು ತಿರಸ್ಕರಿಸಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಅರೋಪಿಯನ್ನು ಪೊಲೀಸರು ಬಂಧಿಸಲು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ರಾಜೇಶ್ ಭಟ್ ಅಮಾನತುಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಅಮಾನತು ಆಗಿದ್ದಾರೆ. ಕರ್ನಾಟಕ ಸ್ಟೇಟ್

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಮಾಡಿದ ವಕೀಲ ನಿಗೂಢ ನಾಪತ್ತೆ |ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಗೆ ಗೇಟ್ ಪಾಸ್| ವಕಾಲತ್ತು ‌ಅಧಿಕಾರ ಮೊಟಕು| Read More »