Editor

ಧರ್ಮಸ್ಥಳ: ದೀಪಾವಳಿ ಬಳಿಕ ದೇವರ ದರ್ಶನದ ಸಮಯ ಬದಲು

ಧರ್ಮಸ್ಥಳ: ದೀಪಾವಳಿ (ನ. 4)ರ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷಪೂಜೆ, ಉತ್ಸವಾದಿ ಸೇವೆಗಳು ಆರಂಭವಾಗಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ. ಬೆಳಗ್ಗೆ 6ರಿಂದ ಅಪರಾಹ್ನ 2.30, ಸಂಜೆ 5ರಿಂದ ರಾತ್ರಿ 8.30ರ ವರೆಗೆ (ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸವಾಗುವ ಸಾಧ್ಯತೆಯಿದೆ). ಅನ್ನಪೂರ್ಣ ಛತ್ರದಲ್ಲಿ ಬೆಳಗ್ಗೆ 10.30ರಿಂದ 3 ಹಾಗೂ ರಾತ್ರಿ 7ರಿಂದ

ಧರ್ಮಸ್ಥಳ: ದೀಪಾವಳಿ ಬಳಿಕ ದೇವರ ದರ್ಶನದ ಸಮಯ ಬದಲು Read More »

ಕನ್ನಡ ರಾಜ್ಯೋತ್ಸವ ಹಿನ್ನೆಲೆ| ಇಂದು ಲಕ್ಷ ಕಂಠಗಳ ಗೀತಗಾಯನ| ಕಂಡು ಕೇಳರಿಯದ ಗಳಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ|

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ. ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ 28 ರಂದು ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು

ಕನ್ನಡ ರಾಜ್ಯೋತ್ಸವ ಹಿನ್ನೆಲೆ| ಇಂದು ಲಕ್ಷ ಕಂಠಗಳ ಗೀತಗಾಯನ| ಕಂಡು ಕೇಳರಿಯದ ಗಳಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ| Read More »

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ|

ಮಂಗಳೂರು: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಪುತ್ತೂರು‌ ತಾಲೂಕಿನ ಬಡಗನ್ನೂರು ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಸಂಘಪರಿವಾರದ ಮುಖಂಡ, ಸುಳ್ಯಪದವು ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿ ನಾರಾಯಣ ರೈ ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತನ್ನ ರಾಜಕೀಯ ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಈ ನಡುವೆ ಸಂತ್ರಸ್ತೆ ಸೆ.5ರಂದು ಮಗುವಿಗೆ

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ| Read More »

ನಾಳೆಯಿಂದ ನಮ್ಮ ಆಟವೆಂದರೆ‌ ಹಣ ಹಂಚುವುದೇ ಸೋಮಣ್ಣನವರೇ?- ಎಚ್.ಡಿ ಕುಮಾರಸ್ವಾಮಿ ತರಾಟೆ

ವಿಜಯಪುರ: ಇವತ್ತು ಸಾಯಂಕಾಲದ ತನಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಂಧಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ ಎಂದು ಉಪ ಚುನಾವಣೆ ಬಹಿರಂಗ ಪ್ರಚಾರದ ಅಂತ್ಯವಾಗುವುದಕ್ಕೆ ಮೊದಲು ಹೇಳಿಕೆ ನೀಡಿರುವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು; “ನಾಳೆಯಿಂದ ನಮ್ಮ ಆಟ ಆರಂಭ ಎಂದರೆ ಅರ್ಥವೇನು? ಆಟ ಎಂದರೆ ದುಡ್ಡು ಹಂಚುವುದಾ?” ಎಂದು ಪ್ರಶ್ನಿಸಿದರು. ನಿಮ್ಮ ಆಟವನ್ನು ಬರೀ ಚುನಾವಣೆಗಷ್ಟೇ ಸೀಮಿತ

ನಾಳೆಯಿಂದ ನಮ್ಮ ಆಟವೆಂದರೆ‌ ಹಣ ಹಂಚುವುದೇ ಸೋಮಣ್ಣನವರೇ?- ಎಚ್.ಡಿ ಕುಮಾರಸ್ವಾಮಿ ತರಾಟೆ Read More »

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಿದೆ. ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ Read More »

ನಂದಿನಿ ಉತ್ಪನ್ನಗಳನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ‌ ಮಾಡಿದರೆ ಡೀಲರ್ ಶಿಪ್ ರದ್ದು – ಕೆಎಂಎಫ್ ಆದೇಶ

ಮಂಗಳೂರು: ನಂದಿನಿ ಹಾಲಿನ ಡೀಲರುಗಳು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಡೀಲರ್‌ಶಿಪ್ ರದ್ದು ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕರು ಆದೇಸಿಸಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಒಕ್ಕೂಟದೊಂದಿಗೆ ಮಾಡಿಕೊಂಡ ಕರಾರು ಒಪ್ಪಂದದ ಉಲ್ಲಂಘನೆಯಾಗುತ್ತದೆ. ಆದುದರಿಂದ ಕಾನೂನು ಮಾಪನ ಶಾಸ್ತ್ರದ ನಿಯಮದಂತೆ ಗ್ರಾಹಕರಿಗೆ ನಂದಿನಿ ಹಾಲು ಮತ್ತು

ನಂದಿನಿ ಉತ್ಪನ್ನಗಳನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ‌ ಮಾಡಿದರೆ ಡೀಲರ್ ಶಿಪ್ ರದ್ದು – ಕೆಎಂಎಫ್ ಆದೇಶ Read More »

ಮಂಗಳೂರು: ಫ್ಲೈಓವರ್‌ನಿಂದ ಕೆಳಗೆ ಬಿದ್ದ ಬೈಕ್| ಸವಾರ ಸಾವು

ಮಂಗಳೂರು: ಫ್ಲೈಓವರ್ ನಿಂದ ಕೆಳಕ್ಕೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ. ಮೃತರನ್ನು ಕುಂಪಲ ಸರಳಾಯಕಾಲನಿ ನಿವಾಸಿ, ಕುಂಪಲ ಯುವ ಮರಾಠದ ಮಾಜಿ ಅಧ್ಯಕ್ಷರಾಗಿದ್ದ ಸುಭ್ರಹ್ಮಣ್ಯ ರಾವ್ ಸಿಂದಿಯಾ (50) ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್‌ಗೆ ಢಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದು ಗಂಭೀರ

ಮಂಗಳೂರು: ಫ್ಲೈಓವರ್‌ನಿಂದ ಕೆಳಗೆ ಬಿದ್ದ ಬೈಕ್| ಸವಾರ ಸಾವು Read More »

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣ| ಪೇಸ್‌ಬುಕ್ ಪೋಸ್ಟ್ ನಿಂದ‌ ಉಂಟಾದ ವಿವಾದ ಕತ್ತಿಯ ಅಂಚಿನವರೆಗೆ..!

ಬಂಟ್ವಾಳ: ಬಿಜೆಪಿ ಮುಖಂಡನ ಮೇಲೆ ಭಜರಂಗದಳ ಕಾರ್ಯಕರ್ತರಿಂದಲೇ ತಲವಾರು ದಾಳಿ ನಡೆಸಿ ಕೊಲೆ ಯತ್ನ‌ ನಡೆದ ಘಟನೆ ಅ26ರ ತಡ ರಾತ್ರಿ ಬಂಟ್ವಾಳದಲ್ಲಿ ನಡೆದಿದ್ದು, ಘಟನೆಗೆ ಪೇಸ್ ಬುಕ್ ನಲ್ಲಿ ಉಂಟಾದ ವಿವಾದವೇ ಕಾರಣ ಎನ್ನಲಾಗಿದೆ. ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಹಲ್ಲೆಗೆ ಒಳಗಾಗಿದ್ದು, ಇವರ ಮೇಲೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ತಲವಾರು

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣ| ಪೇಸ್‌ಬುಕ್ ಪೋಸ್ಟ್ ನಿಂದ‌ ಉಂಟಾದ ವಿವಾದ ಕತ್ತಿಯ ಅಂಚಿನವರೆಗೆ..! Read More »

ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್ 2ನೇ ಡೋಸ್ ಲಸಿಕೆ| ಆರೋಗ್ಯ ಇಲಾಖೆಯ ಎಡವಟ್ಟು|

ಪುತ್ತೂರು : ಆರು ತಿಂಗಳ ಹಿಂದೆ ಮೃತಪಟ್ಟಿರುವ ವ್ಯಕ್ತಿಯೊಬ್ಬರಿಗೆ ಇದೀಗ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿರುವ ಕುರಿತಂತೆ ಎಸ್ಎಂಎಸ್ ಬಂದಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬವರು ಏಪ್ರಿಲ್ 27ರಂದು ಮೃತಪಟ್ಟಿದ್ದಾರೆ. ಆದರೆ ಅಕ್ಟೋಬರ್ 14ರಂದು ಅವರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ ಎಂದು ಮೃತ ಹಸೈನಾರ್ ಅವರ ಪುತ್ರ ಸಾದಿಕ್ ಆರೋಪಿಸಿದ್ದಾರೆ. ಹಸೈನಾರ್ ಅವರಿಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ

ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್ 2ನೇ ಡೋಸ್ ಲಸಿಕೆ| ಆರೋಗ್ಯ ಇಲಾಖೆಯ ಎಡವಟ್ಟು| Read More »

ಶಿಕ್ಷಣ ನೀತಿಗೆ ಬೇಸತ್ತು ಯುವಕ‌ ಆತ್ಮಹತ್ಯೆ| ಸಾಯುವ ಮುನ್ನ ವ್ಯವಸ್ಥೆ ಬದಲಾಗಲೆಂದು ವಿಡಿಯೋ ಮಾಡಿಟ್ಟ ದುರ್ದೈವಿ

ಹಾಸನ: ಶಿಕ್ಷಣ ನೀತಿಯಿಂದ ಬೇಸತ್ತು, ಶಿಕ್ಷಣ ವ್ಯವಸ್ಥೆ ಬದಲಾಗಲಿ, ನನ್ನ ಬಲಿದಾನ ಬದಲಾವಣೆಗೆ ದಾರಿದೀಪವಾಗಲಿ’ ಎನ್ನುತ್ತಾ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ. ಶಿಕ್ಷಣ ವ್ಯವಸ್ಥೆ ಬದಲಾಗದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಸಾಯುವ ಮುನ್ನ ವೀಡಿಯೋ ಮಾಡಿರುವ ಹೇಮಂತ್‌ ಎಂಬ ವಿದ್ಯಾರ್ಥಿ, ಮುಖ್ಯಮಂತ್ರಿಗಳು, ಶಿಕ್ಷಣ ಇಲಾಖೆ, ವಿಟಿಯು ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದ ನಿವಾಸಿಯಾಗಿದ್ದ ಹೇಮಂತ್‌ ಹಾಸನದ ಖಾಸಗಿ ತಾಂತ್ರಿಕ

ಶಿಕ್ಷಣ ನೀತಿಗೆ ಬೇಸತ್ತು ಯುವಕ‌ ಆತ್ಮಹತ್ಯೆ| ಸಾಯುವ ಮುನ್ನ ವ್ಯವಸ್ಥೆ ಬದಲಾಗಲೆಂದು ವಿಡಿಯೋ ಮಾಡಿಟ್ಟ ದುರ್ದೈವಿ Read More »