Editor

ಮಂಗಳೂರು ವಿ.ವಿ ಯ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ‌ನೀತಿ ಜಾರಿ| ಅನುಷ್ಟಾನಗೊಂಡ ಬೋಧನಾ ಪಠ್ಯಕ್ರಮ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ರೂಪಿಸಿರುವ ಪಠ್ಯಕ್ರಮ ಬೋಧನೆ ಸೋಮವಾರದಿಂದ ಅನುಷ್ಠಾನಗೊಂಡಿದೆ. ಶೈಕ್ಷಣಿಕ ವರ್ಷ ಆರಂಭದ ಮೊದಲ ದಿನ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಲ್ಲಿ ಶೇ 85ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇ 75ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಎನ್‌ಇಪಿ ಹೊಸದಾಗಿ ಅನುಷ್ಠಾನಗೊಂಡಿರುವ ಕಾರಣ ಕಾಲೇಜುಗಳ ಪ್ರಮುಖರಿಗೆ ಅನುಮಾನಗಳಿದ್ದಲ್ಲಿ ಬಗೆಹರಿಸಲು, ಇಬ್ಬರು ಪ್ರಾಧ್ಯಾಪಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ

ಮಂಗಳೂರು ವಿ.ವಿ ಯ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ‌ನೀತಿ ಜಾರಿ| ಅನುಷ್ಟಾನಗೊಂಡ ಬೋಧನಾ ಪಠ್ಯಕ್ರಮ Read More »

“ಕರಾವಳಿ ಫೈರ್ ಬ್ರಾಂಡ್” ಅನಂತ ಕುಮಾರ್ ಹೆಗಡೆಗೆ ಒಲಿಯುತ್ತಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ?| ಅರವಿಂದ ಲಿಂಬಾವಳಿ ಹೆಸರೂ ಮಂಚೂಣಿಯಲ್ಲಿ..!

ಬೆಂಗಳೂರು: ಹಾನಗಲ್ ಉಪ ಚುನಾವಣೆಯ ಸೋಲಿನ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಈ ಸೋಲು ರಾಜ್ಯ ಬಿಜೆಪಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇಂದು (ನ.9) ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ನೂತನವಾಗಿಬಿಜೆಪಿಯಿಂದ ಅಧ್ಯಕ್ಷರಾಗಿ ಆಯ್ಕೆಯಾಗಬಹುದಾದ ಹೆಸರುಗಳಲ್ಲಿ ಉತ್ತರ

“ಕರಾವಳಿ ಫೈರ್ ಬ್ರಾಂಡ್” ಅನಂತ ಕುಮಾರ್ ಹೆಗಡೆಗೆ ಒಲಿಯುತ್ತಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ?| ಅರವಿಂದ ಲಿಂಬಾವಳಿ ಹೆಸರೂ ಮಂಚೂಣಿಯಲ್ಲಿ..! Read More »

ಖ್ಯಾತ ಹೃದ್ರೋಗ ತಜ್ಞ‌ ಡಾ| ಬಿ.ಎಂ ಹೆಗ್ಡೆಗೆ ಇಂದು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಮಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ| ಬೆಳ್ಳೆ ಮೋನಪ್ಪ ಹೆಗ್ಡೆ (ಡಾ| ಬಿ. ಎಂ. ಹೆಗ್ಡೆ) ಅವರಿಗೆ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ| ಬಿ.ಎಂ.ಹೆಗ್ಡೆಯವರಿಗೆ ಈ ವರ್ಷದ ಜನವರಿಯಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಅವರು ಹೊಸದಿಲ್ಲಿಗೆ ತೆರಳಿದ್ದು ಇಂದು ರಾಷ್ಟ್ರಪತಿ ರಾಮಾನಾಥ ಕೋವಿಂದ್‌ ಅವರಿಂದ ಪ್ರಶಸ್ತಿ ಸ್ವೀಕರಿಸುವರು. ಅವರಿಗೆ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದ ಡಾ| ಬಿ. ಎಂ. ಹೆಗ್ಡೆಯವರು ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ

ಖ್ಯಾತ ಹೃದ್ರೋಗ ತಜ್ಞ‌ ಡಾ| ಬಿ.ಎಂ ಹೆಗ್ಡೆಗೆ ಇಂದು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ Read More »

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ|

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕೇಂದ್ರಗಳಲ್ಲಿ 5000ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 19 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಹಲವು ಕಡೆ ಭಾರಿ ಮಳೆ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪುದುಚೇರಿ,

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ| Read More »

ಗ್ರಾಹಕರಿಗೆ ಅಗ್ಗದ ದರದಲ್ಲಿ ಮರಳು ಒದಗಿಸಲು ಕ್ರಮ| ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಸ್ತು|

ಬೆಂಗಳೂರು: ಗ್ರಾಹಕರಿಗೆ ಅತ್ಯಂತ ಅಗ್ಗದ ದರದಲ್ಲಿ ಹಾಗೂ ಸುಲಭವಾಗಿ ಮರಳು ಒದಗಿಸಲು ರಾಜ್ಯ ಸರಕಾರ ‘ನೂತನ ಮರಳು ನೀತಿ’ಯನ್ನು ಜಾರಿಗೊಳಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಮಾಡಿದೆ. ಸೋಮವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಿದ್ದು, ಕನಿಷ್ಠಪಕ್ಷ ಒಂದು ಲಾರಿ ಲೋಡ್ ಮರಳು 10ಸಾವಿರ ರೂ.ಗಳಿಂದ 12ಸಾವಿರ ರೂ.ಗಳಿಗೆ ದೊರಕಿಸಿಕೊಡಲು ಉದ್ದೇಶಿಸಿದ್ದು, ಮರಳು ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ತರಲು ಮುಂದಾಗಿದೆ ಎಂದು ಕಾನೂನು

ಗ್ರಾಹಕರಿಗೆ ಅಗ್ಗದ ದರದಲ್ಲಿ ಮರಳು ಒದಗಿಸಲು ಕ್ರಮ| ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಸ್ತು| Read More »

ಬೆಂಗಳೂರಿನ ಯುವಕ ಮಂಗಳೂರಿನಲ್ಲಿ ಸಮುದ್ರಪಾಲು| ಪ್ರವಾಸಕ್ಕೆ ಬಂದು ದುರಂತ

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ತಂಡವೊಂದರಲ್ಲಿದ್ದ 20 ವರ್ಷದ ಯುವಕ ಸಮುದ್ರಪಾಲಾದ ಘಟನೆ ಪಣಂಬೂರು ಸಮುದ್ರ ತೀರದಲ್ಲಿ ನಡೆದಿದೆ. ದಿನೇಶ್ ಎಂಬ 20 ವರ್ಷದ ಯುವಕ ಸಮುದ್ರಪಾಲಾದ ವ್ಯಕ್ತಿ. ದೀಪಕ್, ಶ್ರೀನಿವಾಸ, ಪ್ರಶಾಂತ್ ಸುನೀಲ್, ಸುದೀಪ್, ಪ್ರಜ್ವಲ್, ದಿನೇಶ, ಸೀನಾ ಎಂಬ 8 ಮಂದಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಕಾರು ಮಾಡಿಕೊಂಡು ಮಂಗಳೂರು ಪ್ರವಾಸಕ್ಕೆ ಬಂದಿದ್ದರು. ಇವರು ಇಂದು ಮಧ್ಯಾಹ್ನ ಪಣಂಬೂರು ಬೀಚ್ ತಲುಪಿದ್ದು ಇಲ್ಲಿ ಮೋಜು ಮಾಡುತ್ತಿದ್ದ ವೇಳೆ ದಿನೇಶ್ ಸಮುದ್ರದಲ್ಲಿ ಬಂದ

ಬೆಂಗಳೂರಿನ ಯುವಕ ಮಂಗಳೂರಿನಲ್ಲಿ ಸಮುದ್ರಪಾಲು| ಪ್ರವಾಸಕ್ಕೆ ಬಂದು ದುರಂತ Read More »

ಉಡುಪಿ: ಡ್ರಗ್ಸ್ ಪ್ರಕರಣ ಹಿನ್ನಲೆ| ಭೀಮಾ ಜ್ಯುವೆಲ್ಲರಿ ಮಾಲೀಕನ ಪುತ್ರ ಅರೆಸ್ಟ್|

ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಭೀಮಾ ಜ್ಯುವೆಲ್ಲರಿ ಮಾಲಕನ ಪುತ್ರ ವಿಷ್ಣು ಭಟ್‌ ಮತ್ತು ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಘಟನೆ ವೇಳೆ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಇದೀಗ ಈ ಹಿನ್ನೆಲೆಯಲ್ಲಿ ಇಬ್ಬರೂ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿಗಳು ಡ್ರಗ್‌ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ ಪೊಲೀಸರು ಭಾನುವಾರ ಆರೋಪಿ ವಿಷ್ಣು ಭಟ್‌ನ ಇಂದಿರಾನಗರ ನಿವಾಸದ ಮೇಲೆ ದಾಳಿ ಮಾಡಿದರು. ಈ ವೇಳೆ ಆತನ ಕೊಠಡಿಯಲ್ಲಿ ಐದು ಗಾಂಜಾ ತುಂಬಿದ

ಉಡುಪಿ: ಡ್ರಗ್ಸ್ ಪ್ರಕರಣ ಹಿನ್ನಲೆ| ಭೀಮಾ ಜ್ಯುವೆಲ್ಲರಿ ಮಾಲೀಕನ ಪುತ್ರ ಅರೆಸ್ಟ್| Read More »

‘ಮುಂಬೈ ಕರ್ನಾಟಕ’ ಇನ್ಮುಂದೆ ‘ಕಿತ್ತೂರು ಕರ್ನಾಟಕ’ | ಸಚಿವ ಸಂಪುಟ ಸಭೆಯಲ್ಲಿ ಹೆಸರು ಬದಲಾವಣೆಗೆ ಒಪ್ಪಿಗೆ|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಪ್ರಸ್ತಾವನೆಗೆ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತ್ರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದಂತ ಸಚಿವ ಜೆಸಿ ಮಾಧುಸ್ವಾಮಿಯವರು, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ಕಿತ್ತೂರು ಕರ್ನಾಟಕ ಪ್ರದೇಶ ಎಂದು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಿಬ್ಬಂದಿ

‘ಮುಂಬೈ ಕರ್ನಾಟಕ’ ಇನ್ಮುಂದೆ ‘ಕಿತ್ತೂರು ಕರ್ನಾಟಕ’ | ಸಚಿವ ಸಂಪುಟ ಸಭೆಯಲ್ಲಿ ಹೆಸರು ಬದಲಾವಣೆಗೆ ಒಪ್ಪಿಗೆ| Read More »

‘ನಾನೊಬ್ಬ ಸಲಿಂಗಿ, ಆದರೆ ಅದಕ್ಕೇನೂ ತೊಂದರೆ ಇಲ್ಲ’ – ನಿಶ್ಚಿತಾರ್ಥವಾಗಬೇಕಿದ್ದ ಯುವತಿಗೆ ಮೆಸೇಜ್ ಹಾಕಿದ್ದ ಯುವಕ ಈಗ ಪೊಲೀಸ್ ಅತಿಥಿ..!

ಮಂಗಳೂರು: ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಯುವ ಜೋಡಿಯೊಂದರ ನಡುವೆ ಮದುವೆಗೆ ಮುನ್ನವೇ ಬಿರುಕು ಬಿಟ್ಟಿದ್ದು, ಯುವಕನ ಹುಚ್ಚಾಟವೇ ಆತನನ್ನು ಪೊಲೀಸ್ ಠಾಣೆ ಏರುವಂತೆ ಮಾಡಿದೆ. ಯುವತಿಯರಿಗೆ ಮದುವೆ ಬಗ್ಗೆ, ಮದುವೆ ನಂತರದ ಸಾಂಸಾರಿಕ ಜೀವನದ ಬಗ್ಗೆ ಆಕಾಂಕ್ಷೆಗಳಿರುತ್ತವೆ. ಆದರೆ ಹೆಚ್ಚಿನ ಯುವಕರು ಸಾಂಸಾರಿಕವಾಗಿ ತಲೆಕೆಡಿಸಿಕೊಳ್ಳೋದು‌ ಕಡಿಮೆ. ಅವರಿಗೆ ಅತಿಯಾದ ಲೈಂಗಿಕ ಬಯಕೆ ಈಡೇರಿಸಿಕೊಳ್ಳುವ ತವಕವೇ ಹೆಚ್ಚು. ಅದಕ್ಕಾಗಿ ಮದುವೆ ನಿಶ್ಚಿತಾರ್ಥ ಆದಕೂಡಲೇ ಯುವತಿಯ ಜೊತೆಗೆ ಹೊರಗೆ ತಿರುಗಾಡಲು ಬಯಸುತ್ತಾರೆ. ಇದೆಲ್ಲ ಈಗಿನ ಸಂದರ್ಭದಲ್ಲಿ ಸಹಜವೇ. ಆದರೆ, ಇಲ್ಲೊಬ್ಬ ಯುವಕ,

‘ನಾನೊಬ್ಬ ಸಲಿಂಗಿ, ಆದರೆ ಅದಕ್ಕೇನೂ ತೊಂದರೆ ಇಲ್ಲ’ – ನಿಶ್ಚಿತಾರ್ಥವಾಗಬೇಕಿದ್ದ ಯುವತಿಗೆ ಮೆಸೇಜ್ ಹಾಕಿದ್ದ ಯುವಕ ಈಗ ಪೊಲೀಸ್ ಅತಿಥಿ..! Read More »

ವಾಯುಭಾರ ಕುಸಿತ| ನ.11ರ ವರೆಗೆ ದಕ್ಷಿಣ ಭಾರತದಲ್ಲಿ ಭಾರೀ‌ ಮಳೆ ಸಂಭವ| ಕರ್ನಾಟಕ ಸೇರಿ‌ 5 ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ|

ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪುದುಚೆರಿಯಲ್ಲಿ ನವೆಂಬರ್ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗಲಿದ್ದು, ತಮಿಳುನಾಡು, ಮಹಾರಾಷ್ಟ್ರ, ಪುದುಚೆರಿ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ನವೆಂಬರ್ 11ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ನವೆಂಬರ್ 10ರಿಂದ 11ರ ಅವಧಿಯಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು

ವಾಯುಭಾರ ಕುಸಿತ| ನ.11ರ ವರೆಗೆ ದಕ್ಷಿಣ ಭಾರತದಲ್ಲಿ ಭಾರೀ‌ ಮಳೆ ಸಂಭವ| ಕರ್ನಾಟಕ ಸೇರಿ‌ 5 ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ| Read More »