Editor

ಪಾಕಿಸ್ತಾನ ಸಂಸತ್ ದಿಢೀರ್ ವಿಸರ್ಜನೆ| ಮೂರು ತಿಂಗಳಲ್ಲಿ ಮರು ಚುನಾವಣೆಗೆ ಸೂಚನೆ

ಸಮಗ್ರ ನ್ಯೂಸ್: ಪಾಕಿಸ್ತಾನ ಸಂಸತ್ ಅನ್ನು ಪಾಕಿಸ್ತಾನ ಅಧ್ಯಕ್ಷರು ವಿಸರ್ಜಿಸಿದ್ದು ಮೂರು ತಿಂಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಇಂದು ಅಧ್ಯಕ್ಷ ಆರಿಫ್ ಅಲ್ವಿ ಅವರನ್ನು ಭೇಟಿ ಮಾಡಿ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದು, ಪ್ರಧಾನಿ ಸಲಹೆಯ ಮೇರೆಗೆ ಪಾಕಿಸ್ತಾನದ ಅಧ್ಯಕ್ಷರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದಾರೆ. 90 ದಿನಗಳಲ್ಲಿ ಚುನಾವಣೆ ನಡೆಸಿ ಸರ್ಕಾರ ರಚನೆಗೆ ಸೂಚನೆ ನೀಡಿದ್ದಾರೆ. ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ, ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ವಿಪಕ್ಷ

ಪಾಕಿಸ್ತಾನ ಸಂಸತ್ ದಿಢೀರ್ ವಿಸರ್ಜನೆ| ಮೂರು ತಿಂಗಳಲ್ಲಿ ಮರು ಚುನಾವಣೆಗೆ ಸೂಚನೆ Read More »

ಕುಕ್ಕೆ ಸುಬ್ರಹ್ಮಣ್ಯ: ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ನಿವೃತ್ತ ಎಎಸ್ಐ ಸಾವು

ಸಮಗ್ರ ನ್ಯೂಸ್: ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ನಿವೃತ್ತ ಎಎಸ್ಐ ಎ. ಪೆರ್ಗಡೆ ಗೌಡ ಎಂಬವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದ ಬಳಿಯಲ್ಲಿ ನಡೆದಿದೆ. ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಮಾರು ದೂರ ಅವರನ್ನು ಎಳೆದುಕೊಂಡು ಹೋಗಿದ್ದು, ತಲೆಗೆ ಗಾಯವಾಗಿದ್ದು ದೇಹದ ಹಲವು ಭಾಗಗಳಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಯಿತಾದರೂ‌ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ: ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ನಿವೃತ್ತ ಎಎಸ್ಐ ಸಾವು Read More »

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ|

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು , ಇಂದು ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ . ಭಾನುವಾರ ಅಂದರೆ ಏಪ್ರಿಲ್ 03 , 2022 ರಂದು ಪ್ರತಿ ಲೀಟರ್ ಪೆಟ್ರೋಲ್ , ಡೀಸೆಲ್ ಬೆಲೆ ಲೀಟರ್ ಗೆ ತಲಾ 80 ಪೈಸೆ ಹೆಚ್ಚಳವಾಗಿದೆ . ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕ್ರಮವಾಗಿ ಪ್ರತಿ ಲೀಟರ್ಗೆ 80 ಪೈಸೆ ಏರಿಕೆಯಾಗಿದ್ದು , ಪೆಟ್ರೋಲ್ ಲೀಟರ್ ಗೆ 103.41

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ| Read More »

ಉಟ್ಟ ಸೀರೆ ಬಿಚ್ಚಿ ರೈಲು ಪ್ರಯಾಣಿಕರ ಜೀವ ಉಳಿಸಿದ ಮಹಿಳೆ| ಮಹಿಳೆಗೆ 100 ರೂಪಾಯಿ ಕೊಟ್ಟ ರೈಲು ಚಾಲಕ!

ಸಮಗ್ರ ನ್ಯೂಸ್: ಹಳಿಗಳು ಮುರಿದು ಬಿದ್ದಿದ್ದರಿಂದ ಸಂಭವಿಸಲಿದ್ದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲು ಉತ್ತರಪ್ರದೇಶದ ಎಟಾಹ್ ಜಿಲ್ಲೆಯ ಗ್ರಾಮದ ಮಹಿಳೆಯೊಬ್ಬರು ತನ್ನ ಕೆಂಪು ಸೀರೆಯನ್ನು ಹಾರಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ 20 ಕಿಮೀ ದೂರದಲ್ಲಿರುವ ಕುಸ್ಬಾ ರೈಲು ನಿಲ್ದಾಣದ ಬಳಿ ಗುರುವಾರ ಈ ಘಟನೆ ನಡೆದಿದೆ. ತಮ್ಮ ಸರಿಯಾದ ಸಮಯದ ಸರಿಯಾದ ನಡೆಯಿಂದ ಹಲವಾರು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಇಟಾಹ್ ಜಿಲ್ಲೆಯ ಅವಘರ್ ಬ್ಲಾಕ್‌ನ ಗುಲೇರಿಯಾ ಗ್ರಾಮದ ಓಮಾವತಿ (65) ಹೊಲಗಳಿಗೆ ಹೋಗುತ್ತಿದ್ದಾಗ ರೈಲ್ವೆ ಹಳಿಯಲ್ಲಿ ದೊಡ್ಡ ಬಿರುಕು

ಉಟ್ಟ ಸೀರೆ ಬಿಚ್ಚಿ ರೈಲು ಪ್ರಯಾಣಿಕರ ಜೀವ ಉಳಿಸಿದ ಮಹಿಳೆ| ಮಹಿಳೆಗೆ 100 ರೂಪಾಯಿ ಕೊಟ್ಟ ರೈಲು ಚಾಲಕ! Read More »

ದ್ವಾದಶ ರಾಶಿಗಳಿಗೆ ವಾರಭವಿಷ್ಯ

ಸಮಗ್ರ ನ್ಯೂಸ್: ಹೊಸ ಸಂವತ್ಸರಾರಂಭದ ಮೊದಲ ವಾರದಲ್ಲಿ ನಾವಿದ್ದೇವೆ. ಯುಗಾದಿಯ ಆದಿಯಲ್ಲಿ ದ್ವಾದಶ ರಾಶಿಗಳ ಮೇಲೆ ಗ್ರಹಾಧಿಪತಿಗಳ ಪರಿಣಾಮ ಮತ್ತು ಗೋಚಾರಫಲ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ. ಮೇಷ: ರಾಶಿಯಿಂದ ಮೀನ ರಾಶಿಯವರಿಗೆ ಈ ಸಂವತ್ಸರದಲ್ಲಿ ಶನಿಯು ರಾಜನು ಹಾಗೂ ಗುರುವೇ ಮಂತ್ರಿ ಆಗಿರುತ್ತಾನೆ. ಏಕಾದಶಕ್ಕೆ ಶನಿಯು ಬಂದು ಜೀವನದಲ್ಲಿ ಸುಖ ಸಂತೋಷ ಆನಂದ ಬಂದು ಸೇರುತ್ತದೆ.ನಿರೀಕ್ಷಿಸಿದ ಧನವೂ ಬಂದು ಕೂಡುತ್ತದೆ. ಭಕ್ತಿಯೊಂದೇ ಮನುಷ್ಯನ ಶ್ರೇಯಸ್ಸಿಗೆ ಕಾರಣವು. ಮಾತಾಪಿತರಿಗೆ ವಂದಿಸಿ ಪ್ರತಿ ವಾರದಲ್ಲಿ ಶನಿಯನ್ನು ಪೂಜಿಸಿದರೆ

ದ್ವಾದಶ ರಾಶಿಗಳಿಗೆ ವಾರಭವಿಷ್ಯ Read More »

ಹರ್ಷ ಕೊಲೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ – ಎನ್ಐಎ

ಸಮಗ್ರ ನ್ಯೂಸ್ : ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ವರದಿ ನೀಡಿದ್ದು, ಹರ್ಷ ಕೊಲೆ ಹಿಂದೆ ಕೋಮು ಗಲಭೆಯ ಹುನ್ನಾರವಿತ್ತು ಎಂದು ತಿಳಿಸಿದೆ. ಹರ್ಷ ಹತ್ಯೆ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಉದ್ದೇಶ ಅಡಗಿತ್ತು. ಈ ಮೂಲಕ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿತ್ತು ಎಂದು ಎನ್ ಐ ಎ ವರದಿಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದೆ. ಹರ್ಷ ಹತ್ಯೆ ನಡೆದಿರುವುದು

ಹರ್ಷ ಕೊಲೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ – ಎನ್ಐಎ Read More »

ಚಂದ್ರದರ್ಶನ ಹಿನ್ನಲೆ; ನಾಳೆಯಿಂದ ಪವಿತ್ರ ರಂಜಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್: ನಾಳೆಯಿಂದ ಮುಸ್ಲಿಂ ಭಾಂಧವರ ಪವಿತ್ರ ರಂಝಾನ್ ತಿಂಗಳು ಆರಂಭವಾಗಲಿದ್ದು, ಉಪವಾಸ ಆಚರಣೆಗೆ ಸಂಬಂಧಿಸಿದಂತೆ ಹಿಲಾಲ್ ಸಮಿತಿ ಕರೆನೀಡಿದೆ. ಇಂದು ರಂಜಾನ್ ಚಂದ್ರದರ್ಶನವಾದ ಕಾರಣ ಬೆಂಗಳೂರು, ದ.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರವಿವಾರದಿಂದ (ಎ.3) ಉಪವಾಸ ಆಚರಣೆ ಮಾಡಲು ಹಿಲಾಲ್ ಸಮಿತಿ ಕರೆ ನೀಡಿದೆ. ಇಂದು ರಾತ್ರಿಯಿಂದಲೇ ತಾರಾವೀಹ್ ನಮಾಜ್ ಮಾಡುವಂತೆಯೂ ತಿಳಿಸಲಾಗಿದೆ.

ಚಂದ್ರದರ್ಶನ ಹಿನ್ನಲೆ; ನಾಳೆಯಿಂದ ಪವಿತ್ರ ರಂಜಾನ್ ಉಪವಾಸ ಆರಂಭ Read More »

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ

ಸಮಗ್ರ ನ್ಯೂಸ್: ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟು ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಗಂಗೊಳ್ಳಿಯಿಂದ ಸುಮಾರು 20 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಸಂಭವಿಸಿದ್ದು ಅದರಲ್ಲಿದ್ದ ಐದು ಮೀನುಗಾರರನ್ನು ರಕ್ಷಿಸಲಾಗಿದೆ. ಬೋಟಿನಲ್ಲಿದ್ದ ಮೀನುಗಾರರಾದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜರಕ್ಷಾ ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿ, ದಡಕ್ಕೆ ಕರೆತಂದಿದ್ದಾರೆ. ಉದ್ಯಾವರ

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ Read More »

ಪ್ರೇಯಸಿಯ ಬಂಧಮುಕ್ತಗೊಳಿಸಿ ವಿವಾಹವಾದ ಪ್ರಿಯಕರ| ಹಿಟ್ ಸಿನಿಮಾವನ್ನೇ ಮೀರಿಸುವ ಲವ್ ಸ್ಟೋರಿ|

ಸಮಗ್ರ ನ್ಯೂಸ್: ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿರುವ ಜೋಡಿಗೆ ಹುಡುಗಿಯ ಪೋಷಕರಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ಕೋರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ‌ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದ ಯುವಕ ಯೋಗನಾಂದ್, ಕಬ್ಳಿ ಪಕ್ಕದ ಜಿ ಕೊಪ್ಪಲು ಗ್ರಾಮದ ಯುವತಿ ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಈ ಸಂದರ್ಭದಲ್ಲಿ ಯೋಗಾನಂದ್, ಯುವತಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು

ಪ್ರೇಯಸಿಯ ಬಂಧಮುಕ್ತಗೊಳಿಸಿ ವಿವಾಹವಾದ ಪ್ರಿಯಕರ| ಹಿಟ್ ಸಿನಿಮಾವನ್ನೇ ಮೀರಿಸುವ ಲವ್ ಸ್ಟೋರಿ| Read More »

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ

ಯುಗಾದಿ ಎಂದೂ ಕರೆಯಲ್ಪಡುವ ಉಗಾದಿಯನ್ನು ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭದ ಮೊದಲ ದಿನದಂದು ಆಚರಿಸಲಾಗುತ್ತದೆ. ಯುಗಾದಿಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಹೂವಿನ ಮಾದರಿಗಳಿಂದ ಹಿಡಿದು ರಾಜ್ಯಗಳ ಪಾಕಪದ್ಧತಿಯನ್ನು ಪ್ರತಿನಿಧಿಸುವ ರುಚಿಕರವಾದ ಊಟದವರೆಗೆ, ಯುಗಾದಿಯು ಹೊಸ ವರ್ಷದ ತಾಜಾತನವನ್ನು ಮತ್ತು ಜನರಲ್ಲಿ ಸಂತೋಷವನ್ನು ತರುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಸಾಮಾನ್ಯ ಮಾರ್ಚ್‌ ತಿಂಗಳಾಂತ್ಯ ಅಥವಾ ಏಪ್ರಿಲ್‌ ಮೊದಲ

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ Read More »