ಸುಳ್ಯ: ಶಾಂತಿನಗರ ಕ್ರೀಡಾಂಗಣ ಸಮಸ್ಯೆಗೆ ಕಾಂಗ್ರೆಸ್ ಎಂಟ್ರಿ| ಗುಡ್ಡ ಅಗೆದು ದುಡ್ಡು ಮಾಡಲು ಹೊರಟ ಶಾಸಕ ಎಸ್.ಅಂಗಾರ- ಪಿ ಸಿ ಜಯರಾಮ್ ಆರೋಪ
ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹೊರವಲಯದ ಶಾಂತಿನಗರ ಎಂಬಲ್ಲಿ ನಢಯುತ್ತಿರುವ ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಕುರಿತಂತೆ ಕಾಂಗ್ರೆಸ್ ಮುಖಂಡರು ಇಂದು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮೇ 20 ರಂದು ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರುಗಳು ಮೊದಲಿಗೆ ಅಪಾಯದ ಸ್ಥಿತಿಯಲ್ಲಿರುವ ಮಣ್ಣಿನ ರಾಶಿ ಮತ್ತು, ಕ್ರೀಡಾಂಗಣದಿಂದ ಹರಿಯುವ ನೀರು










