Editor

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್

ಸಮಗ್ರ ನ್ಯೂಸ್: ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರೆಸ್ಸೆಸ್‌ ಪಾಲ್ಗೊಂಡಿತ್ತು ನಿಜ. ಇನ್ನು ಮುಂದೆ ಇಂತಹ ಹೋರಾಟದಲ್ಲಿ ಭಾಗಿಯಲ್ಲ

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್ Read More »

ಮಂಗಳೂರು: ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 4 ಕೋಟಿ ಮೌಲ್ಯದ ರಕ್ತಚಂದನ ವಶ

ಸಮಗ್ರ ನ್ಯೂಸ್: ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಸಿಬ್ಬಂದಿ, ಮೂಡುಬಿದಿರೆ ಪ್ರಾದೇಶಿಕ ವಲಯದ ಸಿಬ್ಬಂದಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಈಚರ್ ವಾಹನದಲ್ಲಿ ಬೈಹುಲ್ಲು ಹೊದೆಸಿ ಸಾಗಿಸಲಾಗುತ್ತಿದ್ದ 8308 ಕೆಜಿ ತೂಕದ ರೂ.4.15 ಕೋಟಿ ಮೌಲ್ಯದ , ರಕ್ತಚಂದನ ಮರದ 316 ದಿಮ್ಮಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ

ಮಂಗಳೂರು: ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 4 ಕೋಟಿ ಮೌಲ್ಯದ ರಕ್ತಚಂದನ ವಶ Read More »

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ

ಸಮಗ್ರ ನ್ಯೂಸ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದನ್ನು ಸಂಘದ ಮುಖಂಡರು ಖಂಡಿಸಿದ್ದಾರೆ. ಇಡಿಯು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ಧಮನಕಾರಿ ನೀತಿಯನ್ನು ಪ್ರಕಟಿಸುತ್ತಿದ್ದು ಅದರ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಂಡಿದೆ. ಜನಪರ ಚಳವಳಿಗಳು, ಎನ್‌ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೇ ಪ್ರಜಾಸತ್ತಾತ್ಮ ಧ್ವನಿಗಳನ್ನು ಗಮನಿಸುವ ಮೂಲಕ ಏಜೆನ್ಸಿಯು

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ Read More »

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ!

ಸಮಗ್ರ ನ್ಯೂಸ್: ಹಣದುಬ್ಬರ ಏರಿಕೆಯ ನಡುವೆ ಟೆಲಿಕಾಂ ಸೇವೆಗಳು ಮತ್ತೊಮ್ಮೆ ದುಬಾರಿಯಾಗಬಹುದು. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ಸುಂಕದ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆಯಾಗಿದೆ. ಆದರೆ, ಅವರ ಸಕ್ರಿಯ ಚಂದಾದಾರರ ಬೇಸ್ 3% ರಷ್ಟು ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಸೇವಾ ಸುಂಕಗಳಲ್ಲಿ ಮತ್ತೊಂದು ಹೆಚ್ಚಳದ ಬಗ್ಗೆ ಯೋಚಿಸಬಹುದು ಎನ್ನಲಾಗಿದೆ. CRISIL ನ ವರದಿಯ ಪ್ರಕಾರ, ಆಗಸ್ಟ್

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ! Read More »

ಪುತ್ತೂರು: ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ| ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಯನ್ನು ಕೂಡಿ ಹಾಕಿ ವಿಕೃತಿ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಪುತ್ತೂರು ಸಮೀಪದ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ ಬೆನ್ನಲ್ಲೇ ಒಂದು ಕೋಮಿನ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ವೇಳೆ ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆಗೆ ಯತ್ನಿಸಿ, ವರದಿಗಾರರನ್ನು ಕೊಠಡಿಯೊಳಗೆ ಕೂಡಿ ಹಾಕಿ ವಿಕೃತಿ ಮೆರೆದಿದ್ದಾರೆ. ವರದಿ ಮಾಡದಂತೆ ವಿದ್ಯಾರ್ಥಿಗಳು ತಾಕೀತು ಮಾಡಿದ್ದಾರೆ. ವರದಿಗಾಗಿ ಮಾಡಿದ ವಿಡಿಯೋಗಳನ್ನು ವಿದ್ಯಾರ್ಥಿಗಳು ಬಲತ್ಕಾರವಾಗಿ

ಪುತ್ತೂರು: ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ| ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಯನ್ನು ಕೂಡಿ ಹಾಕಿ ವಿಕೃತಿ Read More »

ಚಿನ್ನಾಭರಣ ಮಾರಾಟಕ್ಕೆ ಹೊಸ ನಿಯಮ‌ ಜಾರಿ| ಹೀಗಿರಲಿದೆ ಹೊಸ ಹಾಲ್ ಮಾರ್ಕ್ ರೂಲ್ಸ್

ಸಮಗ್ರ ನ್ಯೂಸ್: ದೇಶದಲ್ಲಿ ಆಭರಣ ಮಾರಾಟಕ್ಕೆ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಜೂನ್ 1 ರಿಂದ ದೇಶದ ಎಲ್ಲಾ ಆಭರಣ ವ್ಯಾಪಾರಿಗಳು ಅದರ ಶುದ್ಧತೆಯನ್ನು ಲೆಕ್ಕಿಸದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ವ್ಯಾಪಾರಿಗಳು ಶುದ್ಧತೆಯನ್ನು ಲೆಕ್ಕಿಸದೆ ಜೂನ್ 1 ರಿಂದ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳನ್ನು (2 ಗ್ರಾಂಗಿಂತ ಹೆಚ್ಚು) ಮಾತ್ರ ಮಾರಾಟ ಮಾಡಬೇಕು ಎಂದು ಏಪ್ರಿಲ್ 4, 2022 ರಂದು ಬ್ಯೂರೋ ಆಫ್ ಇಂಡಿಯನ್

ಚಿನ್ನಾಭರಣ ಮಾರಾಟಕ್ಕೆ ಹೊಸ ನಿಯಮ‌ ಜಾರಿ| ಹೀಗಿರಲಿದೆ ಹೊಸ ಹಾಲ್ ಮಾರ್ಕ್ ರೂಲ್ಸ್ Read More »

ಮಂಗಳೂರು ಮಳಲಿ ಮಸೀದಿ ವಿವಾದ| ಎಸ್ಡಿಪಿಐ ಗೆ ಜಮಾಅತ್ ಖಡಕ್ ಸಂದೇಶ!?

ಸಮಗ್ರ ನ್ಯೂಸ್: ಮಂಗಳೂರಿನ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ‌ಪಕ್ಷಕ್ಕೆ ಅಲ್ಲಿನ ಜಮಾಅತ್ ಖಡಕ್ ಸಂದೇಶ ರವಾನಿಸಿದೆ. ಮಸೀದಿಯಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಮೈಲೇಜ್ ತೆಗೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮಸೀದಿಯ ಮುಖಂಡರು ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿರುವ ತುಣುಕೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಮಳಲಿ ಮಸೀದಿಯ ವಿಷಯದಲ್ಲಿ ಕಲವು ಸೋಕಾಲ್ಡ್ ಸಮುದಾಯ ರಕ್ಷಕರು, ಬಾಯಿ ಬಡುಕರು , ಸಮುದಾಯಕ್ಕೆ ಬೆಂಕಿ ಹಚ್ಚುವವರು ನಮ್ಮ ಜಮಾತ್ ಕಮೀಟಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಿಕ್ಕೆ ಹೊರಟಿದ್ದಾರೆ. ನಾವು ಯಾವ

ಮಂಗಳೂರು ಮಳಲಿ ಮಸೀದಿ ವಿವಾದ| ಎಸ್ಡಿಪಿಐ ಗೆ ಜಮಾಅತ್ ಖಡಕ್ ಸಂದೇಶ!? Read More »

ಸ್ನೇಹಿತರ ಜೊತೆ ಸೇರಿ ತಂದೆಯ ಕೊಲೆಗೈದ ಮಗ|

ಸಮಗ್ರ ನ್ಯೂಸ್: ಸ್ನೇಹಿತರ ಜೊತೆ ಸೇರಿ ಸ್ವಂತ ಮಗ ತಂದೆಯನ್ನೇ ಕೊಲೆಗೈದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇಲ್ಲಿನ ಕೊಳ್ಳೂರ(ಎಂ) ಸೀಮಾಂತರದ ದೇವದುರ್ಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಾನಪ್ಪ ಗೋಪಾಳಪುರ ಎಂಬುವರ ಬೈಕ್ ತಡೆದು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸಲಿಂಗಪ್ಪ(27) ಮತ್ತು ಸ್ನೇಹಿತ ಸುರೇಶ್​ (23) ಮಾದೇಶ್​ (20) ಬಂಧಿತ ಆರೋಪಿಗಳು. ಮೇ 12 ರಂದು ನಡೆದಿದ್ದ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರ ತಂಡ ಮಂಗಳವಾರ ಮೂವರು ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ

ಸ್ನೇಹಿತರ ಜೊತೆ ಸೇರಿ ತಂದೆಯ ಕೊಲೆಗೈದ ಮಗ| Read More »

ಹಾಸನ: ಜೆಡಿಎಸ್ ಕಾರ್ಪೋರೇಟರ್ ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಹಾಸನ ನಗರಸಭೆ ಕಾರ್ಪೋರೇಟರ್ ಓರ್ವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿ‌ನಡೆದಿದೆ. ಸದಸ್ಯ ಪ್ರಶಾಂತ್ ಎಂಬಾತನೇ ಕೊಲೆಯಾದ ದುರ್ದೈವಿ. ರಾತ್ರಿ ತನ್ನ ಹೋಂಡಾ ಆ್ಯಕ್ಟಿವಾದಲ್ಲಿ ಪ್ರಶಾಂತ್ ತೆರಳುತ್ತಿದ್ದಾಗ ಜವೇನಹಳ್ಳಿ ಮಠದ ಬಳಿ ಆಟೋದಲ್ಲಿ ಬಂದು ಅಡ್ಡ ಹಾಕಿದ ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಜನರು ಭಯಭೀತರಾಗಿದ್ದರು. ಸ್ಥಳಕ್ಕೆ ಹೆಚ್.ಡಿ.ರೇವಣ್ಣ ಭೇಟಿ ನೀಡಿದರು. ಈ ವೇಳೆ ಮೃತದೇಹ ಇಳಿಸುವ ವಿಚಾರದಲ್ಲಿ ಪೊಲೀಸರು ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ

ಹಾಸನ: ಜೆಡಿಎಸ್ ಕಾರ್ಪೋರೇಟರ್ ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು Read More »

ಪುತ್ತೂರು: ಹಿಜಾಬ್ ಧರಿಸಿ ಬಂದ 6 ವಿಧ್ಯಾರ್ಥಿನಿಯರು ಸಸ್ಪೆಂಡ್

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ 6 ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.

ಪುತ್ತೂರು: ಹಿಜಾಬ್ ಧರಿಸಿ ಬಂದ 6 ವಿಧ್ಯಾರ್ಥಿನಿಯರು ಸಸ್ಪೆಂಡ್ Read More »