Editor

ಚಿನ್ನದ ದರದಲ್ಲಿ ಮತ್ತೆ ಏರಿಕೆ| ಇಂದಿನ ಚಿನ್ನದ‌ ದರ ನೋಡಿ…

ಸಮಗ್ರ ನ್ಯೂಸ್: ದೇಶಾದ್ಯಂತ ಇಂದು ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 500 ರೂ. ಏರಿಕೆಯಾಗಿ 79,550 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 550 ರೂಪಾಯಿ ಹೆಚ್ಚಾಗಿ 86,770 ರೂ.ಗೆ ದಾಖಲಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 55 ರೂ ಹೆಚ್ಚಳವಾಗಿ 8662 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 79,400 ರೂ

ಚಿನ್ನದ ದರದಲ್ಲಿ ಮತ್ತೆ ಏರಿಕೆ| ಇಂದಿನ ಚಿನ್ನದ‌ ದರ ನೋಡಿ… Read More »

ದೆಹಲಿಯಲ್ಲಿ ರೈಲು ಏರುವ ಧಾವಂತದಲ್ಲಿ ಕಾಲ್ತುಳಿತ| ಪ್ರಯಾಗರಾಜ್ ಗೆ ತೆರಳುತ್ತಿದ್ದ ಭಕ್ತರ ಸಾವು

ಸಮಗ್ರ ನ್ಯೂಸ್: ಮಹಾಕುಂಭ ಮೇಳಕ್ಕೆಂದು ತೆರಳುತ್ತಿದ್ದ ಜನ ದೆಹಲಿ ರೈಲು ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದ ದುರಂತ ಘಟನೆ ಕಳೆದ ದಿನ ರಾತ್ರಿ ಸಂಭವಿಸಿದೆ. ದೆಹಲಿ ರೈಲು ನಿಲ್ದಾಣದಲ್ಲಿ ಮಹಾ ಕುಂಭಮೇಳಕ್ಕೆ ಎರಡು ರೈಲುಗಳು ವಿಳಂಬವಾಗಿದ್ದರಿಂದ ಶನಿವಾರ ರಾತ್ರಿ ಜನದಟ್ಟಣೆ ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದಾಗಿ ಪ್ರಧಾನಿ ಮೋದಿ ಸೇರಿದಂತೆ ಇತರ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಮತ್ತು

ದೆಹಲಿಯಲ್ಲಿ ರೈಲು ಏರುವ ಧಾವಂತದಲ್ಲಿ ಕಾಲ್ತುಳಿತ| ಪ್ರಯಾಗರಾಜ್ ಗೆ ತೆರಳುತ್ತಿದ್ದ ಭಕ್ತರ ಸಾವು Read More »

ಕೆಎಸ್ಎಸ್ ಕಾಲೇಜಿನಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ದಲ್ಲಿ ಹಿಂದಿ ವಿಭಾಗದ ವತಿಯಿಂದ ವಿಶ್ವ ಹಿಂದಿ ದಿವಸ ಕಾರ್ಯಕ್ರಮವನ್ನು ಫೆ.15 ರಂದು ಆಚರಿಸಲಾಯಿತು. ವಿಶ್ವಹಿಂದಿ ದಿವಸದ ಪ್ರಯುಕ್ತ “ಹಿಂದಿ ಭಾಷೆ ಮತ್ತು ಉದ್ಯೋಗ” ಎಂಬ ವಿಷಯದ ಕುರಿತು ವಿಶೇಷ ವ್ಯಾಖ್ಯಾನ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಜ್ಯೋತಿ ಜ್ಞಾನೇಶ್ವರಿ ಸಹಾಯಕ ಪ್ರಾಧ್ಯಾಪಕಿ, ಹಿಂದಿ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಮದ್ರಾಸ್ ಇವರು ನಡೆಸುವ ಪರೀಕ್ಷೆಗಳಲ್ಲಿ

ಕೆಎಸ್ಎಸ್ ಕಾಲೇಜಿನಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ Read More »

ಬುದ್ದಿವಂತರು ಈ ನಾಲ್ಕು ಸ್ಥಳಗಳಲ್ಲಿ ಎಂದೂ ಮಾತನಾಡಲ್ಲ| ಚಾಣಕ್ಯ ಹೇಳಿದ ಆ ಸ್ಥಳಗಳಾವುವು?

ಸಮಗ್ರ ನ್ಯೂಸ್: ಚಾಣಕ್ಯ ನೀತಿ ಕೇವಲ ಮನುಷ್ಯನ ಗುಣಗಳನ್ನು ವಿವರಿಸುವುದಲ್ಲದೆ ಅನೇಕ ದೋಷಗಳ ಬಗ್ಗೆಯೂ ಹೇಳುತ್ತದೆ. ಇದು ಮಾತ್ರವಲ್ಲ, ಮನುಷ್ಯ ಯಾವಾಗ ಮಾತನಾಡಬೇಕು ಮತ್ತು ಯಾವಾಗ ಅಲ್ಲ ಎಂಬುದರ ಬಗ್ಗೆಯೂ ಉಲ್ಲೇಖಿಸುತ್ತದೆ. ಚಾಣಕ್ಯ ನೀತಿಯಲ್ಲಿ ಹೇಳಿರುವ ವಿಷಯಗಳನ್ನು ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೋ ಅವರು ಪ್ರತಿಯೊಂದು ಕಷ್ಟವನ್ನು ಸುಲಭವಾಗಿ ಜಯಿಸಬಹುದು, ಏಕೆಂದರೆ ಅವರು ವ್ಯಕ್ತಿಯನ್ನು ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅಂತೆಯೇ, ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ನಾಲಿಗೆಯನ್ನು ನಿಯಂತ್ರಿಸಬೇಕು ಎಂದು ಹೇಳಲಾಗಿದೆ. ಎಲ್ಲೆಂದರಲ್ಲಿ ಮಾತನಾಡುವುದು ಸರಿಯಲ್ಲ. ಕೆಲವು

ಬುದ್ದಿವಂತರು ಈ ನಾಲ್ಕು ಸ್ಥಳಗಳಲ್ಲಿ ಎಂದೂ ಮಾತನಾಡಲ್ಲ| ಚಾಣಕ್ಯ ಹೇಳಿದ ಆ ಸ್ಥಳಗಳಾವುವು? Read More »

ಉಪ್ಪಿನಂಗಡಿ: ಅಡಿಕೆ ತೋಟದಲ್ಲಿ ಬೆಂಕಿ ಅನಾಹುತ| 250ಕ್ಕೂ ಗಿಡಗಳಿಗೆ ಹಾನಿ

ಸಮಗ್ರ ನ್ಯೂಸ್: ಅಡಿಕೆ ತೋಟದಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿರುವ ಘಟನೆ ಹಿರೇಬಂಡಾಡಿ ಗ್ರಾಮದ ಪಡ್ಯೊಟ್ಟು ಎಂಬಲ್ಲಿ ನಡೆದಿದೆ. ಪಡ್ಯೊಟ್ಟು ನಿವಾಸಿ ಯತೀಶ್‌ ಶೆಟ್ಟಿ ಎಂಬವರಿಗೆ ಸೇರಿದ ಸುಮಾರು 1 ಎಕ್ರೆ ಪ್ರದೇಶದಲ್ಲಿನ ಅಡಿಕೆ ತೋಟದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸುಮಾರು 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿದ್ದು ಸಾವಿರಾರು ರೂಪಾಯಿ ನ‌r ಸಂಭವಿಸಿದೆ. ಘಟನೆ ವೇಳೆ ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ಬೆಂಕಿಯನ್ನು

ಉಪ್ಪಿನಂಗಡಿ: ಅಡಿಕೆ ತೋಟದಲ್ಲಿ ಬೆಂಕಿ ಅನಾಹುತ| 250ಕ್ಕೂ ಗಿಡಗಳಿಗೆ ಹಾನಿ Read More »

ಪುತ್ತೂರು: ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ನೇಮಕ

ಸಮಗ್ರ ನ್ಯೂಸ್: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ವರ್ಗಾವಣೆಗೊಂಡ ಬಳಿಕ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ನಿಯುಕ್ತಿ

ಪುತ್ತೂರು: ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ನೇಮಕ Read More »

ಮೈಲಾರ ಕಾರ್ಣಿಕೋತ್ಸವ ಸಂಪನ್ನ| ದೈವವಾಣಿ ನುಡಿದ ಗೊರವಯ್ಯ

ಸಮಗ್ರ ನ್ಯೂಸ್: ಹೂವಿನ ಹಡಗಲಿಯ ಐತಿಹಾಸಿಕ ತಾಲೂಕಿನ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಇಂದು ಸಂಜೆ(ಫೆ.14) ಲಕ್ಷಾಂತರ ಭಕ್ತರ ಮಧ್ಯೆ ಸಂಪನ್ನವಾಯಿತು. ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಕಾರ್ಣಿಕೋತ್ಸವದಲ್ಲಿ ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಗೊರವಯ್ಯ ಅವರು ದೈವವಾಣಿ ನುಡಿದರು. ಪ್ರತಿವರ್ಷದಂತೆ ಈ ಬಾರಿಯೂ ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿಗೆ ಲಕ್ಷಾಂತರ ಭಕ್ತರು ಕಾದು ಕುಳಿತಿರುದ್ದರು. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರಲ್ಲಿದೆ. ಅದರಂತೆ ಗೋರವಯ್ಯ ‘ತುಂಬಿದ ಕೊಡ

ಮೈಲಾರ ಕಾರ್ಣಿಕೋತ್ಸವ ಸಂಪನ್ನ| ದೈವವಾಣಿ ನುಡಿದ ಗೊರವಯ್ಯ Read More »

ವಿರಾಜಪೇಟೆ: 14 ದಿನದ ಬಾಣಂತಿ ನೇಣಿಗೆ ಶರಣು

ಸಮಗ್ರ ನ್ಯೂಸ್: 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ಬಾಣಂತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಕರಡ ನಿವಾಸಿ ದಿವಂಗತ ಕಟ್ಟಿ ಬಿದ್ದಪ್ಪ-ಶೀಲಾ ದಂಪತಿ ಪುತ್ರಿ ಕೊಟ್ಟೋಳಿ ಗ್ರಾಮದ ನಿವಾಸಿ, ಎಂಎಂ ದಿನೇಶ್ ಎಂಬುವವರ ಪತ್ನಿ ಕಾವೇರಮ್ಮ (24) ನೇಣಿಗೆ ಶರಣಾದ ಬಾಣಂತಿ. ಕಾವೇರಮ್ಮ ಹಾಗೂ ದಿನೇಶ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. 14 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು.

ವಿರಾಜಪೇಟೆ: 14 ದಿನದ ಬಾಣಂತಿ ನೇಣಿಗೆ ಶರಣು Read More »

ಉತ್ಸವದ ವೇಳೆ ದಿಕ್ಕಾಪಾಲಾಗಿ ಓಡಿದ ದೇಗುಲದ ಆನೆಗಳು| ಇಬ್ಬರು ಮಹಿಳೆಯರು ಸಾವು; ಹಲವರಿಗೆ ಗಾಯ

ಸಮಗ್ರ ನ್ಯೂಸ್: ದೇಗುಲದಲ್ಲಿ ಗುರುವಾರ ಉತ್ಸವದ ವೇಳೆ ಎರಡು ಆನೆಗಳು ದಿಕ್ಕಾಪಾಲಾಗಿ ಓಡಿದ್ದು, ಅದರಿಂದ ಚದುರಿದ ಗುಂಪುಗೂಡಿದ್ದವರ ಕಾಲ್ತುಳಿತದಿಂದಾಗಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಕೇರಳದ ಕೋಝಿಕ್ಕೋಡ್ ನ ಕೊಯಿಲಾಂಡಿಯಲ್ಲಿ‌ ನಡೆದಿದೆ. ಇಲ್ಲಿನ ಮಣಕುಳಂಗರ ದೇವಸ್ಥಾನದ ಆವರಣದಲ್ಲಿ ಈ ಅವಘಡ ಸಂಭವಿಸಿದ್ದು, ಉದ್ರಿಕ್ತ ಆನೆಗಳ ಕಂಡು ಜನರು ಓಡಿದ್ದರಿಂದ ಐವರು ಗಾಯಗೊಂಡರು. ಅವರ ಸ್ಥಿತಿ ಗಂಭೀರವಾಗಿದೆ. ವರದಿಗಳ ಪ್ರಕಾರ, ರೋಷಗೊಂಡ ಆನೆಯು ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿದೆ. ಆಗ ಎರಡೂ ಆನೆಗಳು ಜನರ ಗುಂಪಿನ ನಡುವೆ

ಉತ್ಸವದ ವೇಳೆ ದಿಕ್ಕಾಪಾಲಾಗಿ ಓಡಿದ ದೇಗುಲದ ಆನೆಗಳು| ಇಬ್ಬರು ಮಹಿಳೆಯರು ಸಾವು; ಹಲವರಿಗೆ ಗಾಯ Read More »

ಬೆಲೆ ಏರಿಕೆಗೆ ಭಾರೀ ವಿರೋಧ|’ನಮ್ಮ ಮೆಟ್ರೋ’ ಪ್ರಯಾಣ ದರ ಇಳಿಕೆ

ಸಮಗ್ರ ನ್ಯೂಸ್: ‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಕೊಂಚ ಇಳಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕ್ರತ ದರ ಜಾರಿಗೆ ಬರಲಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಎಂಆರ್ ಸಿಲ್ ಜನರ ಮೂಗಿಗೆ ತುಪ್ಪ ಸವರಿದ್ದು, ಟಿಕೆಟ್ ಬೆಲೆ ಕೊಂಚ ಇಳಿಕೆ ಮಾಡಿದೆ. ಮೆಟ್ರೋ ಟಿಕೆಟ್ ನ ಕನಿಷ್ಟ ಹಾಗೂ ಗರಿಷ್ಟ ದರ ಹಾಗೆಯೇ ಇರಲಿದೆ. ಆದರೆ ಕೆಲವು ಸ್ಟೇಷನ್ ಗಳಿಗೆ ಇರುವ ಟಿಕೆಟ್ ಬೆಲೆಯಲ್ಲಿ 10 ರೂ ಇಳಿಸಲಾಗಿದೆ.ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನಿಷ್ಟ

ಬೆಲೆ ಏರಿಕೆಗೆ ಭಾರೀ ವಿರೋಧ|’ನಮ್ಮ ಮೆಟ್ರೋ’ ಪ್ರಯಾಣ ದರ ಇಳಿಕೆ Read More »