Editor

ಸುಳ್ಯ: ಎಂ ಸಿ ಸಿ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ|ರಂಜಿತ್ ಅಧ್ಯಕ್ಷರಾಗಿ ಪುನರಾಯ್ಕೆ

ಸುಳ್ಯ: ಮಾರ್ನಿಂಗ್ ಕ್ರಿಕೆಟ್ ಕ್ಲಬ್(ಎಂ.ಸಿ.ಸಿ)ನ ಇದರ ನೂತನ ಪದಾಧಿಕಾರಿಗಳ ನೇಮಕ ಆಯ್ಕೆ ಹಾಗೂ ಮಹಾಸಭೆ ಫೆ.23 ರಂದು ನಡಯಿತು. ಹಾಲಿ ಅಧ್ಯಕ್ಷ ರಂಜಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕ ಪತ್ರ ಮಂಡನೆ ಮಾಡಿ ನೂತನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅದ್ಯಕ್ಷರಾಗಿ ರಂಜಿತ್ ಕುಮಾರ್ ಪುನರಾಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಬಾಲಕುಮಾರನ್, ಕೋಶಾಧಿಕಾರಿ ಯಾಗಿ ಆಸೀಫ್ ಜಯನಗರ, ಉಪಾಧ್ಯಕ್ಷ ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಜುಬೀರ್ (ಉಬ್ಬಿ)

ಸುಳ್ಯ: ಎಂ ಸಿ ಸಿ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ|ರಂಜಿತ್ ಅಧ್ಯಕ್ಷರಾಗಿ ಪುನರಾಯ್ಕೆ Read More »

ಮಾಣಿ-ಸಂಪಾಜೆ ರಾ.ಹೆದ್ದಾರಿ ವಿಸ್ತರಣೆ ಡಿಪಿಆರ್ ಗೆ ರಾಜ್ಯ ಸರ್ಕಾರದ ಅನುಮೋದನೆ – ಸಂಸದ ಚೌಟ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸುವುದಕ್ಕೆ ಇದೀಗ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಕಳೆದ ವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್‌ ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಖುದ್ದು ಮನವಿ ಮಾಡಿದ್ದರು. ಈ

ಮಾಣಿ-ಸಂಪಾಜೆ ರಾ.ಹೆದ್ದಾರಿ ವಿಸ್ತರಣೆ ಡಿಪಿಆರ್ ಗೆ ರಾಜ್ಯ ಸರ್ಕಾರದ ಅನುಮೋದನೆ – ಸಂಸದ ಚೌಟ Read More »

ಜಾಗ್ವಾರ್ ಯುದ್ದ ವಿಮಾನಕ್ಕೆ ಮಂಗಳೂರಿನ ಹುಡುಗಿ ಸಾರಥ್ಯ| ಮೊದಲ ಬಾರಿಗೆ ಅವಕಾಶ ಪಡೆದ‌ ತನುಷ್ಕಾ

ಸಮಗ್ರ ನ್ಯೂಸ್: ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧ ವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್‌ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಇದೇ ಮೊದಲು ಬಾರಿಗೆ ಮಹಿಳೆಯೊಬ್ಬರು ಪಡೆದಿದ್ದಾರೆ. ಮಂಗಳೂರು ಮೂಲದ ಫ್ಲೆಯಿಂಗ್‌ ಆಫೀಸರ್‌ ತನುಷ್ಕಾ ಸಿಂಗ್‌ ಅವರಿಗೆ‌ ಅಂಥಹ ಅವಕಾಶ ಸಿಕ್ಕಿದೆ. ಇವರು ಜಾಗ್ವಾರ್‌ ಯುದ್ಧ ವಿಮಾನ ಸ್ಕ್ವಾಡ್ರನ್‌ನಲ್ಲಿ ಪೈಲಟ್‌ ಆಗಿ ಆಯ್ಕೆಯಾಗಿದ್ದಾರೆ. ಜಾಗ್ವಾರ್‌ ಯುದ್ಧ ವಿಮಾನವನ್ನು ಇದುವರೆಗೆ ಮಹಿಳಾ ಪೈಲಟ್‌ಗಳು ಶಾಶ್ವತ ನೆಲೆಯಲ್ಲಿ ಮುನ್ನಡೆಸಿಲ್ಲ. ತನುಷ್ಕಾ ಮಿಲಿಟರಿ ಹಿನ್ನೆಲೆಯ ಕುಟುಂಬದವರು. ಅವರ ತಂದೆ, ಅಜ್ಜ

ಜಾಗ್ವಾರ್ ಯುದ್ದ ವಿಮಾನಕ್ಕೆ ಮಂಗಳೂರಿನ ಹುಡುಗಿ ಸಾರಥ್ಯ| ಮೊದಲ ಬಾರಿಗೆ ಅವಕಾಶ ಪಡೆದ‌ ತನುಷ್ಕಾ Read More »

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ| ಪ.ಬಂಗಾಳದ ವಿವಿಧೆಡೆ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಮುಂಜಾನೆ 6.10ರ ಸುಮಾರಿಗೆ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ಸುಮಾರು 91 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದ್ದು, ಇದರ ಕೇಂದ್ರ ಬಿಂದು 19.52 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 88.55 ಡಿಗ್ರಿ ಪೂರ್ವ ರೇಖಾಂಶಕ್ಕೆ ಇತ್ತು ಎಂದು ಅಧಿಕೃತ ಮೂಲಗಳು ಹೇಳಿವೆ. ಭೂಕಂಪದಿಂದ ಆಗಿರುವ ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ ಹಾಗೂ ಸುನಾಮಿ ಎಚ್ಚರಿಕೆಯನ್ನೂ ನೀಡಿಲ್ಲ. ಕೊಲ್ಕತ್ತಾ

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ| ಪ.ಬಂಗಾಳದ ವಿವಿಧೆಡೆ ಕಂಪಿಸಿದ ಭೂಮಿ Read More »

ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಬಿಹಾರದಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. 2019ರ ಫೆಬ್ರವರಿ 24ರಂದು ಪ್ರಾರಂಭಿಸಲಾದ ಈ ಯೋಜನೆಯು ಅರ್ಹ ಕೃಷಿ ಕುಟುಂಬಗಳಿಗೆ ವರ್ಷಕ್ಕೆ 6,000 ರೂ.ಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಇಲ್ಲಿಯವರೆಗೆ, 18 ಕಂತುಗಳಲ್ಲಿ 11 ಕೋಟಿಗೂ ಹೆಚ್ಚು ರೈತರಿಗೆ 3.46 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ. ಪಿಎಂ ಕಿಸಾನ್

ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತು ಬಿಡುಗಡೆ Read More »

ಬೆಳ್ತಂಗಡಿ: ನದಿಗೆ ಬಿದ್ದು ಬಾಲಕ‌ ಸಾವು

ಸಮಗ್ರ ನ್ಯೂಸ್: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ. ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್‌ (16) ಮೃತ ಬಾಲಕ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಈತ ತನ್ನ ಅಜ್ಜಿ ಮನೆಗೆಂದು ಬಂದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಈ ಮೂಲಕ ದುರಂತ ಅಂತ್ಯ ಕಂಡಿದ್ದಾನೆ. ವೇಣೂರು ಪೊಲೀಸ್‌ ಠಾಣೆಯಲ್ಲಿ

ಬೆಳ್ತಂಗಡಿ: ನದಿಗೆ ಬಿದ್ದು ಬಾಲಕ‌ ಸಾವು Read More »

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಸಂಪೂರ್ಣ ಸುಟ್ಟು ಭಸ್ಮ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಮಾಳಿಗನಾಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆಯಾಗಿದೆ. ಈ ದುರ್ಘಟನೆಯಲ್ಲಿ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಬಹುತೇಕ ನಾಶವಾಗಿದ್ದು, ಹತ್ತಾರು ಮೂಟೆ ಕಾಫಿ ಬೀಜಗಳು ಕೂಡಾ ಬೆಂಕಿಗಾಹುತಿಯಾಗಿವೆ. ಅಗ್ನಿ ಅವಘಡದ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ರೇಖಾ (36) ತೀವ್ರವಾಗಿ ಗಾಯಗೊಂಡು ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡಿಗೆ ಮಾಡಲು ಸ್ಟವ್ ಹಚ್ಚುವ ವೇಳೆ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಸಂಪೂರ್ಣ ಸುಟ್ಟು ಭಸ್ಮ Read More »

ಪುತ್ತೂರು: ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಸರ್ಜಿಕಲ್ ಬಟ್ಟೆ ಹೊಟ್ಟೆಯೊಳಗಿಟ್ಟು‌ ಹೊಲಿಗೆ ಹಾಕಿದ ವೈದ್ಯ| ಖಾಸಗಿ ಆಸ್ಪತ್ರೆ ವಿರುದ್ದ ಕುಟುಂಬಸ್ಥರಿಂದ ದೂರು

ಸಮಗ್ರ ನ್ಯೂಸ್: ಹೆರಿಗೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದ ಬಾಣಂತಿಯೊಬ್ಬರು ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿತ್ತು. ಕೊನೆಗೂ ಬಾಣಂತಿಯ ಅಸ್ವಸ್ಥತೆಗೆ ನಿಜ ಕಾರಣ ಬಯಲಾಗಿದ್ದು, ಖಾಸಗಿ ಆಸ್ಪತ್ರೆಯ ವಿರುದ್ಧ ಬಾಣಂತಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದೆ. ಘಟನೆಯ ವಿವರ:2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ, ಪುತ್ತೂರು

ಪುತ್ತೂರು: ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಸರ್ಜಿಕಲ್ ಬಟ್ಟೆ ಹೊಟ್ಟೆಯೊಳಗಿಟ್ಟು‌ ಹೊಲಿಗೆ ಹಾಕಿದ ವೈದ್ಯ| ಖಾಸಗಿ ಆಸ್ಪತ್ರೆ ವಿರುದ್ದ ಕುಟುಂಬಸ್ಥರಿಂದ ದೂರು Read More »

ಪ್ರಯಾಗ್ ರಾಜ್: ಸಂಸದ ಬ್ರಿಜೇಶ್ ಚೌಟರಿಂದ ಪುಣ್ನಸ್ನಾನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಭಾನುವಾರ ಮುಂಜಾನೆ ತೀರ್ಥಸ್ನಾನ ಮಾಡಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಐತಿಹಾಸಿಕ ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಸಂಸದರು, ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ ನೆರವೇರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. “ಪ್ರಯಾಗ್‌ರಾಜ್‌ನ ಈ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು

ಪ್ರಯಾಗ್ ರಾಜ್: ಸಂಸದ ಬ್ರಿಜೇಶ್ ಚೌಟರಿಂದ ಪುಣ್ನಸ್ನಾನ Read More »

ಕೊಟ್ಟಿಗೆಹಾರ: ಧರ್ಮಸ್ಥಳ ಪಾದಯಾತ್ರಿ ಅಸ್ವಸ್ಥ|ತ್ವರಿತ ವೈದ್ಯಕೀಯ ನೆರವು ನೀಡಿದ ಸಮಾಜಸೇವಕ ಆರೀಫ್

ಸಮಗ್ರ ನ್ಯೂಸ್: ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಮೂಲದ ಕುಮಾರ್ ಎಂಬ ವ್ಯಕ್ತಿ ಅಸ್ವಸ್ಥನಾಗಿ ರಸ್ತೆ ಮಧ್ಯೆ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಯಾತ್ರೆಯ ವೇಳೆ ತೀವ್ರ ರಕ್ತವಾಂತಿಯನ್ನು ಅನುಭವಿಸಿದ ಕುಮಾರ್ ಪ್ರಜ್ಞೆ ತಪ್ಪಿದ್ದು, ಈ ದೃಶ್ಯ ಕಂಡ ಸ್ಥಳೀಯರು ತಕ್ಷಣವೇ ಸಹಾಯಕ್ಕೆ ಧಾವಿಸಿದರು. ಸಮಾಜಸೇವಕ ಆರೀಫ್ ಮತ್ತು ಇತರೆ ಸ್ಥಳೀಯರು ತಕ್ಷಣವೇ ತಮ್ಮ ಪ್ರಯತ್ನಗಳಿಂದ ಕುಮಾರ್ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಈ ಘಟನೆ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಭಾಗವಹಿಸುವ ಯಾತ್ರಿಕರ

ಕೊಟ್ಟಿಗೆಹಾರ: ಧರ್ಮಸ್ಥಳ ಪಾದಯಾತ್ರಿ ಅಸ್ವಸ್ಥ|ತ್ವರಿತ ವೈದ್ಯಕೀಯ ನೆರವು ನೀಡಿದ ಸಮಾಜಸೇವಕ ಆರೀಫ್ Read More »