Editor

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ| ಹಲವೆಡೆ ಅವಘಡ, ವಿದ್ಯುತ್ ವ್ಯತ್ಯಯ

ಸಮಗ್ರ ನ್ಯೂಸ್: ಉರಿ ಬಿಸಿಲು, ವಿಪರೀತ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಒಂದೇ ಬಾರಿಗೆ ಭಾರಿಗೆ ಬಿರಾಗಾಳಿ ಸಹಿತ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಗೆ ಹಲವು ಮರಗಳು ಧರೆಗುರುಳಿದೆ. ವಿದ್ಯುತ್ ಕಂಬಗಳು ಧರೆಗುಳಿ ಹಲವು ತಾಲೂಕುಗಳು ಕತ್ತಲಲ್ಲಿ ಮುಳುಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕು ಸೇರಿದಂತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ| ಹಲವೆಡೆ ಅವಘಡ, ವಿದ್ಯುತ್ ವ್ಯತ್ಯಯ Read More »

ಮಾನವಕುಲವೇ ತಲೆತಗ್ಗಿಸುವ ಘಟನೆ: ಮಗಳನ್ನೇ ಗರ್ಭಿಣಿ ಮಾಡಿದ್ದ ಕಾಮುಕ ತಂದೆ

ಸಮಗ್ರ ನ್ಯೂಸ್: ಈ ಸಮಾಜದಲ್ಲಿ ಒಂದೊಂದು ಘಟನೆಗಳು ವಿಚಿತ್ರವಾಗಿ ಇರುತ್ತದೆ. ಹೌದು ಹೆಣ್ಣು ಮಕ್ಕಳು ಅಮ್ಮನಿಗಿಂತ ಅಪ್ಪನ ಮೇಲೆ ಹೆಚ್ಚು ಪ್ರೀತಿ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ತಂದೆ ಈ ಮಾತಿಗೆ ಕಪ್ಪು ಚುಕ್ಕೆ ತಂದಿದ್ದಾನೆ. ತನ್ನ ಮಗಳು ಎನ್ನುವುದನ್ನು ನೋಡದೇ ಈ ತಂದೆಯೇ ಆಕೆ ಮೇಲೆ ತನ್ನ ವಿಕೃತ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಇದರ ಪರಿಣಾಮ ಇದೀಗ ಮಗಳು ಗರ್ಭಿಣಿಯಾಗಿದ್ದಾಳೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ

ಮಾನವಕುಲವೇ ತಲೆತಗ್ಗಿಸುವ ಘಟನೆ: ಮಗಳನ್ನೇ ಗರ್ಭಿಣಿ ಮಾಡಿದ್ದ ಕಾಮುಕ ತಂದೆ Read More »

ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮೇಳೈಸಿದ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳ

ಸಮಗ್ರ ನ್ಯೂಸ್: ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ಹಿ.ಪ್ರಾ. ಶಾಲೆ ದರ್ಬೆ ಪುತ್ತೂರು ಇಲ್ಲಿ ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳವು ಎರಡು ದಿನ ಅದ್ದೂರಿಯಾಗಿ ನೆರವೇರಿತು. ಮೊದಲ ದಿನ 9.00 ಗಂಟೆಗೆ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೇರವೇರಿತು. ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ದಳದಿಂದ 350 ಮಕ್ಕಳು ಭಾಗವಹಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಿಶೋರ್

ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮೇಳೈಸಿದ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳ Read More »

ಕೊಟ್ಟಿಗೆಹಾರ: ಅಬಕಾರಿ ಅಧಿಕಾರಿಗಳಿಂದ ಮೂಡಿಗೆರೆಯಲ್ಲಿ ದಾಳಿ – ಕಳ್ಳಭಟ್ಟಿ ವಶ

ಸಮಗ್ರ ನ್ಯೂಸ್: ಅಬಕಾರಿ ಇಲಾಖೆ ಅಧಿಕಾರಿಗಳು ಮೂಡಿಗೆರೆ ತಾಲ್ಲೂಕಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿಯನ್ನ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಬಕಾರಿ ಉಪ ಆಯುಕ್ತರು ರೂಪ ಎಂ, ಹಾಗೂ ಅಬಕಾರಿ ಅಧೀಕ್ಷಕರು ಸಂತೋಷ್ ಕುಮಾರ್ ಕೆ.ಜಿ.ಇವರ ನಿರ್ದೇಶನದಲ್ಲಿ , ಮೂಡಿಗೆರೆ ಉಪ ಅಧೀಕ್ಷಕರು ಎಂ.ಆರ್. ಶೇಖರ್ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು. ತಾಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಬಿನ್ ಈರಶೆಟ್ಟಿ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 30 ಲೀಟರ್ ಕಳ್ಳಭಟ್ಟಿ ತಯಾರಿಸುವ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ.

ಕೊಟ್ಟಿಗೆಹಾರ: ಅಬಕಾರಿ ಅಧಿಕಾರಿಗಳಿಂದ ಮೂಡಿಗೆರೆಯಲ್ಲಿ ದಾಳಿ – ಕಳ್ಳಭಟ್ಟಿ ವಶ Read More »

ದರ್ಶನ್ – ಸುಮಲತಾ ಅಂಬರೀಷ್ ಮಧ್ಯೆ ಬಿರುಕು? ಸುಮಲತಾರನ್ನ ಅನ್‌ಫಾಲೋ ಮಾಡಿದ ಡಿ-ಬಾಸ್

ಸಮಗ್ರ ನ್ಯೂಸ್: ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಈ ಹಿಂದೆಯಿಂದ್ಲು ಒಳ್ಳೆಯ ಬಾಂಧವ್ಯ ಇತ್ತು. ಅಷ್ಟೇ ಅಲ್ಲದೆ ದರ್ಶನ್ ನಾ ಮಗ ಎಂದು ಸುಮಲತಾ ಪರಿಗಣಿಸಿದ್ದರು. ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ‘ಅವನು ಯಾವಾಗಲೂ ನನ್ನ ಮಗ’ ಎಂದಿದ್ದರು. ಆದರೆ, ಇತ್ತೀಚಿಗಿನ ಬೆಳವಣಿಗೆ ಸಾಕಷ್ಟು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಹೌದು ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ

ದರ್ಶನ್ – ಸುಮಲತಾ ಅಂಬರೀಷ್ ಮಧ್ಯೆ ಬಿರುಕು? ಸುಮಲತಾರನ್ನ ಅನ್‌ಫಾಲೋ ಮಾಡಿದ ಡಿ-ಬಾಸ್ Read More »

ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ| ಆತಂಕದ ವಾತಾವರಣ ಸೃಷ್ಟಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ. ಬೆಳಗ್ಗೆ 10.50 ರ ಸುಮಾರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ, ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ. ಅದೃಷ್ಟವಶಾತ್‌ ಯಾವುದೇ ರೀತಿಯ ಹಾನಿ ಹಾಗೂ ಸಾವು-ನೋವು ಸಂಭವಿಸಿಲ್ಲ. ಭೂಮಿ ಕಂಪಿಸಲು ಕಾರಣಗಳೇನು ಎಂಬುದನ್ನು

ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ| ಆತಂಕದ ವಾತಾವರಣ ಸೃಷ್ಟಿ Read More »

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| ₹.400 ಗಡಿ ದಾಟಿದ ಹೊಸ ಅಡಿಕೆ

ಸಮಗ್ರ ನ್ಯೂಸ್: ಹೊಸ ಅಡಿಕೆ, ರಬ್ಬರ್‌, ಕಾಳುಮೆಣಸು ಧಾರಣೆ ಮತ್ತೆ ಏರಿಕೆ ಕಂಡಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 400 ರೂ. ದಾಟಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 11ರಂದು ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 400 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 405 ರೂ. ಇತ್ತು. ಸಿಂಗಲ್‌ ಚೋಲ್‌ 455 ರೂ., ಡಬ್ಬಲ್‌ ಚೋಲ್‌ 495 ರೂ. ಧಾರಣೆ ಇದ್ದು, ಏರಿಕೆ ಕಂಡಿಲ್ಲ. ಮಾ. 11ರಂದು ರಬ್ಬರ್‌ ಗ್ರೇಡ್‌ಗೆ 190.50 ರೂ., ರಬ್ಬರ್‌ ಸ್ಕ್ರಾಪ್‌

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ| ₹.400 ಗಡಿ ದಾಟಿದ ಹೊಸ ಅಡಿಕೆ Read More »

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಫೆ.11ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆ 38 ಡಿ.ಸೆ.ಗೂ ಅಧಿಕ ತಾಪಮಾನ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಮತ್ತು ಉಡುಪಿ

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು Read More »

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಗೋಳಿತೊಟ್ಟು ಗ್ರಾಮದ ಆಂಜರ ಮನೆ ನಿವಾಸಿ ಗಗನ್‌ ರಾಜ್‌ ಶೆಟ್ಟಿ (20) ಅವರ ಮೃತದೇಹ ಇಲ್ಲಿನ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಆಂಜರಮನೆ ನಿವಾಸಿ ರವಿಚಂದ್ರ ಶೆಟ್ಟಿ ಅವರ ಮಗನಾಗಿದ್ದ ಗಗನ್‌ ರಾಜ್‌ ಶೆಟ್ಟಿ ರಿಕ್ಷಾ ಚಾಲಕನಾಗಿದ್ದು, ಸೋಮವಾರ ರಾತ್ರಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೋದವರು ರಾತ್ರಿ 10 ಗಂಟೆಯಿಂದ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ರಿಕ್ಷಾವು ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಬಳಿ ನಿಲ್ಲಿಸಿದ್ದು ಕಂಡು ಬಂದಿತ್ತು. ಈ

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ Read More »

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ

ಸಮಗ್ರ ನ್ಯೂಸ್: ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ‌ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ. ಕಡಿದಾದ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೇ ಇರುವುದರಿಂದ ಬೆಂಕಿ ಕೆನ್ನಾಲಿಗೆ ಸುಮಾರು 50 ಕಿ.ಮೀ.ದೂರದ ಬೆಳ್ತಂಗಡಿ ವರೆಗೆ ನೇರವಾಗಿ ಗೋಚರಿಸುತ್ತಿದೆ. ವನ್ಯಜೀವಿ‌ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ Read More »