ಮಂಗಳೂರು: ಕೊಲೆ ಉದ್ದೇಶದಿಂದ ಪಾದಾಚಾರಿ ಮಹಿಳೆ ಹಾಗೂ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು| ಓರ್ವನ ವಿರುದ್ಧ ಎಫ್ಐಆರ್; ಚಾಲಕ ಅರೆಸ್ಟ್
ಸಮಗ್ರ ನ್ಯೂಸ್: ಕೊಲೆ ಉದ್ದೇಶದಿಂದ ಬೈಕ್ ಸವಾರನಿಗೆ ಹಾಗೂ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾರನ್ನು ಹಾಗೂ ಅದನ್ನು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಬಿಎಸ್‌ಎನ್‌ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್.ಕೆ.ಎಂ ಕಾರು ಚಲಾಯಿಸಿದ್ದ ಆರೋಪಿ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಗುರುವಾರ ಬೆಳಿಗ್ಗೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯ ರಸ್ತೆಯಲ್ಲಿ ನಾನು ಬೈಕ್‌ನಲ್ಲಿ ಸಾಗುತ್ತಿದ್ದೆ. ಆಗ ನಮ್ಮ ಎದುರು ಮನೆಯ ನಿವಾಸಿ










