Ad Widget .

7 ಕೋಟಿ‌ ಮೌಲ್ಯದ ಅಕ್ರಮ ಅಡಿಕೆ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಬೆಳಗಾವಿ: ಜಿಎಸ್‌ಟಿ ಪಾವತಿಸಿದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಂದಾಜು ₹ 7 ಕೋಟಿ ಮೌಲ್ಯದ ಅಡಿಕೆಯನ್ನು 7 ಲಾರಿಗಳ ಸಮೇತ ವಶ‍ಪಡಿಸಿಕೊಳ್ಳಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಡಿಜಿಜಿಐ (ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ) ಮಂಗಳೂರು ವಲಯ ಘಟಕದಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಕೇಂದ್ರ ಜಿಎಸ್‌ಟಿ ವಿಭಾಗದ ಅಧಿಕಾರಿಗಳ ತಂಡವು ವಾಹನಗಳನ್ನು ಹುಬ್ಬಳ್ಳಿ-ನವಲಗುಂದ ರಸ್ತೆಯಲ್ಲಿ ತಡೆದು ಪರಿಶೀಲನೆ ನಡೆಸಿದೆ.

Ad Widget . Ad Widget . Ad Widget .

ಸಮರ್ಪಕ ಜಿಎಸ್‌ಟಿ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ಸಾಗಿಸುತ್ತಿದ್ದುದ್ದನ್ನು ಪತ್ತೆ ಹಚ್ಚಲಾಗಿದೆ.

‘ಅಡಿಕೆ ಸಾಗಣೆಯಲ್ಲಿ ತೆರಿಗೆ ವಂಚಿಸುವವರ ಮೇಲೆ ನಿಗಾ ವಹಿಸಲಾಗಿದೆ. ಸರ್ಕಾರಕ್ಕೆ ಆಗುವ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಶಿವಮೊಗ್ಗ ಸಮೀಪದಲ್ಲಿ ಖರೀದಿಸಿದ ಅಡಿಕೆಯನ್ನು ದೆಹಲಿ ಹಾಗೂ ಅಹಮದಾಬಾದ್‌ಗೆ ಸಾಗಿಸಲಾಗುತ್ತಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆ ವಾಹನಗಳು ಮತ್ತು ಸರಕನ್ನು ಡಿಜಿಜಿಐ ಅಧಿಕಾರಿಗಳ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಜಿಎಸ್‌ಟಿ ಬೆಳಗಾವಿ ಕಚೇರಿಯ ಸಹಾಯಕ ಆಯುಕ್ತ ಅಜಿಂಕ್ಯ ಹರಿ ಕಾಟ್ಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *