ನಾಗಾಲೋಟದಲ್ಲಿ ಹೊಸ ಅಡಿಕೆ ಧಾರಣೆ| ಕೃಷಿಕರ ಮೊಗದಲ್ಲಿ ಹೊಸ ಕಳೆ

ಪುತ್ತೂರು: ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ದಿನೇದಿನೇ ಏರುಗತಿಯತ್ತ ಸಾಗುತ್ತಿದೆ. ಈ ಬೆಳವಣಿಗೆ ಇದೇರೀತಿ ಮುಂದುವರಿದರೆ ಕೆ.ಜಿ. ಅಡಿಕೆ ಬೆಲೆ 500 ದಾಟುವ ನಿರೀಕ್ಷೆಯಿದೆ. ಧಾರಣೆ ಏರಿಕೆಯಿಂದಾಗಿ ಕೃಷಿಕರ ಮೊಗದಲ್ಲಿ ಹೊಸ ಕಳೆ‌ ಮೂಡಿದೆ.

Ad Widget ... ..

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ 485- 487ರಲ್ಲಿ ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು.

Ad Widget

ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 35ರಷ್ಟು ಏರಿಕೆಯಾಗಿದ್ದು, ಮುಂದಿನ ವಾರ ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ ಮೂಡಿದೆ. ಕಳೆದ 3 ವಾರಗಳಿಂದ ಹಳೆ ಅಡಿಕೆ ಧಾರಣೆಯು‌ ಸ್ಥಿರತೆ ಕಾಯ್ದುಕೊಂಡಿದ್ದು, 500 ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ.

Leave a Comment

Your email address will not be published. Required fields are marked *