ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ| ಮೂವರು ಶಾಸಕರಿಂದ‌ ರಾಜೀನಾಮೆ ಎಚ್ಚರಿಕೆ

ಸಮಗ್ರ ನ್ಯೂಸ್: ಕಾಡಾನೆ ಸ್ಥಳಾಂತರ ವಿಚಾರವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನ ಮೂವರು ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಅಟ್ಟಿದ್ದಕ್ಕೆ ಸರ್ಕಾರದ ವಿರುದ್ಧ ಸ್ಥಳೀಯ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್‌ನ ಮೂವರು ಶಾಸಕರು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

. Ad Widget . Ad Widget . Ad Widget

ಕಾಡಾನೆಗಳನ್ನು ಹಾಸನ ಭಾಗದಿಂದ ಚಿಕ್ಕಮಗಳೂರು ಭಾಗಕ್ಕೆ ಓಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಮೂಡಿಗೆರೆ, ಶಾಸಕಿ ನಯನ ಮೋಟಮ್ಮ, ಶೃಂಗೇರಿ ಶಾಸಕ ರಾಜೇಗೌಡ ಅವರು ರಾಜೀನಾಮೆ ನೀಡುವುದಾಗಿ ಖಡಕ್ ಆಗಿ ತಿಳಿಸಿದ್ದಾರೆ.

. Ad Widget .

ಜಂಟಿ ಸುದ್ದಿಗೋಷ್ಠಿ ನಡೆಸಿದ ಮೂವರು ಶಾಸಕರು, ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. 2 ವರ್ಷದಲ್ಲಿ 16 ಜನ ಸಾವನ್ನಪ್ಪಿದ್ದಾರೆ. 58 ರಲ್ಲಿ 2 ಕಾಡಾನೆ ಸೆರೆಯಾಗಿದೆ, 56 ಆನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಕಳಿಸುತ್ತೇವೆ ಎಂದಿದ್ದರು. ನಮ್ಮ ಜಿಲ್ಲೆಗೆ ಕಳಿಸುವುದು ಬೇಡ ಎಂದು ನಾವು ಪತ್ರ ನೀಡಿದ್ದೇವೆ. ಈಗ ನಮಗೆ ಗೊತ್ತಿಲ್ಲದಂತೆ ಆನೆಗಳನ್ನ ನಮ್ಮ ಜಿಲ್ಲೆಗೆ ಓಡಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಆನೆ ಓಡಿಸಿದ್ದಾರೆ. ಮುತ್ತೋಡಿಯಲ್ಲಿ 450ಕ್ಕೂ ಹೆಚ್ಚು ಆನೆಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಭಾಗಕ್ಕೆ ಆನೆಗಳನ್ನು ಓಡಿಸಬಾರದು. ಕೆಲವು ವೇಳೆ ಆನೆಗಳು ಬರುತ್ತವೆ, ಹೋಗುತ್ತವೆ. ಅದಕ್ಕೆ ತೊಂದತೆ ಇಲ್ಲ, ಬಲವಂತವಾಗಿ ಓಡಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *