ನರ್ಮದೆಯ ಮಡಿಲಲ್ಲಿ ಪತ್ತೆಯಾಯ್ತು 4 ಲಕ್ಷ ವರ್ಷಗಳ‌ ಹಿಂದಿನ‌ ಆನೆಯ ಪಳೆಯುಳಿಕೆ!!

ಸಮಗ್ರ ನ್ಯೂಸ್: ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ನರ್ಮದಾ ಘಾಟ್ ಪ್ರದೇಶ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಈ ಪ್ರದೇಶದ ಆನೆಯ ಅಪರೂಪದ ಪಳಿಯುಳಿಕೆಯೊಂದು ಪತ್ತೆಯಾಗಿದೆ. ಸಂಶೋಧನಾ ತಂಡ, ಸುಮಾರು 400,000 ರಿಂದ 500,000 ವರ್ಷಗಳಷ್ಟು ಹಳೆಯದಾದ ಆನೆಯ ದವಡೆ ಮತ್ತು ಪಕ್ಕೆಲುಬುಗಳ ಅಪರೂಪದ ಪಳೆಯುಳಿಕೆ ಪತ್ತೆ ಮಾಡಿದ್ದಾರೆ. ಸಂಶೋಧಕರಗಿಂತ ಮೊದಲು ಸ್ಥಳೀಯರು ಪಳಿಯುಳಿಕೆ ಪತ್ತೆ ಮಾಡಿದ್ದರು. ಆದರೆ ಇವುಗಳನ್ನು ದೇವರು ಎಂದು ಪರಿಗಣಿಸಿ ಪೂಜೆ ಮಾಡಲು ಆರಂಭಿಸಿದ್ದರು ಎಂದು ವರದಿಯಾಗಿದೆ.

. Ad Widget . Ad Widget . Ad Widget

ಹಿರಿಯ ವಿಜ್ಞಾನಿಗಳ ತಂಡ ಈ ಪಳಿಯುಳಿಕೆಯನ್ನು ಪರಿಶೀಲನೆ ನಡೆಸಿದೆ. ಭೂವೈಜ್ಞಾನಿಕ ಮೌಲ್ಯಮಾಪನಗಳ ಪ್ರಕಾರ, ಈ ಆವಿಷ್ಕಾರವು ಬನೇಟಾ ರಚನೆಯ ಹಳದಿ ಜೇಡಿಮಣ್ಣು ಮತ್ತು ಮಧ್ಯ ಪ್ಲೆಸ್ಟೊಸೀನ್ ಅವಧಿಯ (ಸುಮಾರು 24,000 ರಿಂದ 500,000 ವರ್ಷಗಳ ಹಿಂದೆ) ಸುಹಾಗ್‌ಪುರ ರಚನೆಯ ಹೂಳು ಪದರದೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಈ ಅವಶೇಷಗಳು ಮಧ್ಯ ಪ್ಲೆಸ್ಟೋಸೀನ್ ಗಿಂತ ಹಿಂದಿನ ಕಾಲದ್ದು ಎಂದು ಊಹಿಸಲಾಗುತ್ತಿದೆ.

. Ad Widget .

ಈ ಪಳೆಯುಳಿಕೆಯು ಪ್ಯಾಲಿಯೊಲೊಕ್ಸೊಡಾನ್ ನಮಡಿಕಸ್ ಪ್ರಭೇದಕ್ಕೆ ಸೇರಿದ್ದು, ಈ ಪಳಿಯುಳಿಕೆ ಇಂದಿನ ಆನೆಗಳಿಗಿಂತ ಹೆಚ್ಚು ದೊಡ್ಡದಾಗಿದೆ. ಪಳಿಯುಳಿಕೆ ದವಡೆ 75 ಸೆಂಟಿಮೀಟರ್ ಉದ್ದ ಮತ್ತು 25 ಸೆಂಟಿಮೀಟರ್ ಅಗಲವಿದೆ. ಹಲ್ಲುಗಳ ರಚನೆಯು ಮಾನಾಂತರ ರೇಖೆಗಳು ಈ ದೈತ್ಯ ಜೀವಿಯ ಅಸ್ತಿತ್ವವನ್ನು ದೃಢಪಡಿಸುತ್ತವೆ. ಹಲ್ಲುಗಳ ರಚನೆಯು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದ ಎಳೆಯ ಆನೆಗೆ ಸೇರಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ ದವಡೆ ಮತ್ತು ಪಕ್ಕೆಲುಬುಗಳ ಗಮನಿಸಿ ಆನೆಯ ಎತ್ತರ ಮತ್ತು ತೂಕವನ್ನ ವಿಜ್ಞಾನಿಗಳ ತಂಡ ಅಂದಾಜಿಸಿದೆ.

ನರ್ಮದಾ ಕಣಿವೆಯು ಅನೇಕ ಪಳಿಯುಳಿಕೆ ಹೊಂದಿರುವ ಅತ್ಯಂತ ಶ್ರೀಮಂತ ಪ್ರದೇಶವಾಗಿದ್ದು. 2010ರ ವೇಳೆ ಇಲ್ಲಿ ಡೈನೋಸಾರ್ ಅವಶೇಷಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ. ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕೆಂದು ವಿಜ್ಞಾನಿಗಳು ಮತ್ತು ಸಂಶೋಧಕರು ಒತ್ತಾಯಿಸಿದ್ದಾರೆ. ಐಐಟಿ ಗಾಂಧಿನಗರದಲ್ಲಿ ನಡೆದ ಮಹತ್ವದ ಸಭೆಯ ನಂತರ, ಈ ಪ್ರದೇಶವನ್ನು ಸಂರಕ್ಷಿತ ವಲಯವೆಂದು ಗೊತ್ತುಪಡಿಸುವ ಪ್ರಸ್ತಾವನೆಯನ್ನು ಕಳೆದ ವರ್ಷ ಯುನೆಸ್ಕೋಗೆ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ನಡೆದ್ರೆ ಇತಿಹಾಸಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಕುರುಹುಗಳು ಪತ್ತೆಯಾಗುವ ನಿರೀಕ್ಷೆಗಳಿವೆ.

Leave a Comment

Your email address will not be published. Required fields are marked *