ಸಮಗ್ರ ನ್ಯೂಸ್: ದುಬಾರಿ ದುನಿಯಾದಲ್ಲಿ ಬೆಲೆಗಳ ಹೆಚ್ಚಳದ್ದೇ ಸದ್ದಾಗಿದೆ. ಇತಿಹಾಸಲ್ಲೇ ಮೊದಲ ಬಾರಿಗೆ ಹಾಲಿನ ಬೆಲೆ 8 ರೂಪಾಯಿ ಹೆಚ್ಚಳವಾಗಿದೆ. ನಿತ್ಯ ಕಾಫಿ ಕುಡಿಯೋಕು ಜನರು ಯೋಜನೆ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಬಡವರು-ಮಧ್ಯಮ ವರ್ಗದವರು ಬದುಕೋದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಇದರ ಬೆನ್ನಲ್ಲೇ ಇದೀಗ ಹಾಲಿನ ಜೊತೆಗೆ ಮೊಸರಿನ ಬೆಲೆಯಲ್ಲೂ ಭಾರೀ ಏರಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನ ಪ್ರತಿ ಲೀಟರ್ಗೆ 8 ರೂ. ಏರಿಕೆ ಮಾಡಿದ್ದು, ಪರಿಷ್ಕೃತ ದರವು ನವೆಂಬರ್1 ರಿಂದ ಜಾರಿಗೆ ಬರಲಿದೆ. ಹಾಲಿನ ದರವನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಪರಿಷ್ಕೃತ ದರದಲ್ಲಿ ಶುಭಂ ಹಾಲು, ಹೋಮೋಜಿನೈಸ್ಟ್ ಶುಭಂ ಹಾಲಿನ ದರದಲ್ಲಿ 12 ರು. ಹೆಚ್ಚಾಗಲಿದೆ. ಉಳಿದವು 8 ರೂಪಾಯಿ. ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮೊಸರಿನ ದರವೂ ಕೂಡ ಹೆಚ್ಚಾಗಲಿದ್ದು, ಅರ್ಧ ಲೀಟರ್ ಮೊಸರಿಗೆ 6 ರೂಪಾಯಿ ಅಂದ್ರೆ ಮತ್ತು ಒಂದು ಲೀಟರ್ ಮೊಸರಿಗೆ 14 ರೂ ಏರಿಕೆ ಆಗಿದೆ.
ಬರಪರಿಸ್ಥಿತಿ ಮತ್ತು ಹೈನುಗಾರಿಕೆ ನಿರ್ವಹಣೆ ವೆಚ್ಚ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಅನುಕೂಲವಾಗಲೆಂದು ಹಾಲು-ಮೊಸರಿನ ದರ ಹೆಚ್ಚಿಸಿರೋದಾಗಿ ಸರ್ಕಾರ ಸರ್ಮಥನೆ ನೀಡಿದೆ. ಆದ್ರೆ ಬೆಲೆ ಏರಿಕೆ ವಿರುದ್ಧ ಜನ ಸಾಮಾನ್ಯರು ಕೆಂಡಕಾರ್ತಿದ್ದಾರೆ. ಇದೀಗ ಬದುಕೇ ಕಷ್ಟವಾಗ್ತಿದೆ ಎನ್ನುತ್ತಿದ್ದಾರೆ.









