ಸಮಗ್ರ ನ್ಯೂಸ್: ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಇಡಿ ಮತ್ತೆ ಬಿಗ್ ಶಾಕ್ ಕೊಟ್ಟಿದೆ. ಆನ್ಲೈನ್ ಬೆಟ್ಟಿಂಗ್, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತು ಇತರರಿಗೆ ಸೇರಿದ್ದ 23.35 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
‘ಕಿಂಗ್ 567’ ಆಯಪ್ ಮೂಲಕ ವಂಚಿಸಿ ₹2,300 ಕೋಟಿಗೂ ಅಧಿಕ ಅಕ್ರಮ ವ್ಯವಹಾರ ನಡೆಸಿದ ಆರೋಪ ಇವರ ಮೇಲಿದ್ದು, ಈವರೆಗೆ ಒಟ್ಟು ₹343 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಕ್ರಮ ಆನ್ ಲೈನ್ ಬೆಟ್ಟಿಂಗ್, ಹಣ ವರ್ಗ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತು ಇತರರಿಗೆ ಸೇರಿದ್ದ 23.35 ಕೋಟಿ ಮೌಲ್ಯ ದ ಆಸ್ತಿ ಇ.ಡಿ. ತಾತ್ಕಾಲಿಕವಾಗಿ ಮುಟ್ಟು ಗೋಲು ಹಾಕಿಕೊಂಡಿದೆ.
ವೀರೇಂದ್ರ ಮತ್ತು ಅವರ ಸಹಚರರು ‘ಕಿಂಗ್ 567’ ಸೇರಿದಂತೆ ವಿವಿಧ ಅಕ್ರಮ ಆನ್ ಲೈನ್ ಬೆಟ್ಟಿಂಗ್ ಆಯಪ್ ಗಳನ್ನು ನಿರ್ವಹಿಸುತ್ತಿದ್ದು, ಆಟಗಾರರಿಗೆ ವಂಚಿಸಿ ಹಣ ಲೂಟಿ ಮಾಡಿದ್ದರು ಎಂಬ ಆರೋಪವಿದೆ. 2,300 ಕೋಟಿ ರೂ.ಗೂ ಹೆಚ್ಚು ಹಣದ ಅಕ್ರಮ ವರ್ಗಾವಣೆ ನಡೆದಿರುವುದು ತನಿಖೆಯಲ್ಲಿದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.









