ಸಮಗ್ರ ನ್ಯೂಸ್: ಹಬ್ಬದ ಸೀಸನ್ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದ್ದು, ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಒಂದೇ ದಿನಕ್ಕೆ ಬರೋಬ್ಬರಿ 1700 ರೂ ಇಳಿಕೆಯಾಗಿದೆ. ಭಾರತೀಯರ ಮಾರುಕಟ್ಟೆಯಲ್ಲಿ ಅ.22ರಂದು ಬುಧವಾರ 10 ಗ್ರಾಂ ಶುದ್ದ ಚಿನ್ನದ ಬೆಲೆ 1.44 ಲಕ್ಷರೂ ದಾಖಲಿಸಿದೆ.
ಅಕ್ಟೋಬರ್ 22 2026 ಗುರುವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 170ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 14,438 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 1700ರೂ ಇಳಿಕೆಯಾಗಿದ್ದು, ಇಂದಿನ ಅಪರಂಜಿ ಚಿನ್ನದ ದರ 1,44,380 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 155ರೂ ಇಳಿಕೆಯಾಗಿದ್ದು , 1 ಗ್ರಾಂ ಬೆಲೆ ಈಗ 13,235 ರೂ. ಆಗಿದ್ದು, 10 ಗ್ರಾಂ ಬೆಲೆನಲ್ಲಿ 1550ರೂ ಇಳಿಕೆಯಾಗಿ ಈಗ 22 ಕ್ಯಾರಟ್ ಚಿನ್ನದ ಬೆಲೆ 1,32,350 ರೂಪಾಯಿ ದಾಖಲಾಗಿದೆ
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 127 ರೂ ಕುಸಿತ ಕಂಡುಬಂದಿದ್ದು, 1 ಗ್ರಾಂ ಬೆಲೆ ಈಗ 10,829 ರೂ ಆಗಿದ್ದು 10 ಗ್ರಾಂ ಬೆಲೆ ಈಗ 1,08,290 ರೂಪಾಯಿ ದಾಖಲಾಗಿದೆ.
ಜಾಗತಿಕ ಅಸ್ಥಿರತೆಗಳ ನಡುವೆಯೂ ಕೆಲದಿನಗಳಿಂದ ಸ್ಥಿರವಾಗಿದ್ದ ಚಿನ್ನ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಅ.22ರಂದು 1 ಗ್ರಾಂ ಬೆಳ್ಳಿ ಬೆಲೆಯಲ್ಲಿ 5 ರೂ ಕುಸಿದು 250ರೂ ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5000 ರೂ ಇಳಿಕೆಯಾಗಿದ್ದು, 2.25 ಲಕ್ಷ ರೂ ದಾಖಲಿಸಿದೆ.









