ಬಂಟ್ವಾಳ: ಗೃಹಲಕ್ಷ್ಮಿ ಹಣದಲ್ಲಿ ವಸ್ತ್ರ ಮಳಿಗೆ ಆರಂಭಿಸಿದ ಮಹಿಳೆ

ಸಮಗ್ರ ನ್ಯೂಸ್: ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ‘ಗೃಹಲಕ್ಷ್ಮಿ’ಯ ಹಣ ಬಳಸಿ ಟೈಲರಿಂಗ್ ಮತ್ತು ವಸ್ತ್ರಮಳಿಗೆ ಆರಂಭಿಸಿ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ.

. Ad Widget . Ad Widget . Ad Widget

ಇಲ್ಲಿನ ಮಾವಿನಕಟ್ಟೆ ನಿವಾಸಿ, ‘ಗೃಹಲಕ್ಷ್ಮಿ’ ಯೊಜನೆಯ ಫಲಾನುಭವಿ ಶಕುಂತಲಾ ಅವರು, ಪ್ರತಿ ತಿಂಗಳು ಬರುತ್ತಿದ್ದ ತಲಾ ₹2 ಸಾವಿರವನ್ನು ಕೂಡಿಟ್ಟು ಕನಸಿನಂತೆ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ ಟೈಲ್ಸ್ ಆಯಂಡ್‌ ಗಾರ್ಮೆಂಟ್ಸ್‌’ ಆರಂಭಿಸಿದ್ದಾರೆ.

. Ad Widget .

ಗುರುವಾರ ಆರಂಭಗೊಂಡ ಈ ಮಳಿಗೆಗೆ ಭೇಟಿ ನೀಡಿದ ಬಂಟ್ವಾಳ ತಾಲ್ಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಅವರು ಶಕುಂತಳಾ ಅವರನ್ನು ಅಭಿನಂದಿಸಿದ್ದಾರೆ.

‘ಫಲಾನುಭವಿ ಶಕುಂತಲಾ ಅವರ ಸಾಧನೆ ಇತರ ಮಹಿಳೆಯರಿಗೆ ಸ್ಸ್ಫೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಪ್ರೇರಣೆಯಾಗಿದೆ’ ಎಂದು ಜಯಂತಿ ಪೂಜಾರಿ ಶ್ಲಾಘಿಸಿದರು.

Leave a Comment

Your email address will not be published. Required fields are marked *