ಭಾರತೀಯ ಮೂಲದ ನ್ಯಾಯತಜ್ಞೆ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ

ಸಮಗ್ರ ನ್ಯೂಸ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನ್ಯಾಯತಜ್ಞೆ ನವನೀತಂ ‘ನವಿ’ ಪಿಳ್ಳೈ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

. Ad Widget . Ad Widget . Ad Widget

ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉತ್ತೇಜನಕ್ಕಾಗಿ ನೀಡಿದ ಕೊಡುಗೆಗಳನ್ನು ಗುರುತಿಸಿ, ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನ್ಯಾಯತಜ್ಞೆ ನವನೀತಂ ‘ನವಿ’ ಪಿಳ್ಳೈ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ನಾರ್ವೆಯ ನೊಬೆಲ್ ಸಮಿತಿಯು ಶುಕ್ರವಾರ ಘೋಷಿಸಿದೆ.

. Ad Widget .

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಮಾನವ ಹಕ್ಕುಗಳ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನ್ಯಾಯತಜ್ಞೆ ನವನೀತಂ ‘ನವಿ’ ಪಿಳ್ಳೈ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತೀಯ ತಮಿಳು ಮೂಲದವರಾದ ಇವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ 2008ರಿಂದ 2014ರವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರೇರಣೆಯಾಗಿರುವ ಪಿಳ್ಳೈ ಅವರ ಜೀವನ ಮತ್ತು ಸಾಧನೆಗಳು ಗಮನಾರ್ಹವಾಗಿವೆ.

ನವನೀತಂ ಪಿಳ್ಳೈ ಅವರು 1941ರ ಸೆಪ್ಟೆಂಬರ್ 23ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಭಾರತೀಯ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬಸ್ ಚಾಲಕರಾಗಿದ್ದರು. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಶಿಕ್ಷಣದ ಮೂಲಕ ಕಾನೂನು ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ, ಪಿಳ್ಳೈ ಅವರು ಮಾನವ ಹಕ್ಕುಗಳ ರಕ್ಷಣೆಗೆ ಧೈರ್ಯದಿಂದ ಹೋರಾಡಿದರು. 1967ರಲ್ಲಿ ನಟಾಲ್ ಪ್ರಾಂತ್ಯದಲ್ಲಿ ಸ್ವಂತ ಕಾನೂನು ಸಂಸ್ಥೆಯನ್ನು ಸ್ಥಾಪಿಸಿದ ಮೊದಲ ಅಶ್ವೇತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ರಾಜಕೀಯ ಕೈದಿಗಳ ಪರವಾಗಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಜೈಲುಗಳಲ್ಲಿನ ಕೈದಿಗಳ ಮೇಲಿನ ದೌರ್ಜನ್ಯ ಮತ್ತು ಚಿತ್ರಹಿಂಸೆ ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಕಾನೂನಿನ ಮೂಲಕ ಅನ್ಯಾಯದ ವಿರುದ್ಧ ಹೋರಾಡಿದ ಅವರ ಸೇವೆ ಮಾನವ ಹಕ್ಕುಗಳ ಚಳವಳಿಗೆ ಮಹತ್ವದ ಕೊಡುಗೆಯಾಯಿತು.

Leave a Comment

Your email address will not be published. Required fields are marked *