ಬರದ ಹೊಡೆತಕ್ಕೆ ನಲುಗಿದ ರೈತರ ಕೈ ಹಿಡಿಯಲು ಮುಂದಾದ ರಾಜ್ಯ ಸರ್ಕಾರ| ಅನ್ನದಾತನ ಖಾತೆಗೆ ₹2500 ನೇರ ಜಮೆಗೆ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಮಹತ್ವದ ಹಾಗೂ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಕೇಂದ್ರದ ಪರಿಹಾರ ಧನಕ್ಕಾಗಿ ಕಾಯದೆ, ರಾಜ್ಯ ಸರ್ಕಾರವೇ ಸ್ವತಃ ಮುಂಚೂಣಿಯಲ್ಲಿ ನಿಂತು ಸಂಕಷ್ಟದಲ್ಲಿರುವ ರೈತರ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಲು ತೀರ್ಮಾನಿಸಿದೆ.

. Ad Widget . Ad Widget

ಆರಂಭಿಕ ಹಂತವಾಗಿ ಆಯ್ದ ತಾಲೂಕುಗಳ ಅರ್ಹ ರೈತರಿಗೆ ತಲಾ ₹2,500 ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಬರದಿಂದ ತತ್ತರಿಸಿರುವ ಲಕ್ಷಾಂತರ ರೈತಾಪಿ ಕುಟುಂಬಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.

. Ad Widget . . Ad Widget . Ad Widget

ವರದಿಗಳ ಪ್ರಕಾರ, ಸರ್ಕಾರದಿಂದ ಈಗಾಗಲೇ ಈ ಸಂಬಂಧ ನೀತಿಯನ್ನು ರೂಪಿಸಿ ಆರಂಭಿಕ ಅನುಮೋದನೆಯನ್ನೂ ನೀಡಲಾಗಿದೆ. 0 ಲಕ್ಷ ರೈತರಿಗೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರೈತರನ್ನು ಗುರುತಿಸಿ ಅವರ ಬ್ಯಾಂಕ್ ಅಕೌಂಟ್‌ಗಳಿಗೆ ₹2,500ರಂತೆ ನೇರ ಜಮೆ (DBT) ಮಾಡಲು ಯೋಜನೆ ಸಿದ್ಧಗೊಳಿಸಲಾಗಿದೆ. ರಾಜ್ಯದ ಬರಪೀಡಿತ ತಾಲೂಕುಗಳ ರೈತರ ಪರಿಸ್ಥಿತಿಯನ್ನು ಪರಿಗಣಿಸಿ ಈ ತುರ್ತು ನೆರವು ಘೋಷಿಸಲಾಗುತ್ತಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅಧಿಕೃತವಾಗಿ ಅಂತಿಮ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಅನುದಾನ ಬಂದ ಬಳಿಕ ರೈತರಿಗೆ ಮತ್ತೆ ಹೆಚ್ಚಿನ ನೆರವು ಹಾಗೂ ಬಾಕಿ ಮೊತ್ತ ನೀಡುವ ಸಾಧ್ಯತೆಯಿದೆ.ಆದರೆ, ಅಲ್ಲಿಯವರೆಗೆ ರೈತರನ್ನು ಸಂಕಷ್ಟದಲ್ಲೇ ಬಿಡಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ತನ್ನ ಸ್ವಂತ ನಿಧಿಯಿಂದಲೇ ಈ ಪರಿಹಾರ ನೀಡಲು ಮುಂದಾಗಿದೆ. ಶೀಘ್ರದಲ್ಲಿಯೇ ಈ ಮಹತ್ವದ ಯೋಜನೆ ಹಾಗೂ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಸಾರ್ವಜನಿಕ ಘೋಷಣೆ ಮಾಡಲಿದ್ದಾರೆ.

Leave a Comment

Your email address will not be published. Required fields are marked *