ಶಿಶಿಲ: ಪತ್ನಿ‌ ಅಸಹಜ ಸಾವು| ಆತ್ಮಹತ್ಯೆಗೆ ಶರಣಾದ ಪತಿ

ಸಮಗ್ರ ನ್ಯೂಸ್: ಪತ್ನಿಯ ಮೃತದೇಹ ಜಮೀನಿನ ಕೆರೆಯಲ್ಲಿ ಅಸಹಜ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ, ಪತಿಯೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಹಾಗೂ ಶಂಕಾಸ್ಪದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

. Ad Widget . Ad Widget

ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ನೇಣಿಗೆ ಶರಣಾದ ದುರದೃಷ್ಟಕರ ಪತಿ. ತನಿಯಪ್ಪ ಗೌಡ ಅವರು ಕಳೆದ ಎರಡು-ಮೂರು ದಿನಗಳಿಂದ ಯಾರ ಕಣ್ಣಿಗೂ ಕಾಣಿಸದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ತನಿಯಪ್ಪ ಗೌಡ ಅವರು ತಮ್ಮದೇ ಮನೆಯೊಳಗೆ ನೇಣು ಬಿಗಿದುಕೊಂಡು ಶವವಾಗಿ ಬಿದ್ದಿರುವುದು ಕಂಡುಬಂದಿದೆ.ಇತ್ತೀಚೆಗಷ್ಟೇ ತನಿಯಪ್ಪ ಗೌಡ ಅವರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

. Ad Widget . . Ad Widget . Ad Widget

ಆಕೆಯ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ತಮ್ಮ ಸಹೋದರಿಯ ಸಾವು ಸಾಮಾನ್ಯವಲ್ಲ, ಇದರ ಹಿಂದೆ ಅನುಮಾನವಿದೆ ಎಂದು ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪತ್ನಿ ಸಾವಿನ ಬೆನ್ನಲ್ಲೇ ಇದೀಗ ಪತಿ ತನಿಯಪ್ಪ ಗೌಡ ಅವರ ಮೃತದೇಹವೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಧರ್ಮಸ್ಥಳ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ದಂಪತಿಯ ಅನುಮಾನಾಸ್ಪದ ಸಾವಿನ ಹಿಂದಿರುವ ನಿಜಾಂಶ ಹೊರತರಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Leave a Comment

Your email address will not be published. Required fields are marked *