ಉಪ್ಪಿನಂಗಡಿ: ಹಿಂದೂ ಧರ್ಮೀಯನ ನಿಧನಕ್ಕೆ ಹಬ್ಬ ಮುಂದೂಡಿದ‌ ಮುಸ್ಲಿಂ ಬಾಂಧವರು| ಸಾಮರಸ್ಯಕ್ಕೆ ಸಾಕ್ಷಿಯಾಯಿತು ವಿಶಿಷ್ಟ ನಡೆ

ಸಮಗ್ರ ನ್ಯೂಸ್: ಹಿಂದು ಧರ್ಮದ ವ್ಯಕ್ತಿಯೋರ್ವರು ನಿಧನರಾದ ಕಾರಣಕ್ಕೆ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ನಡೆದಿದೆ.

. Ad Widget . Ad Widget . Ad Widget .

ಗ್ರಾಮದ ಕುದುಲೂರು ನಿವಾಸಿ, ಆಟೋರಿಕ್ಷಾ ಚಾಲಕ ಗುರುಪ್ರಸಾದ್ (35) ಹೃದಯಾಘಾತದಿಂದ ಶನಿವಾರ ನಿಧನರಾದರು. ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ, ಬಾಡಿಗೆ ವಾಹನ ಹೊಂದಿದ್ದ ಇವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮೃತ ಗುರುಪ್ರಸಾದ್ ಮನೆ ಬಳಿ ಇರುವ ಕುದುಲೂರು ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪೂರ್ವಭಾವಿಯಾಗಿ ಮಕ್ಕಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುಪ್ರಸಾದ್ ನಿಧನದ ಸೂತಕದ ವಾತಾವರಣದಲ್ಲಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ತೀರ್ಮಾನಿಸಿದ ಮಸೀದಿಯ ಆಡಳಿತ ಮಂಡಳಿ, ಕಾರ್ಯಕ್ರಮವನ್ನು ಮುಂದೂಡಿ ಗುರುಪ್ರಸಾದ್ ಕುಟುಂಬದ ದುಃಖದಲ್ಲಿ ಭಾಗಿಯಾಯಿತು.

Leave a Comment

Your email address will not be published. Required fields are marked *