ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.ಪುರುಷರ ಬ್ಯಾಡ್ಮಿಂಟನ್ ಎಸ್ಹೆಚ್6 ವಿಭಾಗದ ಫೈನಲ್ ಪಂದ್ಯದಲ್ಲಿ ಕೃಷ್ಣ ನಗರ್ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಹಾಂಕಾಂಗ್ನ ಚು ಮನ್ ಕೈ ವಿರುದ್ಧ ನಡೆದ ಮೆಡಲ್ ಪಂದ್ಯದಲ್ಲಿ ಕೃಷ್ಣ 2-1 ಸೆಟ್ಗಳ ಅಂತರದಿಂದ ಗೆದ್ದು ಭಾರತಕ್ಕೆ 5ನೇ ಚಿನ್ನ ತಂದುಕೊಟ್ಟಿದ್ದಾರೆ.
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೃಷ್ಣ ನಗರ್ ಮೊದಲ ಸೆಟ್ನಲ್ಲೇ 21-17 ಅಂಕಗಳ ಮುನ್ನಡೆ ಸಾಧಿಸಿದರು. ಎರಡನೇ ಸೆಟ್ನಲ್ಲಿ ಕಮ್ಬ್ಯಾಕ್ ಮಾಡಿದ ಚು ಮನ್ ಕೈ 21-16 ಅಂಕಗಳಿಂದ ಗೆದ್ದು ಸಮಬಲ ಸಾಧಿಸಿದರು. ಅಂತಿಮ ಸೆಟ್ನಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ ರೋಚಕ ಗೆಲುವು ಸಾಧಿಸಿ ಎರಡನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಹಾಮಕಾಂಗ್ನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.