ನಿರೂಪಣೆಗೆ ಗುಡ್ ಬೈ ಹೇಳಿದ ಅನುಪಮಾ ಗೌಡ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಅನುಬಂಧ ಅವಾರ್ಡ್ಸ್‌, ಸೀರಿಯಲ್ ಸಂತೆ, ರಾಜ ರಾಣಿ, ಕ್ವಾಟ್ಲೆ ಕಿಚನ್, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಕನ್ನಡಿಗರ ನೆಚ್ಚಿನ ನಿರೂಪಕಿಯಲ್ಲಿ ಒಬ್ಬರಾಗಿದ್ದರು. ‘ಅಕ್ಕ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅನುಪಮಾ ಕಾಣಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈಗ ನಿರೂಪಣೆಗೆ ವಿದಾಯ ಹೇಳುತ್ತಿರುವ ಬಗ್ಗೆ ಅನುಪಮಾ ಆನಂದಕುಮಾರ್ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ, ಭಾವುಕ ಮಾತುಗಳನ್ನಾಡಿ ತಮ್ಮಿಷ್ಟದ ವೃತ್ತಿಗೆ ವಿದಾಯ ಹೇಳಿದ್ದಾರೆ.

ವಿಡಿಯೊದಲ್ಲಿ ಹೇಳಿದ್ದೇನು?:
‘ನನ್ನ ಪ್ರೀತಿಯ ಕನ್ನಡದ ಮನಸ್ಸುಗಳಿಗೆ ಅನುಪಮಾ ಮಾಡುವ ಪ್ರೀತಿಯ ನಮಸ್ಕಾರ. ಪ್ರತಿ ಕಾರ್ಯಕ್ರಮದಲ್ಲಿ, ಶನಿವಾರ ಮತ್ತು ಭಾನುವಾರ ನಾನು ನಿಮ್ಮನ್ನು ಹೀಗೆ ಸ್ವಾಗತಿಸುತ್ತಿದ್ದೆ. ಆದರೆ ಈಗ ನನ್ನ ಧ್ವನಿ ಹೃದಯದಿಂದ ಬರುತ್ತಿಲ್ಲ. ಏಕೆಂದರೆ ಈ ಮೈಕ್‌ ಅನ್ನು ಕೆಳಗಿಳಿಸುವ ಸಮಯ ಬಂದಿದೆ. ಇಷ್ಟು ವರ್ಷ ನನ್ನ ತಪ್ಪನ್ನು ತಿದ್ದಿದ ನಿಮಗಾಗಿ ಈ ವಿಡಿಯೊ ಮಾಡಿ 8 ವರ್ಷಗಳ ನಿರೂಪಣೆಯ ಪಯಣವನ್ನು ಮುಗಿಸುವ ಸಮಯ ಬಂದಿದೆ’ ಎಂದು ಭಾವುಕರಾಗಿದ್ದಾರೆ.

Leave a Comment

Your email address will not be published. Required fields are marked *