ಮಂಗಳೂರು – ಬೆಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ| ಕರಾವಳಿಗರ ಬಹುದಿನಗಳ ಕನಸು ನನಸು

ಸಮಗ್ರ ನ್ಯೂಸ್: ಕರಾವಳಿ ಭಾಗದ ರೈಲು ಪ್ರಯಾಣಿಕರ ಸುದೀರ್ಘ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಬೆಂಗಳೂರು-ಮಂಗಳೂರು ಸಂಪರ್ಕಿಸುವ ಅತ್ಯಂತ ಸವಾಲಿನ ಘಾಟ್ ರಸ್ತೆಯಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಆಷಾಢ ಅಮಾವಾಸ್ಯೆಯ ಶುಭ ದಿನದಂದು ಚಾಲನೆ ನೀಡಿದೆ.

Ad Widget . Ad Widget . Ad Widget .

ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಇಂದಿನಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನೆಟ್ಟಣ ರೈಲು ನಿಲ್ದಾಣದ ಮಧ್ಯೆ ಈ ರೈಲು ಓಡಾಟವನ್ನು ಆರಂಭಿಸಿದ್ದು, ಪರಿಕ್ಷಾರ್ಥವಾಗಿ ಈ ಸಂಚಾರ ಆರಂಭಗೊಂಡಿದೆ. ಸುಬ್ರಹ್ಮಣ್ಯ ನೆಟ್ಟಣ ರೈಲು ನಿಲ್ದಾಣದಿಂದ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ತನ್ನ ಮೊದಲ ಪ್ರಯಾಣವನ್ನು ಘಾಟ್ ರಸ್ತೆಯ‌ ಮೂಲಕ ಆರಂಭಿಸಿದೆ.ಒಟ್ಟು 20 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರಯಾಣಿಕರ ಬದಲಿಗೆ ಬೋಗಿಯ ತುಂಬಾ ಮರಳು ಚೀಲಗಳನ್ನು ತುಂಬಿಸಿ, ನಿರ್ದಿಷ್ಟ ವೇಗಗಳಲ್ಲಿ ಹಲವು ಬಾರಿ ಘಾಟ್ ಹಳಿಗಳಲ್ಲಿ ಈ ರೈಲನ್ನು ಓಡಿಸಲಾಗುತ್ತದೆ.

Ad Widget . Ad Widget .

ಪ್ರತಿಬಾರಿಯ ಓಡಾಟದ ಸಂದರ್ಭದಲ್ಲೂ ರೈಲಿನ ವೇಗದ ಮಿತಿಯನ್ನು ಹೆಚ್ಚಿಸಿ‌ ಯಾವ ವೇಗದಲ್ಲಿ ರೈಲು ಓಡಲು ಅನುಕೂಲ ಎನ್ನುವ ಪರೀಕ್ಷೆಯನ್ನೂ ಈ ಓಡಾಟದ ಮೂಲಕ ನಡೆಸಲಾಗುತ್ತದೆ. ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಬೇಕು ಎನ್ನುವ ಜಿಲ್ಲೆಯ ಜನತೆಯ ಮನವಿಗೆ‌ ಇಲಾಖೆ ಸ್ಪಂದಿಸಿರುವುದು ರೈಲು ಪ್ರಯಾಣಿಕರ ಸಂತಸಕ್ಕೂ ಕಾರಣವಾಗಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜೂನ್ ತಿಂಗಳೊಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ಕಡಿದಾದ ಇಳಿಜಾರು ಇರುವುದರಿಂದ, ಸಾಮಾನ್ಯ ರೈಲುಗಳಿಗೆ ಬ್ಯಾಂಕರ್ ಇಂಜಿನ್‌ಗಳನ್ನು ಜೋಡಿಸಬೇಕಿತ್ತು. ಆದರೆ ವಂದೇ ಭಾರತ್ ರೈಲಿನ ಸ್ವಯಂಚಾಲಿತ ವೇಗ ನಿಯಂತ್ರಣಕ್ಕಾಗಿ ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ತಂತ್ರಜ್ಞಾನ ಹೊಂದಿರುವ 20 ಕೋಚ್‌ಗಳ ವಂದೇ ಭಾರತ್ ರೇಕ್ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) ಆಗಮಿಸಿದ್ದು, ಇದೀಗ ಓಡಾಟವನ್ನು ಆರಂಭಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟಕ್ಕೆ ಸುಬ್ರಹ್ಮಣ್ಯ ದಿಂದ ಸಕಲೇಶಪುರದವರೆಗಿನ ರೈಲು ಮಾರ್ಗ ಯಾವ ರೀತಿ ಸಿದ್ಧಗೊಂಡಿದೆ ಅನ್ನೋದನ್ನು ರೈಲ್ವೇ ಸುರಕ್ಷತಾ ವಿಭಾಗ ಹಲವು ಪರೀಕ್ಷೆಗಳನ್ನು ನಡೆಸಿದೆ. ರೈಲು ಬೋಗಿಯೊಳಗೆ ಮರಳು ತುಂಬಿದ ಗೋಣಿಚೀಲಗಳನ್ನು ಭರ್ತಿ ಮಾಡಿ ಹಲವು ಬಾರೀ ರೈಲು ಮಾರ್ಗದಲ್ಲಿ ಓಡಿಸಲಾಗಿದ್ದು, ಈ ಪರೀಕ್ಷೆ ಸಫಲವಾದ ಹಿನ್ನಲೆಯಲ್ಲಿ ಇದೀಗ ರೈಲ್ವೇ ಇಲಾಖೆ ವಂದೇ ಭಾರತ್ ರೈಲು ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ನಡುವೆ ವಂದೇ ಭಾರತ್ ರೈಲು ಹಳಿಯಲ್ಲಿ ಪರೀಕ್ಷಾರ್ಥವಾಗಿ ಸಂಚರಿಸಲು ಆರಂಭಿಸಿದ್ದು, ಆಷಾಢ ಅಮಾವಾಸ್ಯೆಯ ಶುಭದಿನದಂತೆ ಈ ಪ್ರಾಯೋಗಿಕ ರೈಲು‌ ತನ್ನ ಮೊದಲ ಸಂಚಾರ ಆರಂಭಿಸಿದೆ.

Leave a Comment

Your email address will not be published. Required fields are marked *