“ಕುಡ್ಲದ ಜನಕುಲು ಪೊಲೀಸ್ ಕೆಲ್ಸೊಗು ಸೇರ್ಲೆ”| ತುಳು ಗೊತ್ತಿದ್ರೆ ಪ್ಲಸ್ ಪಾಯಿಂಟ್| ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಂದೇಶ

ಸಮಗ್ರ ನ್ಯೂಸ್: “ಎನ್ನ ವೃತ್ತಿ ಜೀವನಡ್‌ ಕುಡ್ಲ ಎನ್ನ ಇಷ್ಟದ ಊರು. ಎನ್ನ ಸೇವಾವಧಿಡ್‌ ಎಚ್ಚ ಸರ್ವಿಸ್‌ ಮಲ್ತಿನ ಊರುಲ ಉಂದುವೇ. ಕುಡ್ಲದ ಜನಕುಲು ಮಸ್ತ್‌ ಎಡ್ಡೆಂತಿನಕುಲು, ಬೊಕ್ಕ ಮಸ್ತ್‌ ಬುದ್ಧಿವಂತೆರ್‌ ಪೊಲೀಸ್‌ ಇಲಾಖೆಡ್‌ ಕರ್ತವ್ಯ ಮುಲ್ಪುನ ಗೌರವದ ಕೆಲಸ. ಕುಡ್ಲದಕುಲು ಪೊಲೀಸ್‌ ಡಿಪಾರ್ಟ್‌ಮೆಂಟ್‌ ಸೇರ್ಲೆ, ಅವು ಬೊಕ್ಕಲಾತ್‌ ಇಲಾಖೆಗ್‌ ಶಕ್ತಿ ಆಪುಂಡು.”

Ad Widget ... .. Ad Widget .

ಮಂಗಳೂರಿನ ಬಗ್ಗೆ ಹಾಗೂ ಇಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳೊಂದಿಗೆ ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಅವರು ಯುವ ಸಮುದಾಯ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗುವಂತೆ ವಿಜಯ ಕರ್ನಾಟಕ ಮೂಲಕ ಮನವಿ ಮಾಡಿದ್ದಾರೆ.

Ad Widget

ಮಂಗಳೂರು ರಾಜ್ಯದ ಅತಿವೇಗವಾಗಿ ಬೆಳೆಯುತ್ತಿರುವ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿದ್ದು, ವೈದ್ಯಕೀಯ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಐದು ಕಮಿಷನರೇಟ್‌ಗಳಲ್ಲಿ ಮಂಗಳೂರು ಕೂಡ ಒಂದಾಗಿದ್ದು, 500ಕ್ಕೂ ಅಧಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ರಾಜ್ಯಾದ್ಯಂತ ಖಾಲಿ ಇರುವ 3395 ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 195 ಹುದ್ದೆಗಳು ಮಂಜೂರಾಗಿವೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ರಾಜ್ಯದ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿವೆ. ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಆಚರಣೆಗಳಲ್ಲಿ ವಿಶಿಷ್ಟತೆ ಇದೆ. ಇಲ್ಲಿನ ಜನರು ಸುಶಿಕ್ಷಿತರಾಗಿದ್ದು, ಕಾನೂನು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಯುವಕರು ಪೊಲೀಸ್‌ ಇಲಾಖೆಗೆ ಸೇರ್ಪಡೆಯಾದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ನೆರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

195 ಹುದ್ದೆಗಳ ವಿವರ:
ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗೆ 125 ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಗೆ 70 ಹುದ್ದೆಗಳು ಮಂಜೂರಾಗಿವೆ.

ಕಮಿಷನರೇಟ್‌ ವ್ಯಾಪ್ತಿ:
ಪುರುಷರು – 83
ಮಹಿಳೆಯರು- 28
ಸೇವಾನಿರತ ಪೊಲೀಸ್‌ ಕಾನ್‌ಸ್ಟೇಬಲ್‌ (ಪುರುಷ) – 10
ಸೇವಾನಿರತ ಪೊಲೀಸ್‌ ಕಾನ್‌ಸ್ಟೇಬಲ್‌ (ಮಹಿಳೆ) – 3
ತೃತೀಯ ಲಿಂಗಿ – 1

ಜಿಲ್ಲಾ ಪೊಲೀಸ್‌ ವ್ಯಾಪ್ತಿ:
ಪುರುಷರು – 46
ಮಹಿಳೆಯರು – 16
ಸೇವಾನಿರತ ಪೊಲೀಸ್‌ ಕಾನ್‌ಸ್ಟೇಬಲ್‌ (ಪುರುಷ) – 5
ಸೇವಾನಿರತ ಪೊಲೀಸ್‌ ಕಾನ್‌ಸ್ಟೇಬಲ್‌f (ಮಹಿಳೆ) – 2
ತೃತೀಯ ಲಿಂಗಿ – 1

ಈ ಹುದ್ದೆಗಳಲ್ಲಿ ಗ್ರಾಮೀಣ ಅಭ್ಯರ್ಥಿಗಳು, ಮಾಜಿ ಸೈನಿಕರು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು, ಯೋಜನೆಗಳಿಂದ ನಿರ್ವಸಿತರು ಹಾಗೂ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ.

Leave a Comment

Your email address will not be published. Required fields are marked *