ಸಮಗ್ರ ನ್ಯೂಸ್: ಇಂದು ಕರ್ನಾಟಕದಲ್ಲಿ ಮೇಲ್ಮನೆ ಮಹಾಯುದ್ಧ ನಡೆಯುತ್ತಿದೆ. ವಿಧಾನಪರಿಷತ್ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಈ ಚುನಾವಣೆ ಎದುರಾಗಿದ್ದು, ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.
ಕಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಲು ಕನಿಷ್ಠ 28 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.
ಕಾಂಗ್ರೆಸ್ ಪಕ್ಷವು ಕಣಕ್ಕಿಳಿಸಿರುವ ಐದೂ ಅಭ್ಯರ್ಥಿಗಳನ್ನು ನಿರಾಯಾಸವಾಗಿ ಗೆಲ್ಲಿಸಲು ಒಟ್ಟು 140 ಮತಗಳ ಅವಶ್ಯಕತೆಯಿದೆ. ಆದರೆ ಕಾಂಗ್ರೆಸ್‌ನ ಸ್ವಂತ ಬಲ ಇರುವುದು 135 ಮಾತ್ರ. ಈ ಕೊರತೆಯನ್ನು ನೀಗಿಸಲು ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್ ,ಕೆ.ಎಚ್ ಪುಟ್ಟಸ್ವಾಮಿ ಗೌಡ ಮತ್ತು ಸರ್ವೋದಯ ಕರ್ನಾಟಕ ಪಕ್ಷದ (ದರ್ಶನ ಪುಟ್ಟಣ್ಣಯ್ಯ) ಒಬ್ಬ ಶಾಸಕನ ಬೆಂಬಲ ಕ್ರೋಢೀಕರಿಸಲಾಗಿದ್ದು, ಈ ಸಂಖ್ಯೆ 138ಕ್ಕೆ ತಲುಪಿದೆ.
ಇದರ ಜೊತೆಗೆ, ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕೂಡ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರಿಬ್ಬರೂ ಕೂಡಾ ಕಾಂಗ್ರೆಸ್ ಶಾಸಕರ ಜೊತೆಯೇ ಅಣಕು ಮತದಾನದಲ್ಲಿ ಭಾಗಿಯಾಗಿದ್ದು, ಇವರ ಮತ ಕಾಂಗ್ರೆಸ್ ಪಾಲಾಗೋದು ಫಿಕ್ಸ್ ಆಗಿದೆ.
ಬಿಜೆಪಿ ಸದ್ಯ 62 ಸ್ಥಾನವನ್ನು ಹೊಂದಿದೆ, ತಮ್ಮ ಇಬ್ಬರು ಅಭ್ಯರ್ಥಿಗೆ ಬೇಕಾದ ನಂಬರ್ (56) ನಂತರ, ಆರು ಹೆಚ್ಚುವರಿ ಮತಗಳು ಉಳಿಯಲಿದೆ. ಇನ್ನು, ಜೆಡಿಎಸ್ ಹದಿನೆಂಟು ಶಾಸಕರನ್ನು ಹೊಂದಿದೆ. ಎರಡು ಕೂಡಿಸಿದರೆ 24 ಆಗುತ್ತದೆ. ಇಲ್ಲಿ, ಜೆಡಿಎಸ್ಸಿಗೆ ನಾಲ್ಕು ಶಾಸಕರ ಬೆಂಬಲ ಬೇಕಾಗುತ್ತದೆ.
ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜನಾರ್ದನ ರೆಡ್ಡಿಯವರ ಬೆಂಬಲವನ್ನು ಪಡೆಯಲು ಜೆಡಿಎಸ್ಸಿಗೆ ಸಾಧ್ಯವಾದರೂ, ಮತ್ತೆ ಎರಡು ಸಂಖ್ಯಾಬಲದ ಕೊರತೆಯಾಗಲಿದೆ ಇದು ಕೂಡ ಕುತೂಹಲ ಮೂಡಿಸಿದೆ.








