ಸಮಗ್ರ ನ್ಯೂಸ್: ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ ನೀಡಿದ್ದಾರೆ. ದೇಗುಲದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಕಳೆದ ಜೊಸೆಫ್ ವಿಜಯ್ ಬಳಿಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ ನೀಡಿದ್ದಾರೆ. ದೇಗುಲದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಕಳೆದ ಜೊಸೆಫ್ ವಿಜಯ್ ಬಳಿಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ.
ದೇಗುಲದಿಂದ ಗೆಸ್ಟ್ ಹೌಸ್ ವರೆಗೂ ಜೊಸೆಫ್ ವಿಜಯ್ ತಾವೇ ಕಾರು ಡ್ರೈವಿಂಗ್ ಮಾಡಿಕೊಂಡು ತೆರಳಿದ್ದಾರೆ. ಅಭಿಮಾನಿಗಳಿಂಜದ ಕಿಕ್ಕಿರಿದು ತುಂಬಿದ್ದ ಭಕ್ತರ ನಡುವೆ ವಿಜಯ್ ಸಿನಿಮಾ ಶೈಲಿಯಲ್ಲಿ ಕಾರು ಹತ್ತಿ ತೆರಳಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ವಿಜಯ್, ಯಾವುದೇ ಸಂಕಲ್ಪ ಅರ್ಚಕರ ಬಳಿ ಹೇಳಿಲ್ಲ.
ಮುಖ್ಯಮಂತ್ರಿ ಜೊಸೆಫ್ ವಿಜಯ್ ಬಂದಾಗ ಪೂರ್ಣ ಕುಂಭ ಸ್ವಾಗತ ನೀಡಿದ್ದೇವೆ. ಸ್ತಂಭ ಗಣಪತಿಯಲ್ಲಿ ಪ್ರಾರ್ಥನೆ ಮಾಡಿಸಲಾಗಿದೆ. ಬಳಿಕ ಒಳಗೆ ಕರೆದುಕೊಂಡು ಬಂದು ದರ್ಶನ ಮಾಡಿಸಿದ್ದೇವೆ. ದೇವರ ಸನ್ನಿಧಾನದಲ್ಲಿ ಫಲ ಇಡಿಸಿ ಸಂಕಲ್ಪ ಮಾಡಿಸಲಾಯಿತು ಎಂದು ಅರ್ಚಕ ರಾಮಚಂದ್ರ ಅಡಿಗ ಹೇಳಿದ್ದಾರೆ. ಈ ವೇಶೆ ವಿಜಯ್ ವಿಶೇಷ ಸಂಕಲ್ಪ ಮಾಡಿಲ್ಲ. ಖಡ್ಗವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅರ್ಚಕ ಹೇಳಿದ್ದಾರೆ.








