ಯುದ್ಧ ನಿಲ್ಲಿಸದಿದ್ರೆ ಏಕಾಂಗಿಯಾಗ್ತೀರಿ| ಇಸ್ರೇಲ್ ಗೆ ಅಮೇರಿಕಾ ಎಚ್ಚರಿಕೆ

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ”ಪಶ್ಚಿಮ ಏಷ್ಯಾ ಸಂಘರ್ಷ ತಣಿಸಲು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ನಡುವೆ ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರಿಸಿದರೆ ಇಸ್ರೇಲ್‌ ಏಕಾಂಗಿಯಾಗಲಿದೆ,” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Ad Widget ... .. Ad Widget .

ಈ ಕುರಿತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ಟ್ರಂಪ್ ”ಸಂಧಾನ ಮಾತುಕತೆಯನ್ನು ಹಳ್ಳ ಹಿಡಿಸುವಂತಹ ಯಾವುದೇ ವಿಪರೀತದ ಕ್ರಮಗಳು ನಿಮ್ಮನ್ನು (ಇಸ್ರೇಲ್‌) ಒಂಟಿಯಾಗಿ ಮಾಡಲಿದೆ. ಬೀಬಿ (ಬೆಂಜಮಿನ್‌ ನೆತನ್ಯಾಹು) ತುಂಬ ಜಾಗರೂಕಧಿನಾಗಿರು. ಇಲ್ಲವಾದಲ್ಲಿ ನೀನು ಒಬ್ಬಂಟಿಯಾಗುವೆ. ಇರಾನ್‌ ಮೇಲಿನ ಅಪ್ರಚೋದಿತ ದಾಳಿಯು ಭವಿಷ್ಯದಲ್ಲಿ ನಿಮ್ಮನ್ನು ಏಕಾಂಗಿಯಾಗಿ ಮಾಡಬಹುದು. ಅನಾಹುತ ಸಂಭವಿಸುವ ಮೊದಲು ತುಸು ಎಚ್ಚರಿಕೆ ವಹಿಸುವುದು ಉತ್ತಮ,” ಎಂದು ಟ್ರಂಪ್‌ ಕಠಿಣ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

Ad Widget

ಭಾನುವಾರ ಇರಾನ್‌ ವಿರುದ್ಧ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್‌ ನಡೆ ಖಂಡಿಸಿದ್ದ ಟ್ರಂಪ್‌, ನೇರವಾಗಿ ನೆತನ್ಯಾಹುಗೆ ಕರೆ ಮಾಡಿ, ಕೂಡಲೇ ಸೇನಾ ಕಾರ್ಯಾಚರಣೆ ಕೊನೆಗೊಳಿಸುವಂತೆ ತಾಕೀತು ಮಾಡಿದ್ದರು. ಮಾತುಕತೆ ವೇಳೆ, ”ಸಂಧಾನ ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಇರಾನ್‌ ಮೇಲಿನ ದಾಳಿ ಮೂರ್ಖತನದ ಕ್ರಮವಾಗಿದೆ. ಅಮೆರಿಕಾ ಸಮ್ಮತಿ ಇಲ್ಲದೇ ಅನಗತ್ಯವಾಗಿ ಸೇನಾ ದಾಳಿ ಮುಂದುವರಿಸಿದರೆ ಭವಿಷ್ಯದಲ್ಲಿ ನೀವು ಒಂಟಿಯಾಗುತ್ತೀರಿ. ಅಮೆರಿಕಾ-ಇಸ್ರೇಲ್‌ ಸಂಬಂಧಕ್ಕೂ ಅಪಾಯ ಎದುರಾಗಬಹುದು,” ಎಂದು ಎಚ್ಚರಿಕೆ ನೀಡಿದರು.

Leave a Comment

Your email address will not be published. Required fields are marked *