ಇಂದಿನಿಂದ ಖಾಸಗಿ ಬಸ್ ಪ್ರಯಾಣ ದರ ಏರಿಕೆ| ಶೇ. 5 ರಿಂದ 8 ರಷ್ಟು ಹೆಚ್ಚಳ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಖಾಸಗಿ ಬಸ್ ಪ್ರಯಾಣಿಕರಿಗೆ ಇಂದಿನಿಂದ ಟಿಕೆಟ್‌ ದರ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿವಾಹನ ಬಸ್‌ಗಳ ಪ್ರಯಾಣ ದರವನ್ನ ಶೇ. 5 ರಿಂದ 8 ರಷ್ಟು ಹೆಚ್ಚಳ ಮಾಡಲಾಗಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

Ad Widget ... .. Ad Widget .

ಡೀಸೆಲ್ ದರ ಏರಿಕೆ, ವಾಹನ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ನೌಕರರ ವೇತನದ ಒತ್ತಡದಿಂದ ಬೆಲೆ ಏರಿಕೆ ಅನಿವಾರ್ಯ ಅಂತ ಮಾಲೀಕರು ಸ್ಪಷ್ಟಪಡಿಸಿದ್ದಾರೆ.

Ad Widget

ಸ್ಟೇಜ್ ಕ್ಯಾರಿಯೇಜ್ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಫೆಡರೇಷನ್ ಆಫ್ ಸ್ಟೇಜ್ ಕ್ಯಾರಿಯೇಜ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಟಿಕೆಟ್ ದರ ಶೇಕಡಾ 5 ರಿಂದ ಶೇಕಡಾ 8ರವರೆಗೆ ಹೆಚ್ಚಿಸಲಾಗಿದೆ.

ಒಕ್ಕೂಟದ ರಾಜ್ಯ ಅಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಈ ಬಗ್ಗೆ ಮಾತಾಡಿದ್ದು, ಕೇಂದ್ರ ಸರಕಾರ ನಾಲ್ಕು ಬಾರಿ 8.17 ಡೀಸೆಲ್ ದರ ಜಾಸ್ತಿ ಮಾಡಿದೆ. ರಾಜ್ಯ ಸರ್ಕಾರ ವರ್ಷದ ಹಿಂದೆ ರೂ.3 ಏರಿಕೆ ಮಾಡಿತ್ತು. ಹಾಗೇ ವಾಹನಗಳ ಬಿಡಿ ಭಾಗಗಳ ದರ ಹೆಚ್ಚಾಗಿದೆ. ಟಯರ್ ರಿಸೋಲಿಂಗ್ ದರ ಹೆಚ್ಚಾಗಿದ್ದು, ಟೋಲ್ ದರ, ನೌಕರರ ವೇತನ , ತೆರಿಗೆ , ಇನ್ಸೂರೆನ್ಸ್ ಎಲ್ಲವೂ ಹೆಚ್ಚಾಗಿದೆ ಹೀಗಾಗಿ ಬಸ್ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

Leave a Comment

Your email address will not be published. Required fields are marked *