ಬಿಗ್ ಬಾಸ್ ಗೆ ಈಗ ನೀವೂ ಪಾಲ್ಗೊಳ್ಳಬಹುದು| ಈ ಸೀಸನ್ ಜನಸಾಮಾನ್ಯರದ್ದು!!

ಸಮಗ್ರ ನ್ಯೂಸ್: ಬಿಗ್‌ಬಾಸ್‌ ಸೀಸನ್‌ 12 ಮುಗಿದು ಈಗಾಗಲೇ ಒಂದು ವರ್ಷ ಕಳೆದಿವೆ. ಪ್ರತೀ ಬಾರಿ ಬಿಗ್‌ಬಾಸ್‌ ಆರಂಭವಾದಾಗೆಲ್ಲಾ, ಬರೀ ಸಿನಿಮಾ, ಸೀರಿಯಲ್‌ ಸ್ಟಾರ್‌ಗಳನ್ನೇ ಆಯ್ಕೆ ಮಾಡುತ್ತಾರೆ.ಜನ ಸಾಮಾನ್ಯರಿಗೆ ಅವಕಾಶ ಕೊಡೋದೆ ಇಲ್ಲ ಎಂಬ ಮಾತುಗಳು ಬರ್ತಾ ಇತ್ತು. ಇದೀಗ ಈ ಬಾರಿ ಬಿಗ್‌ಬಾಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ನೂರಾರು ಮಂದಿ ಬಂದು ಹೋಗಿರುವ ದೊಡ್ಮನೆಯೊಳಗೆ ಇದೀಗ ಜನಸಾಮಾನ್ಯರು ಭಾಗವಹಿಸುವ ಅವಕಾಶ ಬಂದೊದಗಿದೆ.

Ad Widget ... .. Ad Widget .

ಹೊರಗಡೆಯಿಂದಾ ಅರಮನೆ, ಒಳಗಡೆಯಿಂದ ಸೆರೆಮನೆ ಎಂಬ ಹಾಡಿನೊಂದಿಗೆ ಆರಂಭ ಕಂಡ ಬಿಗ್‌ಬಾಸ್‌ ಈಗಾಗಲೇ 12 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೀಗ ಬಿಗ್‌ ಬಾಸ್‌ 13ನೇ ಸೀಸನ್‌ (Bigg Boss Season 13) ಆರಂಭವಾಗಲಿದೆ. ಈ ಬಗ್ಗೆ ಸ್ವತಃ ಕಲರ್ಸ್‌ ಕನ್ನಡವೇ ಮಾಹಿತಿ ಹಂಚಿಕೊಂಡಿದೆ. ಅಚ್ಚರಿ ಏನೆಂದರೆ, ಈ ಬಾರಿ ಬಿಗ್‌ಬಾಸ್‌ ಮನೆಯೊಳಗೆ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ, ಜನಸಾಮಾನ್ಯರೂ ಹೋಗುವ ಅವಕಾಶ ಸಿಗಲಿದೆ.

Ad Widget

ಕಲರ್ಸ್‌ ಕನ್ನಡ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 2026ರ ಬಿಗ್‌ಬಾಸ್‌ ಸೀಸನ್‌ನಲ್ಲಿ ಜನ ಸಾಮಾನ್ಯರು ಕೂಡಾ ಎಂಟ್ರಿ ಕೊಡಬಹುದು ಎಂದು ಹೇಳಲಾಗಿದೆ. ಅಲ್ಲದೇ ಆಡಿಷನ್‌ (Bigg Boss Audition) ಕೂಡಾ ನಡೆಸಲಾಗುವುದು ಎಂದು ಹೇಳಲಾಗಿದ್ದು, ಯಾವ ರೀತಿ ಆಡಿಷನ್‌ನಲ್ಲಿ ಭಾಗವಹಿಸಬೇಕೆಂಬುದನ್ನು ಸ್ವತಃ ಕಲರ್ಸ್‌ ಕನ್ನಡ ವಾಹಿನಿ ತಿಳಿಸಿದೆ.

ಇನ್ನು ಕಲರ್ಸ್‌ ಕನ್ನಡ ಅಪ್‌ಲೋಡ್‌ ಮಾಡಿರುವ ಆಡಿಷನ್‌ ಪ್ರೋಮೋದಲ್ಲಿ “ನಮಸ್ತೆ ಕರ್ನಾಟಕ, ಹೇಗಿದ್ದೀರಾ? ಅವಕಾಶ ಸಿಗದಿರೋ ಆಸೆಗಳಿಗೆ ಅರ್ಥನೇ ಇರೋದಿಲ್ಲಾ.. ಈ ಬಾರಿ ನಿಮ್ಮಂತಹ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟೋ ಅವಕಾಶವನ್ನ ನೀಡುತ್ತಿದ್ದಾರೆ ಬಿಗ್‌ಬಾಸ್‌… ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು, ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್‌ಬಾಸ್‌ ಮನೆಗೆ ಸ್ವಾಗತ” ಎಂದು ಜನಸಾಮಾನ್ಯರಿಗೆ “ಬಿಗ್‌ಬಾಸ್‌” ಆಡಿಷನ್‌ನಲ್ಲಿ ಭಾಗವಹಿಸಲು ಹೇಳಿದ್ದಾರೆ.

ಮೊದಲಿಗೆ ನೀವ್ಯಾಕೆ ಬಿಗ್‌ಬಾಸ್‌ ಮನೆಯಲ್ಲಿರಬೇಕು ಅನ್ನೋದನ್ನು 3 ನಿಮಿಷದ ವಿಡಿಯೋ ಮಾಡಿ, ನಿಮ್ಮ ವಿವರಣೆಯೊಂದಿಗೆ colorskannada.jiostar.comನಲ್ಲಿ ಅಪ್‌ಲೋಡ್‌ ಮಾಡಬೇಕು. ಬಿಗ್‌ ಬಾಸ್‌ ಆಡಿಷನ್‌ನಲ್ಲಿ ಭಾಗವಹಿಸಲು Colorskannada.jiostar.com ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಬೇಕು. ಆ ಬಳಿಕ Send OTP ಬಟನ್‌ ಕ್ಲಿಕ್‌ ಮಾಡಿ. ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ಒಟಿಪಿ ನಮೂದಿಸಿ ಮತ್ತು VERIFY ಬಟನ್‌ ಮೇಲೆ ಕ್ಲಿಕ್‌ ಮಾಡಿ. ಒಂದು ವೇಳೆ ನಿಮಗೆ ಓಟಿಪಿ ಬರದೇ ಇದ್ದರೆ, ನೀವು DND (Do Not Disturb Mode) ಆಕ್ಟಿವೇಟ್‌ ಮಾಡಿರುತ್ತೀರಿ ಎಂದರ್ಥ. ಆದ್ದರಿಂದ ತಕ್ಷಣ ಮೊಬೈಲ್‌ ಆಪರೇಟರ್‌ ಸಂಪರ್ಕಿಸಿ ಸರಿಪಡಿಸಿಕೊಳ್ಳಿ.

Leave a Comment

Your email address will not be published. Required fields are marked *