ದೇಶದ ಜನತೆಗೆ ಮತ್ತೆ ಬಿಗ್ ಶಾಕ್ ನೀಡಿದ ಕೇಂದ್ರ| ಗೃಹಬಳಕೆ LPG ಮೇಲೆ ₹ 29 ಏರಿಕೆ

ಸಮಗ್ರ ನ್ಯೂಸ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರಿನ ಬಿಸಿ ಭಾರತದ ಗ್ರಾಹಕರಿಗೆ ತಟ್ಟಿದೆ. ಗೃಹಬಳಕೆಯ ಅಡುಗೆ ಅನಿಲದ (LPG) ಬೆಲೆಯನ್ನು ಪ್ರತಿ 14.2 ಕೆಜಿ ಸಿಲಿಂಡರ್‌ಗೆ 29 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದ್ದು, ಜೂನ್ 7 ರಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.

Ad Widget ... .. Ad Widget .

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ ಮತ್ತು ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದೇ ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದು ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ಎರಡನೇ ದರ ಹೆಚ್ಚಳವಾಗಿದೆ.

Ad Widget

ಈ ಹೊಸ ದರ ಏರಿಕೆಯೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ತಲುಪಿದೆ. ಇದಕ್ಕೂ ಮುನ್ನ, ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾದ ಬೆನ್ನಲ್ಲೇ, ಕಳೆದ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯನ್ನು 60 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.

Leave a Comment

Your email address will not be published. Required fields are marked *