ಜೂನ್ 3 ರಿಂದ ಬೆಂಗಳೂರು – ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ

ಸಮಗ್ರ ನ್ಯೂಸ್: ಕರ್ನಾಟಕ ಕರಾವಳಿ ಭಾಗಕ್ಕೆ ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಕನಸು ನನಸಾಗುತ್ತಿದೆ. ವಂದೇ ಭಾರತ್ ರೈಲಿಗೆ ಇತ್ತೀಚೆಗೆ ಅನುಮೋದನೆ ನೀಡಿದ ಬೆನ್ನಲ್ಲೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿರುವ ರೈಲ್ವೆ ಇಲಾಖೆಯು ಇದೇ ಜೂನ್ 3ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ.

Ad Widget ... .. Ad Widget .

ಪ್ರಮುಖ ರೈಲ್ವೆ ತಪಾಸಣೆಗಳು, ಪರೀಕ್ಷೆಗಳು ಈ ವೇಳೆ ನಡೆಯಲಿವೆ.
ದಕ್ಷಿಣ ಕರ್ನಾಟಕದ ಭಾಗದಿಂದ ಕರಾವಳಿ ಕರ್ನಾಟಕದ ಭಾಗಕ್ಕೆ ವೇಗದ ರೈಲು ಸಾರಿಗೆ ಸಿಕ್ಕಂತಾಗಲಿದೆ. ಇದು ಪ್ರಯಾಣಿಕರಿಗೆ, ವ್ಯಾಪಾರ, ವಾಣಿಜ್ಯಕ್ಕೆ ಪೂರಕವಾಗುವ ಜೊತೆಗೆ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಒಟ್ಟು 8 ಬೋಗಿಗಳ ರೈಲು ಬುಧವಾರ (ಜೂನ್ 3) ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ಒಟ್ಟು 8 ಗಂಟೆ 40ನಿಮಿಷಗಳು ಕ್ರಮಿಸಿ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.

Ad Widget

ರೈಲು ಮಾರ್ಗ, ನಿಲುಗಡೆ ವಿವರ
ಬೆಂಗಳೂರಿನಿಂದ ಹೊರಟು ನೇರ ಹಾಸನವನ್ನು ಬೆಳಗ್ಗೆ 9 ಗಂಟೆಗೆ ತಲುಪುತ್ತದೆ. 10 ನಿಮಿಷ ಬಳಿಕ ಅಲ್ಲಿಂದ ಹೊರಟು 9.55 ಗಂಟೆಗೆ ಸಕಲೇಶಪುರ ತಲುಪಲಿದೆ. ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರಸ್ತೆ, 2ಗಂಟೆಗೆ ಪಡೀಲ್ ನಂತರ 2.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪುತ್ತದೆ.

ಪುನಃ ಅದೇ ದಿಕ್ಕಿನಲ್ಲಿ ರೈಲು ಮಂಗಳೂರಿನಿಂದ 2.45ಕ್ಕೆ ಹೊರಡುತ್ತದೆ. ಪಡೀಲ್ (3.10ಗಂಟೆ)‌, ಸುಬ್ರಹ್ಮಣ್ಯ ರಸ್ತೆ (3.50ಗಂಟೆ), ಸಕಲೇಶಪುರ (4.30ಕ್ಕೆ), ಹಾಸನ (7.30ಕ್ಕೆ) ಮೂಲಕ ಬೆಂಗಳೂರಿಗೆ ರಾತ್ರಿ 11 ಗಂಟೆಗೆ ಬಂದು ಸೇರುತ್ತದೆ.

ಪ್ರಾಯೋಗಿಕ ಹಂತದಲ್ಲಿರುವ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಕಾರ್ಯಾಚರಣೆ ಸಂಬಂಧ ತಾತ್ಕಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಶೀಘ್ರವೇ ಅಂತಿಮ ವೇಳಾಪಟ್ಟಿ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಒಟ್ಟು 12 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ದೇಶದ ನಾನಾ ಕಡೆಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಕರಾವಳಿಗೆ ವಂದೇ ಭಾರತ್ ರೈಲು ಬಿಡುವಂತೆ ಸಾಕಷ್ಟು ಬೇಡಿಕೆ ಕೇಳಿ ಬಂದಿತ್ತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರು ಘೋಷಣೆ ಮಾಡಿದ್ದರು ಸಹಿತ ಯಾವುದೇ ಅಧಿಕೃತಗೊಂಡಿರಲಿಲ್ಲ. ಸದ್ಯ ಕರಾವಳಿ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿದ್ದು, ಬೆಂಗಳೂರು-ಮಂಗಳೂರು ರೈಲು ಸಾರಿಗೆ ಮತ್ತಷ್ಟು ಸುಧಾರಣೆ ಆಗಲಿದೆ.

Leave a Comment

Your email address will not be published. Required fields are marked *