ನಾನು ಮೋದಿ‌ ಬಿಗ್ ಪ್ಯಾನ್, ಭಾರತಕ್ಕೆ ಏನು ಬೇಕಿದ್ದರೂ ಸಿಗುತ್ತೆ – ಟ್ರಂಪ್

ಸಮಗ್ರ ನ್ಯೂಸ್: “ನಾನು ಭಾರತ ಮತ್ತು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಭಾರತಕ್ಕೆ ಏನು ಬೇಕಿದ್ದರೂ ಸಿಗುತ್ತೆ, ನನ್ನನ್ನ ನೂರಕ್ಕೆ ನೂರು ನಂಬಬಹುದು!” – ಹೀಗಂತ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ.

Ad Widget ... ..

ನವದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ನಡೆದ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದೋಸ್ತಿ ಮತ್ತೊಮ್ಮೆ ಜಗತ್ತಿನ ಎದುರು ಅನಾವರಣಗೊಂಡಿದೆ.

Ad Widget

ಕಾರ್ಯಕ್ರಮದ ಲೈವ್‌ನಲ್ಲೇ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಫೋನ್ ಮಾಡಿದ ಟ್ರಂಪ್, ಭಾರತ ಹಾಗೂ ಪಿಎಂ ಮೋದಿ ಮೇಲಿನ ತಮ್ಮ ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ನಡೆದ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದರು. “ನನಗೆ ಭಾರತ ಎಂದರೆ ತುಂಬಾ ಇಷ್ಟ. ಪ್ರಧಾನಿ ಮೋದಿ ನನ್ನ ಅತ್ಯುತ್ತಮ ಸ್ನೇಹಿತ ಮತ್ತು ಗ್ರೇಟ್ ನಾಯಕ” ಎಂದು ಶ್ಲಾಘಿಸಿದರು.

ಭಾರತವು ಯಾವುದೇ ಸಂದರ್ಭದಲ್ಲೂ ಅಮೆರಿಕವನ್ನು ನೂರಕ್ಕೆ ನೂರರಷ್ಟು ನಂಬಬಹುದು ಮತ್ತು ತಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಟ್ರಂಪ್ ಭರವಸೆ ನೀಡಿದರು. ಇದೇ ವೇಳೆ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರನ್ನು ದೇಶದ ಇತಿಹಾಸದಲ್ಲೇ ಅತ್ಯುತ್ತಮ ವಿದೇಶಾಂಗ ಕಾರ್ಯದರ್ಶಿ ಎಂದು ಕೊಂಡಾಡಿದರು.

Leave a Comment

Your email address will not be published. Required fields are marked *