ನಮ್ಮನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ| ಖಾತೆ ಬ್ಯಾನ್ ಬೆನ್ನಲ್ಲೇ ಹೊಸ ಸಂದೇಶ ನೀಡಿದ ಕಾಕ್ರೋಚ್

ಸಮಗ್ರ ನ್ಯೂಸ್: ಕಾಕ್ರೋಚ್ ಜನತಾ ಪಾರ್ಟಿ ಸದ್ದು ಜೋರಾಗಿ ಕೇಳಿಬರುತ್ತಿದೆ. ಚೀಫ್ ಜಸ್ಟೀಸ್ ಆಫ್ ಇಂಡಿಯಾ ಸೂರ್ಯ ಕಾಂತ್ ಜಿರೆಳೆ ಹೇಳಿಕೆಗೆ ಪ್ರತಿಭಟನಾ ರೂಪವಾಗಿ ಹುಟ್ಟಿಕೊಂಡ ಸೋಶಿಯಲ್ ಮೀಡಿಯಾ ಪಾರ್ಟಿ ಕಾಕ್ರೋಚ್ ಜನತಾ ಪಾರ್ಟಿ. ನಾಲ್ಕೇ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದೆ.

Ad Widget ... ..

10 ಮಿಲಿಯನ್ ಫಾಲೋವರ್ಸ್ ಮೂಲಕ ಬಿಜೆಪಿ ಇನ್‌ಸ್ಟಾಗ್ರಾಂ ಖಾತೆ ಹಿಂದಿಕ್ಕಿದ ಬೆನ್ನಲ್ಲೇ ಇತ್ತ ಕಾಕ್ರೋಚ್ ಪಾರ್ಟಿಯ ಎಕ್ಸ್ ಖಾತೆ ಬ್ಲಾಕ್ ಆಗಿದೆ. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೊಸ ಎಕ್ಸ್ ಖಾತೆ ತೆರೆದು ಮಹತ್ವದ ಸಂದೇಶ ನೀಡಿದ್ದಾರೆ.

Ad Widget

ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಬ್ಲಾಕ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೊಸ ಖಾತೆ ತೆರೆದಿದ್ದಾರೆ. ಕಾಕ್ರೋಚ್ ಈಸ್ ಬ್ಯಾಕ್ ಎಂಬ ಖಾತೆಯಲ್ಲಿ ಮತ್ತೆ ಸೋಶಿಯಲ್ ಮೀಡಿಯಾ ಚಟುವಟಿಕೆ ಸಕ್ರಿಯವಾಗಿದೆ. ಅಷ್ಟೇ ವೇಗದಲ್ಲಿ ಜನರು ಇದೀಗ ಕಾಕ್ರೋಚ್ ಜನತಾ ಪಾರ್ಟಿಯನ್ನು ಫಾಲೋ ಮಾಡುತ್ತಿದ್ದಾರೆ. ಮೊದಲ ಪೋಸ್ಟ್‌ನಲ್ಲಿ ನಮ್ಮ ಧನಿ ಅಡಗಿಸಲು ಸಾಧ್ಯ ಎಂದು ನೀವು ಅಂದುಕೊಂಡಿದ್ದೀರಾ ಎಂಬ ಪ್ರಶ್ನೆಯೊಂದಿಗೆ ಆರಂಭವಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಖಾತೆಯನ್ನು ಹಿಂದಿಕ್ಕಿದ ಸ್ಕ್ರೀನ್ ಶಾಟ್ ಪೋಸ್ಟರನ್ನು ಹೊಸ ಖಾತೆ ಹಂಚಿಕೊಂಡಿದೆ. ಫಾಲೋವರ್ಸ್ ಸಂಖ್ಯೆಯಲ್ಲಿ ಖಾತೆಯನ್ನು ಹಿಂದಿಕ್ಕಿದ ಸಂಭ್ರವನ್ನು ಹಂಚಿಕೊಳ್ಳಲಾಗಿದೆ. ಇದೀಗ ಜೆನ್‌ಝಿ ಸೇರಿದಂತೆ ಯುವ ಸಮೂಹದ ಸಾಕಷ್ಟು ಮಂದಿ ಈ ಸೋಶಿಯಲ್ ಮೀಡಿಯಾ ಪಾರ್ಟಿ ಫಾಲೋ ಮಾಡುತ್ತಿದ್ದಾರೆ.

ಪಾರದರ್ಶಕ ಆಡಳಿತ,ಸ್ವಚ್ಚ ರಾಜಕೀಯ, ಭ್ರಷ್ಟಾಚಾರ ನಿರ್ಮೂಲನೆ, ನಿರೋದ್ಯೋಗ ಸಮಸ್ಯೆಗಳ ಕುರಿತು ಪಕ್ಷಭೇದವಿಲ್ಲದ ಹೋರಾಟಕ್ಕೆ ನಮ್ಮ ಸಹಮತವಿದೆ. ಆದರೆ ಈ ಕಾಕ್ರೋಚ್ ಜನತಾ ಪಾರ್ಟಿ ಕೇವಲ ಒಂದು ಪಾರ್ಟಿಯನ್ನು ಟಾರ್ಗೆಟ್ ಮಾಡುವಂತಿದೆ. ಇದಕ್ಕೆ ವಿರೋಧವಿದೆ ಎಂದು ಹಲವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಭಾರತಕ್ಕಿಂತ ಈ ಕಾಕ್ರೋಚ್ ಪಾರ್ಟಿಗೆ ವಿದೇಶಿ ರಾಜ್ಯಗಳಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.

ಆಮ್ ಆದ್ಮಿ ಪಾರ್ಟಿಯ ಸೋಶಿಯಲ್ ಮೀಡಿಯಾ ಸ್ಟ್ರಾಟರ್ಜಿ ತಂಡದಲ್ಲಿದ್ದ ಅಭಿಜಿತ್ ದೀಪ್ಕೆ ಆರಂಭಿಸಿದ ಈ ಜನತಾ ಪಾರ್ಟಿ ಹಿಂದೆ ಆಪ್ ಹಾಗೂ ಜೆನ್‌ಝಿ ಸಮೂಹವನ್ನು ಎತ್ತಿಕಟ್ಟಿ ಭಾರತದಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ರೀತಿಯ ದಂಗೆ ಎಬ್ಬಿಸುವ ಹುನ್ನಾರವಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇತ್ತೀಚೆಗೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಮಾತು ಹೇಳಿದ್ದರು. ಭಾರತದಲ್ಲಿ ನೇಪಾಳ, ಬಂಗ್ಲಾದೇಶ ರೀತಿ ಜೆನ್‌ಝಿಗಳು ಬೀದಿಗಳಿದು ಹೋರಾಟ ಮಾಡಿ ಕ್ರಾಂತಿ ಮಾಡಬೇಕು ಎಂದು ಕರೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಈ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಂಡಿದೆ. ಇತ್ತ ಆಫ್ ನಾಯಕರಾದ ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ನಾಯಕರು ವಿಡಿಯೋ ಮೂಲಕ ಈ ಪಾರ್ಟಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಇದರ ಹಿಂದೆ ಆಪ್ ಷಡ್ಯಂತ್ರವಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Leave a Comment

Your email address will not be published. Required fields are marked *