ಇಟಲಿ ಪ್ರಧಾನಿಗೆ ಮೋದಿ ನೀಡಿದ ₹2ರ ಮೆಲೋಡಿ ಚಾಕೊಲೆಟ್| ಇಂಟರ್ನೆಟ್ ನಲ್ಲಿ ಶುರುವಾಯ್ತು ಹೊಸ ಸೆನ್ಸೇಷನ್

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸದಲ್ಲಿ ಇಟಲಿ ಭೇಟಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಕೋಲೋಸಿಯಂನಲ್ಲಿ ದ್ವಿಪಕ್ಷೀಯ ಮಾತುಕತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ. ಎರಡು ರಾಷ್ಟ್ರಗಳ ಸಂಬಂಧವನ್ನು ಪ್ರಧಾನಿ ಮೋದಿ 2 ರೂಪಾಯಿ ಚಾಕೋಲೋಟ್ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

Ad Widget ... ..

ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದಲ್ಲಿ ಭಾರತದ ಕರಕುಶಲತೆ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಭಾರತದ ಪರಂಪರೆ, ಐತಿಹಾಸಕ ಹಿನ್ನಲೆಯ ವಸ್ತುಗಳನ್ನು ಮೋದಿ ಗಿಫ್ಟ್ ಆಗಿ ನೀಡಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ವಿಶೇಷ ಗಿಫ್ಟ್ ಕೊಂಡೊಯ್ದಿದ್ದರು. ಬಳಿಕ ಮೆಲೋನಿ ಭೇಟಿ ವೇಳೆ ಈ ಗಿಫ್ಟ್ ನೀಡಿದ್ದಾರೆ. ಮೆಲೋನಿಗೆ ಮೋದಿ ಮೆಲೋಡಿ ಟೋಫಿ ಗಿಫ್ಟ್ ನೀಡಿದ್ದಾರೆ. ಮೆಲೋಡಿ ಚಾಕೋಲೇಟ್‌ಗಳನ್ನು ಮೆಲೋಡಿಗೆ ಗಿಫ್ಟ್ ನೀಡಿದ್ದಾರೆ.

Ad Widget

ಪ್ರಧಾನಿ ನರೇಂದ್ರ ಮೋದಿ ಹಾಗೂ ಮೆಲೋನಿ ಹಲವು ಭಾರಿ ಉಭಯ ರಾಷ್ಟ್ರಗಳ ಮಾತುಕತೆ ವೇಳೆ ಭೇಟಿಯಾಗಿದ್ದಾರೆ. ಕಳೆದ ಬಾರಿ ಮೋದಿ ಹಾಗೂ ಮೆಲೋನಿ ಭೇಟಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಮತ್ತೊಂದು ಕಾರಣ ಇಟಲಿ ಪ್ರಧಾನಿ ಮೋದಿ ಹಾಗೂ ಮೆಲೋನಿ ಭೇಟಿಯನ್ನು ಮೆಲೋಡಿ ಎಂದು ಕರೆದಿದ್ದರು. ಇದೀಗ ಮೋದಿ ಮೆಲೋಡಿ ಚಾಕೋಲೇಟ್ ನೀಡಿ ಭಾರತ ಹಾಗೂ ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧ ಜೊತೆ ಭಾವನಾತ್ಮಕವಾಗಿಯೂ ಬೆಸೆದಿದ್ದಾರೆ.

ಪ್ರಧಾನಿ ಮೋದಿ ನೀಡಿದ ಗಿಫ್ಟ್ ಕುರಿತು ಜಾರ್ಜಿಯಾ ಮೆಲೋನಿ ವಿಡಿಯೋ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ನನಗೆ ವಿಶೇಷ ಉಡುಗೊರೆಯೊಂದನ್ನು ತಂದಿದ್ದಾರೆ. ಈ ಉಡುಗೊರೆ ವಿಶೇಷ ಹಾಗೂ ಅತ್ಯುತ್ತಮವಾಗಿದೆ ಎಂದು ಮೆಲೋನಿ ಹೇಳಿದ್ದಾರೆ. ಮೋದಿ ಜೊತೆಗೆ ನಿಂತು ಕೊಂಡ ವಿಡಿಯೋ ಮಾಡಿದ್ದಾರೆ. ವಿಶೇಷ ಅಂದರೆ ಮೋದಿ ವಿಶೇಷ ಉಡುಗೊರೆ ನನಗೆ ತಂದಿದ್ದಾರೆ ಎಂದಾಗ ಮೋದಿ, ಮೆಲೋಡಿ ಎಂದಿದ್ದಾರೆ. ಬಳಿಕ ಇಬ್ಬರ ನಗು ಈ ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ದ್ವಿಪಕ್ಷೀಯ ಮಾತಕತೆಯೂ ಭಾರಿ ಚರ್ಚೆಯಾಗುತ್ತಿದೆ. ಮೆಲೋನಿ ಜೊತೆಗೆ ಡಿನ್ನರ್ ಸವಿದ ಮೋದಿ, ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದ್ದಾರೆ. ಭಾರತ ಹಾಗೂ ಇಟಲಿ ನಡುವಿನ ಸಂಬಂಧ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ದ್ವಿಪಕ್ಷೀಯ ವ್ಯವಹಾರಗಳ ಕುರಿತು ಚರ್ಚಿಸಿದ್ದಾರೆ. ರೋಮ್‌ನ ಹಲವು ಐತಿಹಾಸಿಕ ತಾಣಗಳಲ್ಲಿ ಮೋದಿ ಹಾಗೂ ಮೆಲೋನಿ ಭೇಟಿ ಹಾಗೂ ನಡೆಸಿದ ಮಾತುಕತೆ ಫೋಟೋಗಳು ವೈರಲ್ ಆಗಿದೆ.

ಮತ್ತೊಂದೆಡೆ, ಪಾರ್ಲೆ ಇಂಡಸ್ಟ್ರೀಸ್ ಬಿಎಸ್‌ಇ (BSE) ಯಲ್ಲಿ ಲಿಸ್ಟ್ ಆಗಿರುವ ಪ್ರತ್ಯೇಕ ಘಟಕವಾಗಿದೆ. ಮೆಲೋಡಿ ಕ್ಯಾಂಡಿಗಳ ತಯಾರಿಕೆ ಅಥವಾ ಮಾರಾಟದೊಂದಿಗೆ ಇದಕ್ಕೆ ಯಾವುದೇ ನೇರ ವ್ಯಾಪಾರ ಸಂಬಂಧವಿಲ್ಲ. ಪ್ರಸ್ತುತದ ಷೇರು ಏರಿಕೆಯು, ಚಿಲ್ಲರೆ ಹೂಡಿಕೆದಾರರು ಮತ್ತು ವ್ಯಾಪಾರಿಗಳು “ಪಾರ್ಲೆ” ಹೆಸರನ್ನು ವೈರಲ್ ಆದ ಮೆಲೋಡಿ ಕ್ಷಣದೊಂದಿಗೆ ತಪ್ಪಾಗಿ ಸಂಯೋಜಿಸಿ, ಅದೇ ಹೆಸರಿನ ಲಿಸ್ಟೆಡ್ ಕಂಪನಿಯ ಷೇರುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರು ದಿಢೀರ್ ಏರಿಕೆ ಕಂಡಿದೆ.

Leave a Comment

Your email address will not be published. Required fields are marked *