‘ನೀವೇಕೆ ಮಾಧ್ಯಮಗಳ ಪ್ರಶ್ನೆಗಳನ್ನು ಬಯಸುವುದಿಲ್ಲ? ಪ್ರಧಾನಿ ಮೋದಿಗೆ ನಾರ್ವೆ ಪತ್ರಕರ್ತೆಯ ಪ್ರಶ್ನೆ

ಸಮಗ್ರ ನ್ಯೂಸ್: ಮಾಧ್ಯಮಗಳು ಪ್ರಶ್ನೆ ಕೇಳುವುದನ್ನು ಯಾಕೆ ಬಯಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ನಾರ್ವೆಯಲ್ಲಿ ಪತ್ರಕರ್ತೆಯೊಬ್ಬರು ಸೋಮವಾರ ಪ್ರಶ್ನಿಸಿರುವುದಾಗಿ ವರದಿಯಾಗಿದೆ.

. Ad Widget . Ad Widget . Ad Widget .

ಓಸ್ಲೋದಲ್ಲಿ ಪ್ರಧಾನಿ ಮೋದಿ ನಾರ್ವೆ ಪ್ರಧಾನಿ ಜೊನಾಸ್ ಸ್ಟೋರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಮಾಧ್ಯಮ ಹೇಳಿಕೆಯನ್ನು ಓದಿ ಹೇಳಿದ ಬಳಿಕ ಇಬ್ಬರೂ ನಾಯಕರು ಸಭಾಂಗಣದಿಂದ ತೆರಳುತ್ತಿದ್ದಾಗ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್, `ಪ್ರಧಾನಿ ಮೋದಿ, ನೀವು ಯಾಕೆ ವಿಶ್ವದ ಅತ್ಯಂತ ಸ್ವತಂತ್ರ ಮಾಧ್ಯಮದಿಂದ ಪ್ರಶ್ನೆಗಳನ್ನು ಎದುರಿಸಲು ಇಷ್ಟಪಡುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ. (ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಾಂಕದಲ್ಲಿ ನಾರ್ವೆ ಅಗ್ರಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ). ಆದರೆ ಮೋದಿ ಉತ್ತರಿಸದೆ ಸಭಾಂಗಣದಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಬಳಿಕ ಈ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿರುವ ಲಿಂಗ್, `ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರಶ್ನೆಯನ್ನು ಎದುರಿಸಲಿಲ್ಲ. ನಾನು ಅದನ್ನು ನಿರೀಕ್ಷಿಸಿಯೂ ಇರಲಿಲ್ಲ. ಆದರೆ ನಾವು ಸಹಕರಿಸುವ ಜಾಗತಿಕ ಶಕ್ತಿಗಳನ್ನು ಪ್ರಶ್ನಿಸುವುದು ನಮ್ಮ ಕೆಲಸವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಈ ಪೋಸ್ಟ್ ಅನ್ನು ಎಕ್ಸ್’ನಲ್ಲಿ ಹಂಚಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮರೆಮಾಚಲು ಏನೂ ಇಲ್ಲದಿದ್ದರೆ ಭಯಪಡುವುದೇಕೆ? ರಾಜಿ ಮಾಡಿಕೊಂಡ ಪ್ರಧಾನಿ ಪ್ರಶ್ನೆಗಳನ್ನು ಎದುರಿಸಲಾಗದೆ ಓಡಿ ಹೋದರೆ ಜಗತ್ತಿನೆದುರು ಭಾರತದ ‘ಇಮೇಜ್’ ಏನಾದೀತು?’ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *