ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆಯ ದಿನಪತ್ರಿಕೆ| ವ್ಯಂಗ ಚಿತ್ರದಲ್ಲಿ ಜನಾಂಗೀಯ ನಿಂದನೆ!!

ಸಮಗ್ರ ನ್ಯೂಸ್: ನಾರ್ವೆಯ ಪ್ರಮುಖ ಮತ್ತು ಅತ್ಯಂತ ದೊಡ್ಡ ದಿನಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದು, ಇದು ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget ... ..

ಪ್ರಧಾನಿ ಮೋದಿ ಅವರು ಮೇ 18-19 ರವರೆಗೆ ನಾರ್ವೆಗೆ ಅಧಿಕೃತ ರಾಜತಾಂತ್ರಿಕ ಭೇಟಿ ನೀಡಿದ್ದ ಸಂದರ್ಭದಲ್ಲೇ ಪತ್ರಿಕೆಯು ಈ ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದೆ.

Ad Widget

ಈ ವ್ಯಂಗ್ಯಚಿತ್ರಕ್ಕೆ ಪತ್ರಿಕೆಯು “ಒಬ್ಬ ಚತುರ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ” ಎಂಬ ಅವಹೇಳನಕಾರಿ ಶೀರ್ಷಿಕೆಯನ್ನು ನೀಡಿದೆ. ಭಾರತೀಯರನ್ನು ‘ಹಾವಾಡಿಗರು’ ಎಂದು ಕೀಳಾಗಿ ಚಿತ್ರಿಸುವುದು ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಹಿಂದಿನಿಂದಲೂ ನಡೆದುಬಂದಿರುವ ಒಂದು ಅತ್ಯಂತ ಹಳೆಯ ಜನಾಂಗೀಯ ಪಡಿಯಚ್ಚು ಆಗಿದೆ. ಇದನ್ನು ಭಾರತದ ಪ್ರಧಾನಿಯವರ ವಿರುದ್ಧ ಬಳಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರು ತಮ್ಮ ಐದು ದೇಶಗಳ ಯುರೋಪ್ ಪ್ರವಾಸದ ಭಾಗವಾಗಿ ನಾರ್ವೆಗೆ ಭೇಟಿ ನೀಡಿ ಉನ್ನತ ಮಟ್ಟದ ರಾಜತಾಂತ್ರಿಕ ಚರ್ಚೆಗಳನ್ನು ಮುಗಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಭಾರತೀಯರ ತೀವ್ರ ಆಕ್ರೋಶ – ಈ ಅವಹೇಳನಕಾರಿ ಕಾರ್ಟೂನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರು ಹಾಗೂ ಜಾಗತಿಕ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾರ್ವೆ ಪತ್ರಿಕೆಯು ತಕ್ಷಣವೇ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನಾರ್ವೆ ದೇಶದ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಪತ್ರಿಕೆಯೊಂದು ಇಂತಹ ಬೇಜವಾಬ್ದಾರಿಯುತ ಚಿತ್ರ ಪ್ರಕಟಿಸಿರುವುದು ಉಭಯ ದೇಶಗಳ ರಾಜತಾಂತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Comment

Your email address will not be published. Required fields are marked *