ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ‌ ಧರಿಸಿ ಓಡಾಡಿದ ಸಿಬ್ಬಂದಿ| ಪ್ರವಾಸಿಗ ಮಹಿಳೆಯಿಂದ ತರಾಟೆ

ಸಮಗ್ರ ನ್ಯೂಸ್: ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಕೆಂಡಾಮಂಡಲರಾದ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad Widget ... ..

ಇತಿಹಾಸ ಪ್ರಸಿದ್ಧ ಬಾದಾಮಿ ಗುಹಾಲಯಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿ ವಿಶ್ವವಿಖ್ಯಾತ ಬಂಡೆಗಲ್ಲು ಗುಹಾ ದೇವಾಲಯಗಳಿವೆ. ಪ್ರವಾಸದ ಜೊತೆಗೆ ಹಿಂದೂಗಳಿಗೆ ಇದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.

Ad Widget

ಇದೇ ರೀತಿ ಇಲ್ಲಿಗೆ ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಯುವತಿಯನ್ನು ನೋಡಿ ಪ್ರಶ್ನೆ ಮಾಡಿದ್ದಾರೆ. ಹಿಂದೂ ದೇವಾಲಯದೊಳಗೆ ಚಪ್ಪಲಿ ಧರಿಸಿ ಬಂದು ನಮ್ಮ ನಂಬಿಕೆಗೆ ಧಕ್ಕೆ ತಂದಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಾನು ಇಲ್ಲಿನ ಸಿಬ್ಬಂದಿ ಎಂದು ಮುಸ್ಲಿಂ ಯುವತಿ ಹೇಳಿಕೊಂಡಿದ್ದು ಕುತ್ತಿಗೆಯಲ್ಲೂ ಒಂದು ಐಡಿ ಕಾರ್ಡ್ ಹಾಕಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಲ್ಲಿನ ಸಂಪ್ರದಾಯವನ್ನು ಗೌರವಿಸುವದನ್ನೂ ಕಲಿಯಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Leave a Comment

Your email address will not be published. Required fields are marked *