ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಉದ್ಯಮ ಆರಂಭಿಸಿದ ಮೂವರು ಮಹಿಳೆಯರು

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ತಮಗೆ ಸಿಗುತ್ತಿದ್ದ ಮಾಸಿಕ 2,000 ರೂಪಾಯಿ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮೂವರು ಮಹಿಳೆಯರು ಸ್ವಾವಲಂಬಿ ಬದುಕಿಗೆ ಮಾದರಿಯಾಗಿದ್ದಾರೆ.

Ad Widget ... ..

ಈ ಮಹಿಳೆಯರು ಒಟ್ಟಾಗಿ ರೊಟ್ಟಿ ತಯಾರಿಕಾ ಕೇಂದ್ರವನ್ನು ಆರಂಭಿಸಿದ್ದು, ಅದಕ್ಕೆ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ ಎಂದು ಹೆಸರಿಟ್ಟಿದ್ದಾರೆ.

Ad Widget

ಕುಷ್ಟಗಿ ಪಟ್ಟಣದ ನಿವಾಸಿಗಳಾದ ಮಕ್ತುಂಬಿ ಕೊಪ್ಪದ, ಸಾಜನಬಿ ದಾದಿಬಾಯಿ ಮತ್ತು ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರೇ ಈ ಸಾಹಸಕ್ಕೆ ಕೈಹಾಕಿದ ಗೆಳತಿಯರು. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಬರುತ್ತಿದ್ದ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡಿದ್ದ ಈ ಮಹಿಳೆಯರು, ತಲಾ ₹58 ಸಾವಿರದಂತೆ ಒಟ್ಟು ₹1,74,000 ಹಣವನ್ನು ಒಟ್ಟುಗೂಡಿಸಿದ್ದಾರೆ.

ಉಳಿದ ಮೊತ್ತವನ್ನು ತಮ್ಮ ಸ್ವಂತ ಶ್ರಮದಿಂದ ಹೊಂದಿಸಿಕೊಂಡು, ಹುಬ್ಬಳ್ಳಿಯಲ್ಲಿ ₹2 ಲಕ್ಷಕ್ಕೂ ಅಧಿಕ ವೆಚ್ಚದ ರೊಟ್ಟಿ ತಯಾರಿಕಾ ಯಂತ್ರವನ್ನು ಖರೀದಿ ಮಾಡಿದ್ದಾರೆ. ಯಂತ್ರವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಸ್ವಯಂ ಉದ್ಯೋಗ ಆರಂಭಿಸಿರುವ ಈ ಮಹಿಳೆಯರು, ಸರ್ಕಾರದ ಧನಸಹಾಯವನ್ನು ಹೇಗೆ ಬದುಕಿನ ಪ್ರಗತಿಗೆ ಬಳಸಿಕೊಳ್ಳಬಹುದು ಎಂಬುದನ್ನು ಯುವ ಪೀಳಿಗೆಗೆ ತೋರಿಸಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *