ಅಮೇರಿಕಾ – ನೈಜೀರಿಯಾ ಜಂಟಿ ಕಾರ್ಯಾಚರಣೆ| ಐಸಿಸ್ ಉಗ್ರ ಕಮಾಂಡರ್ ಹತ

ಸಮಗ್ರ ನ್ಯೂಸ್: ಅಮೆರಿಕ ಮತ್ತು ನೈಜೀರಿಯಾದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಐಸಿಸ್‌ನ ಮೋಸ್ಟ್‌ ವಾಂಟೆಡ್‌ ಉಗ್ರ, ಜಾಗತಿಕ ಕಮಾಂಡರ್‌ಗಳಲ್ಲಿ ಅಗ್ರ 2ನೇ ಸ್ಥಾನದಲ್ಲಿದ್ದ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹತ್ಯೆಗೈಯ್ಯಲಾಗಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೇ ಮಾಹಿತಿ ನೀಡಿದ್ದಾರೆ.

Ad Widget ... ..

ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಧೈರ್ಯಶಾಲಿ ಸೇನಾ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಹೇಳಿದ್ದಾರೆ.

Ad Widget

ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು ಅವನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದೆವು. ಇನ್ನು ಆತ ಆಫ್ರಿಕಾ ಜನರನ್ನು ಭೀತಿಗೊಳಿಸುವುದಿಲ್ಲ ಅಥವಾ ಅಮೆರಿಕನ್ನರ ವಿರುದ್ಧದ ದಾಳಿಗಳಿಗೆ ಸಹಾಯ ಮಾಡುವುದಿಲ್ಲ. ಅವನ ಹತ್ಯೆಯಿಂದ ಐಸಿಸ್‌ನ ಜಾಗತಿಕ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದಿದ್ದಾರೆ.

ಅಲ್-ಮಿನುಕಿಯನ್ನು 2023ರಲ್ಲಿ ಅಮೆರಿಕ ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿತ್ತು. ಆಫ್ರಿಕಾ ಖಂಡದಲ್ಲಿ ತಲೆಮರೆಸಿಕೊಂಡು ಸಂಘಟನೆಯ ಜಾಲವನ್ನು ವಿಸ್ತರಿಸಲು ಯತ್ನಿಸುತ್ತಿದ್ದ ಬಿಲಾಲ್, ಜಗತ್ತಿನಾದ್ಯಂತ ಐಸಿಸ್ ಜಾಲಕ್ಕೆ ಆರ್ಥಿಕ ನೆರವು ಮತ್ತು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಒದಗಿಸುವ ಜವಾಬ್ದಾರಿ ಹೊತ್ತಿದ್ದ.

Leave a Comment

Your email address will not be published. Required fields are marked *