ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್ ವೆಲ್ ಕೊರೆಸಿದ ಮಹಿಳೆ

ಸಮಗ್ರ ನ್ಯೂಸ್: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಮರ್ಶೆಗಳ ನಡುವೆಯೇ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗೃಹಿಣಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಂಡು ಮಾದರಿಯಾಗಿದ್ದಾರೆ.

Ad Widget ... .. Ad Widget .

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ನಿವಾಸಿ ಈರವ್ವ ಭರಮಪ್ಪ ಅಂಗಡಿ (52).ಗೃಹಲಕ್ಷ್ಮಿ ಯೋಜನೆಯಡಿ ತಮಗೆ ಬಂದ ಒಟ್ಟು 29 ಕಂತುಗಳ ಹಣವನ್ನು ಕೂಡಿಟ್ಟ ಈರವ್ವ, ಸುಮಾರು ₹54,000 ಮೊತ್ತವನ್ನು ಸಂಗ್ರಹಿಸಿದ್ದರು.ಈ ಹಣದಲ್ಲಿ ₹50,000 ವ್ಯಯಿಸಿ ತಮ್ಮ 2.5 ಎಕರೆ ಜಮೀನಿನಲ್ಲಿ 220 ಅಡಿ ಆಳದ ಬೋರ್ವೆಲ್ ಕೊರೆಸಿದ್ದಾರೆ.

Ad Widget

90 ಅಡಿಗೇ 5 ಇಂಚು ನೀರು ಬಿದ್ದಿದ್ದು, ಕುಟುಂಬದಲ್ಲಿ ಹರ್ಷ ವ್ಯಕ್ತವಾಗಿದೆ. ಉಳಿದ ₹4,000 ಹಣ ಹಾಗೂ ವಿವಿಧೆಡೆ ಮಾಡಿದ ಸಾಲದ ನೆರವಿನಿಂದ ₹80,000 ವೆಚ್ಚದಲ್ಲಿ ಮೋಟಾರ್ ಅಳವಡಿಸಿ, ಮಳೆಯನ್ನೇ ನಂಬಿದ್ದ ಒಣ ಬೇಸಾಯದ ಜಮೀನನ್ನು ನೀರಾವರಿ ಜಮೀನನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಕೇವಲ ₹2,000 ಹಣದಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರಿಗೆ ಈರವ್ವ ಅವರ ಈ ಕಾರ್ಯವೈಖರಿ ಮತ್ತು ಹಣದ ಉಳಿತಾಯದ ಮನೋಭಾವ ದೊಡ್ಡ ಸ್ಪೂರ್ತಿಯಾಗಿದೆ.

Leave a Comment

Your email address will not be published. Required fields are marked *