ಹಾರ್ಮೋಜ್ ಜಲಸಂಧಿಯಲ್ಲಿ ಯುದ್ಧ ಭೀತಿ| 18 ಭಾರತೀಯ ಹಡಗುಗಳಿಗೆ ದಿಗ್ಭಂಧನ| ತೈಲ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಅಮೆರಿಕ-ಇರಾನ್ ಯುದ್ಧವು ಭಾರತದ ಇಂಧನ ಭದ್ರತೆಯ ಮೇಲೆ ನೇರ ಪರಿಣಾಮ ಬೀರಿದೆ. ವಿಶ್ವದ ಅತ್ಯಂತ ಸೂಕ್ಷ್ಮ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ 18 ಬೃಹತ್ ಹಡಗುಗಳು ಸಿಲುಕಿಕೊಂಡಿದ್ದು, ಇಂಧನ ಸಾಗಾಟ ಸ್ಥಗಿತಗೊಂಡಿದೆ ಎಂದು ಕೇಂದ್ರ ನೌಕಾಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

Ad Widget ... ..

ಈ ಹಡಗುಗಳಲ್ಲಿ ಭಾರತದ ಅಡುಗೆ ಮನೆಗಳಿಗೆ ಅತ್ಯಗತ್ಯವಾದ ಎಲ್‌ಪಿಜಿ (LPG) ಮತ್ತು ದೇಶದ ಇಂಧನ ಅಗತ್ಯದ ಬೆನ್ನೆಲುಬಾಗಿರುವ ಕಚ್ಚಾ ತೈಲ (Crude Oil) ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿವೆ. ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ನಿರ್ಬಂಧ ಹೇರಲಾಗಿದೆ.

Ad Widget

​ಸಿಲುಕಿರುವ ಈ ಹಡಗುಗಳಲ್ಲಿ ನೂರಾರು ಭಾರತೀಯ ನಾವಿಕರಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಭಾರತೀಯ ನೌಕಾಪಡೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿದ್ದರೆ ‘ಆಪರೇಷನ್ ಸಂಕಲ್ಪ್’ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ.

ಭಾರತವು ತನ್ನ ಇಂಧನ ಅಗತ್ಯಕ್ಕಾಗಿ ಪರ್ಷಿಯನ್ ಕೊಲ್ಲಿಯನ್ನೇ ಹೆಚ್ಚು ಅವಲಂಬಿಸಿದೆ. ಹಡಗುಗಳು ಅಲ್ಲಿಯೇ ಸ್ಥಗಿತಗೊಂಡಿರುವುದರಿಂದ ಮುಂಬೈ, ಮಂಗಳೂರು ಮತ್ತು ಜಾಮ್‌ನಗರ ಬಂದರುಗಳಿಗೆ ತಲುಪಬೇಕಿದ್ದ ತೈಲ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.

ಮಾರ್ಚ್ 31ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇಂಧನ ಬೆಲೆಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಾರ್ಮುಜ್ ಜಲಸಂಧಿಯು ಯುದ್ಧ ವಲಯವಾಗಿ ಮಾರ್ಪಟ್ಟಿರುವುದರಿಂದ ವಿಮಾ ಕಂಪನಿಗಳು ಹಡಗುಗಳಿಗೆ ರಕ್ಷಣೆ ನೀಡಲು ಹಿಂಜರಿಯುತ್ತಿವೆ.

Leave a Comment

Your email address will not be published. Required fields are marked *