ಮಹಾವೀರ ಜಯಂತಿ ರಜೆ ಮಾ.30ಕ್ಕೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು 2026ನೇ ಸಾಲಿನ ಮಹಾವೀರ ಜಯಂತಿ ಸಾರ್ವಜನಿಕ ರಜೆಯ ದಿನಾಂಕದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಮೊದಲು ಮಾರ್ಚ್ 31ರ ಮಂಗಳವಾರ ರಜೆ ಎಂದು ಘೋಷಿಸಲಾಗಿತ್ತು, ಆದರೆ ಈಗ ಅದನ್ನು ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 30ರ ಸೋಮವಾರಕ್ಕೆ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

Ad Widget ... ..

ರಾಜ್ಯ ಸರ್ಕಾರದಿಂದ ‘ಮಹಾವೀರ ಜಯಂತಿ’ ರಜೆ ದಿನಾಂಕ ಬದಲಾವಣೆ ; ಮಾ.30ಕ್ಕೆ ರಜೆ ಘೋಷಣೆಜೈನ ಸಮುದಾಯದ ಮುಖಂಡರ ಮನವಿ ಹಾಗೂ ಧಾರ್ಮಿಕ ಪಂಚಾಂಗದ ಲೆಕ್ಕಾಚಾರದಂತೆ ಮಾರ್ಚ್ 30ರಂದೇ ಜಯಂತಿ ಆಚರಿಸುವುದು ಸೂಕ್ತ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಸರ್ಕಾರಿ ನೌಕರರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ (ನಾಲ್ಕನೇ ಶನಿವಾರ), ಭಾನುವಾರ ಹಾಗೂ ಸೋಮವಾರ ಸೇರಿ ಸತತ ಮೂರು ದಿನಗಳ ಲಾಂಗ್ ವೀಕೆಂಡ್ ಸಿಗಲಿದೆ. ಮಾರ್ಚ್ 31ರಂದು ಎಂದಿನಂತೆ ಕಚೇರಿ ಹಾಗೂ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Ad Widget

ಈ ಹಿಂದೆ 2026ನೇ ಸಾಲಿನ ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ಮಾರ್ಚ್ 31, 2026 (ಮಂಗಳವಾರ) ರಂದು ಘೋಷಿಸಲಾಗಿದ್ದ ಮಹಾವೀರ ಜಯಂತಿ ಸಾರ್ವಜನಿಕ ರಜೆಯನ್ನು ಈಗ ಬದಲಾಯಿಸಲಾಗಿದೆ. ಪರಿಷ್ಕೃತ ಆದೇಶದಂತೆ, ಈ ರಜೆಯನ್ನು ಮಾರ್ಚ್ 30, 2026 (ಸೋಮವಾರ) ರಂದು ನೀಡಲು ಸರ್ಕಾರ ನಿರ್ಧರಿಸಿದೆ

Leave a Comment

Your email address will not be published. Required fields are marked *