ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಮೂರನೇ ವಾರ ಪ್ರಾರಂಭವಾಗಿದೆ. ಈ ವಾರ ಯಾವ ರಾಶಿಗಳ ಫಲ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ 12 ರಾಶಿಗಳ ಸುಖ, ದುಃಖ, ಆರೋಗ್ಯ, ಹಣಕಾಸು, ಪ್ರೇಮ, ಕೌಟುಂಬಿಕ, ಸಾಮಾಜಿಕ ಹಾಗೂ ವೃತ್ತಿ ಜೀವನ ಹೇಗಿರಲಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ತಿಳಿಯೋಣ.
ಮೇಷ ರಾಶಿ:
ಮೇಷ ರಾಶಿಯವರು ಈ ವಾರ ತಮ್ಮ ಕೆಲಸದಲ್ಲಿ ಬಹಳ ವ್ಯವಸ್ಥಿತವಾಗಿರಬೇಕು ಮತ್ತು ಸವಾಲುಗಳಿಗೆ ಸಿದ್ಧರಾಗಿರಬೇಕು. ವಾರದ ಆರಂಭದಲ್ಲಿ ನೀವು ಹೆಚ್ಚುವರಿ ಕೆಲಸದ ಹೊರೆಯನ್ನು ಎದುರಿಸಬೇಕಾಗುತ್ತದೆ. ವಾರದ ಆರಂಭದಲ್ಲಿ ದೊಡ್ಡ ಕೆಲಸಗಳಲ್ಲಿ ನೀವು ಭಾಗಿಯಾಗುವುದು ಶ್ರಮ ತರಲಿದೆ. ಆರೊಗ್ಯದ ದೃಷ್ಟಿಕೋನದಿಂದ ಸ್ವಲ್ಪ ಪ್ರತಿಕೂಲವಾಗಿರಬಹುದು. ಋತುಮಾನದ ಕಾಯಿಲೆಗಳಿಂದಾಗಿ ನೀವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಮಿಶ್ರಫಲವಿದೆ. ನೀವು ಐಷಾರಾಮಿ ವಸ್ತುಗಳು ಅಥವಾ ಮನೆ ದುರಸ್ತಿಗಾಗಿ ಗಮನಾರ್ಹ ಮೊತ್ತವನ್ನು ಖರ್ಚು ಮಾಡಬೇಕಾಗಬಹುದು. ಸಂಬಂಧದ ದೃಷ್ಟಿಕೋನದಿಂದ ಈ ವಾರ ಸಾಮಾನ್ಯವಾಗಿರುತ್ತದೆ.
ವೃಷಭ ರಾಶಿ:
ಈ ವಾರ ವೃಷಭ ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ವಾರದ ಆರಂಭದಲ್ಲಿ ನೀವು ಇದ್ದಕ್ಕಿದ್ದಂತೆ ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಪ್ರಯಾಣವು ನಿರೀಕ್ಷೆಗಿಂತ ಕಡಿಮೆ ಫಲಪ್ರದವಾಗಿರುತ್ತದೆ. ಹಣಕಾಸು ವಿಚಾರವಾಗಿ ನೀವು ಬಹಳ ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಭೂಮಿ, ಆಸ್ತಿ ಸಂಬಂಧಿತ ಕೆಲಸಗಳಲ್ಲಿ ನಿಮಗೆ ಅಚ್ಚರಿಯ ಫಲಿತಾಂಶಗಳಿವೆ. ವಾರದ ಮಧ್ಯಂತರದಿಂದ ನಿಮಗೆ ಉತ್ತಮ ಸಮಯವಿದೆ. ನಿರುದ್ಯೋಗಿಗಳಿಗೆ ಈ ವಾರವು ಉತ್ತಮ ಅವಕಾಶಗಳು ಸಿಗಲಿದೆ. ಆರೋಗ್ಯದ ವಿಚಾರದಲ್ಲಿ ವಾರದ ಕೊನೆಯಲ್ಲಿ ನೆಮ್ಮದಿ ಇದೆ. ಈ ಸಮಯದಲ್ಲಿ ನೀವು ಮಾರುಕಟ್ಟೆಯ ಉತ್ಕರ್ಷದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯಬಹುದು. ಪ್ರೇಮ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಿರಿ.
ಮಿಥುನ ರಾಶಿ:
ಈ ವಾರ ಮಿಥುನ ರಾಶಿಯವರಿಗೆ ಅತ್ಯಂತ ಶುಭ ಮತ್ತು ಯಶಸ್ಸಿನ ದಿನಗಳಿವೆ. ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಈ ವಾರ ಮಾಡಿ ಮುಗಿಸುವಿರಿ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ವಾರದ ಆರಂಭದಲ್ಲಿ ನಿಮ್ಮ ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ನಿಮಗೆ ಸಿಗಬಹುದು. ಅಪೇಕ್ಷಿತ ಬಡ್ತಿ ಅಥವಾ ವರ್ಗಾವಣೆಗಾಗಿ ಕಾಯುತ್ತಿದ್ದರೆ, ಈ ವಾರ ನಿಮ್ಮ ಆಸೆ ಈಡೇರಿಸಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ನಿರ್ಧಾರದಿಂದ ನೀವು ಪ್ರಯೋಜನ ಪಡೆಯಬಹುದು. ಕುಟುಂಬದೊಂದಿಗೆ ಪ್ರವಾಸ, ಪ್ರಯಾಣಕ್ಕೆ ಮುಂದಾಗಬಹುದು. ವಾರದ ಅಂತ್ಯದಲ್ಲಿ ಹಣಕಾಸು ಸಂಬಂಧಿತ ವಿಚಾರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಮನೆ ಐಷಾರಾಮಿ ವಸ್ತು ಖರೀದಿಯ ಸಂಭವವಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಮಂದಿಗೆ ಈ ವಾರವು ಅನುಕೂಲಕರ. ನೀವು ಉದ್ಯೋಗದಲ್ಲಿದ್ದರೆ ಕೆಲಸದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ತಪ್ಪಿಸಿ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ವಾರದ ಮೊದಲಾರ್ಧದಲ್ಲಿ ಕೆಲವು ವೈಯಕ್ತಿಕ ಸಮಸ್ಯೆಗಳ ಎದುರಿಸಬಹುದು. ಕುಟುಂಬದ ಸಮಸ್ಯೆಗಳು ನಿಮ್ಮ ವೃತ್ತಿಪರ ಕೆಲಸದ ಮೇಲೆ ಪರಿಣಾಮ ಬೀರಬಹುದು. ಈ ವಾರದ ಮೊದಲಾರ್ಧದಲ್ಲಿ ನಿಮ್ಮ ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಉದ್ಯೋಗ ಹುಡುಕುತ್ತಿದ್ದವರಿಗೆ ಈ ವಾರ ನಿರಾಸೆ ಮೂಡಬಹುದು. ವಾರದ ದ್ವಿತೀಯಾರ್ಧದಲ್ಲಿ ಸಣ್ಣ ಸಮಸ್ಯೆಗಳು ದೊಡ್ಡದಾಗಬಹುದು. ನಿಮ್ಮ ಆಪ್ತರೊಬ್ಬರ ಹಣಕಾಸಿನ ವಿಚಾರದಲ್ಲಿ ನೀವು ಸಹಾಯ ಮಾಡಬಹುದು. ನಿಮಗೆ ಬರಬೇಕಿದ್ದ ವಸ್ತು, ಹಣ ಕೈ ಸೇರಲಿದೆ. ಆರೋಗ್ಯ ಸುಧಾರಣೆಯ ಸಮಯವಿದು.
ಸಿಂಹ ರಾಶಿ:
ಈ ವಾರ ಸಿಂಹ ರಾಶಿಯವರಿಗೆ ಮಿಶ್ರಫಲವಾಗಿರಲಿದೆ. ಈ ವಾರ ನಿಮ್ಮ ಕೆಲಸಗಳು ಪೂರ್ಣವಾಗಲಿದೆ. ನಿಮ್ಮ ವ್ಯಾಪಾರದ ಲಾಭದ ಪ್ರಮಾಣ ಹೆಚ್ಚಾಗಲಿದೆ. ವ್ಯಾಪಾರ ಸಂಬಂಧಿತ ವಿಚಾರವಾಗಿ ನೀವು ಬಹಳಷ್ಟು ಪ್ರಯಾಣ ಮಾಡಬಹುದು. ಸ್ವಂತ ಉದ್ಯೋಗ ಕಟ್ಟಿಕೊಳ್ಳುವ ನಿಮ್ಮ ಬಯಕೆಗೆ ಅಗತ್ಯ ತಯಾರಿ ಮಾಡಿಕೊಳ್ಳಬಹುದು. ಪಾಲುದಾರಿಕೆ ವ್ಯವಹಾರಕ್ಕೂ ಮುನ್ನ ಬಹಳಷ್ಟು ಸಲಹೆ ಮತ್ತು ಅವಲೋಕನದ ಅವಶ್ಯಕತೆ ಇದೆ. ಸಾಲದ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ನಿಮ್ಮ ಆರೋಗ್ಯ ಮತ್ತು ಸಂಬಂಧಗಳು ಸ್ವಲ್ಪ ಪ್ರತಿಕೂಲವಾಗಿರಬಹುದು, ಆದ್ದರಿಂದ ಇತರರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಿ. ಹೊಸ ಆದಾಯ ಮೂಲ ಹುಡುಕುತ್ತಿದ್ದರೆ ಶುಭವಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ವಾರದ ಆರಂಭವು ಅತ್ಯಂತ ಶುಭವಾಗಿರುತ್ತದೆ. ನಿಮ್ಮ ಯೋಜಿತ ಕಾರ್ಯಗಳು ಬಯಸಿದಂತೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ನೀವು ಪ್ರಯಾಣಗಳ ಮಾಡುವಿರಿ. ಹೀಗಾಗಿ ಈ ವಾರ ನಿಮ್ಮ ಖರ್ಚುಗಳು ಸಹ ಹೆಚ್ಚಾಗುವುದು ನೋಡಬಹುದು. ವಾರದ ಮೊದಲಾರ್ಧದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಭೇಟಿಯಾಗುವಿರಿ. ಧಾರ್ಮಿಕ ಸ್ಥಳದ ಭೇಟಿ ಸೇರಿದಂತೆ ಹಲವು ರೀತಿಯ ಶುಭ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ವಾರದ ಉತ್ತರಾರ್ಧವು ವೃತ್ತಿ ಮತ್ತು ವ್ಯವಹಾರಕ್ಕೆ ಸ್ವಲ್ಪ ಪ್ರತಿಕೂಲವಾಗಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ದಾಂಪತ್ಯ ಮುನಿಸುಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ.
ತುಲಾ ರಾಶಿ:
ಮಾರ್ಚ್ ಎರಡನೇ ವಾರವು ತುಲಾ ರಾಶಿಯವರಿಗೆ ಅತ್ಯಂತ ಶುಭ ಮತ್ತು ಪ್ರಯೋಜನಕಾರಿಯಾಗಿರುತ್ತದೆ. ವಾರದ ಆರಂಭದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಬಹುನಿರೀಕ್ಷಿತ ಶುಭ ಸುದ್ದಿಯನ್ನು ನೀವು ಕೇಳುವಿರಿ. ಉದ್ಯಮಿಗಳಿಗೆ ಬಹಳ ಶುಭದಾಯಕ ವಾರವೂ ಹೌದು, ನೀವು ಬಹು ಸಮಯದಿಂದ ಮಾಡಬೇಕಿದ್ದ ಕೆಲಸವು ಅರ್ಧಕ್ಕೆ ನಿಂತಿದ್ದರೆ ಸಮಯದಲ್ಲಿ ಪೂರ್ಣ ಮಾಡುವಿರಿ. ಆಸ್ತಿ, ನ್ಯಾಯಾಲಯ, ಸರ್ಕಾರಿ ದಾಖಲೆಗಳ ವಿಚಾರದಲ್ಲಿ ಈ ವಾರ ವೇಗ ಪಡೆಯಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಇದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.
ವೃಶ್ಚಿಕ ರಾಶಿ:
ಈ ವಾರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ವಾರದ ಆರಂಭದಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸುವ ಪ್ರಮುಖ ಸಮಸ್ಯೆ ಗಮನಾರ್ಹ ಚಿಂತೆಗೆ ಕಾರಣವಾಗಲಿದೆ. ವ್ಯಾಪಾರ ಸಂಬಂಧಿತ ಒಪ್ಪಂದಗಳಲ್ಲಿ ಎಚ್ಚರಿಕೆ ಇಡಿ. ವಾರದ ಉತ್ತರಾರ್ಧದಲ್ಲಿ ಪ್ರೀತಿಪಾತ್ರರ ನಿರ್ಲಕ್ಷ್ಯ ಅಥವಾ ಅವರೊಂದಿಗಿನ ಸಂಘರ್ಷವು ಅತೃಪ್ತಿಗೆ ಕಾರಣವಾಗಬಹುದು. ಆರ್ಥಿಕ ಸ್ಥಿತಿಯಲ್ಲಿನ ಒತ್ತಡದ ಕಾರಣದಿಂದ ನಿಮ್ಮ ಮನಃಶಾಂತಿ ಹದಗೆಡಬಹುದು. ಮಕ್ಕಳ ಕುರಿತ ವಿಚಾರವಾಗಿ ಚಿಂತೆ ಇದೆ. ವಾರದ ಅಂತ್ಯದಲ್ಲಿ ದೊಡ್ಡ ಉಳಿತಾಯದ ಮೊತ್ತ ನಿಮ್ಮ ಕೈ ಸೇರಬಹುದು. ಮನೆಗಾಗಿ ಖರ್ಚು ಮಾಡುವ ನಿಮ್ಮ ಹಣ ಉತ್ತಮ ಫಲಿತಾಂಶಕ್ಕೆ ಕಾರವಾಗಲಿದೆ.
ಧನು ರಾಶಿ:
ಈ ವಾರ ಧನು ರಾಶಿಯ ಜನರಿಗೆ ಏರಿಳಿತದಿಂದ ಕೂಡಿದ ದಿನಗಳಿವೆ. ನೀವು ಈ ವಾರ ಹಲವು ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ವಾರದ ಬಹುತೇಕ ಸಮಯ ಮನೆಯಿಂದ ಹೊರಗೆ ಉಳಿಯಬಹುದು. ನೀವು ಯಾರಿಂದಾದರು ಸಾಲ ಪಡೆದಿದ್ದರೆ ಈ ವಾರ ಮರಳಿ ನೀಡಬೇಕಾದ ಒತ್ತಡ ಹೆಚ್ಚಾಗುತ್ತದೆ. ವಾರದ ಆರಂಭದಲ್ಲಿ ಕೆಲಸ ಅಥವಾ ವ್ಯವಹಾರ ಉದ್ದೇಶಗಳಿಗಾಗಿ ದೀರ್ಘ ಪ್ರಯಾಣ ಸಾಧ್ಯ. ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅನಗತ್ಯವಾಗಿ ಕೋಪ ಮಾಡಿಕೊಳ್ಳುವುದು, ಕಲಹದಲ್ಲಿ ಭಾಗಿಯಾಗುವುದನ್ನು ತಪ್ಪಿಸುವುದು ಉತ್ತಮ. ಸುದೀರ್ಘ ಪ್ರಯಾಣಗಳನ್ನು ಹಣಕಾಸು ಸಮಸ್ಯೆಯ ಕಾರಣಕ್ಕೆ ಮುಂದೂಡಬಹುದು.
ಮಕರ ರಾಶಿ:
ಈ ವಾರ ಮಕರ ರಾಶಿಯವರಿಗೆ ಮಿಶ್ರ ಫಲವಾಗಿರುತ್ತದೆ. ಈ ವಾರದ ಮೊದಲಾರ್ಧದಲ್ಲಿ ಮಕರ ರಾಶಿಯವರು ತಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬಹುದು. ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದರೆ ಅದರಲ್ಲಿ ಯಶಸ್ಸು ಪಡೆಯುವುದು ಕಷ್ಟವಾಗಲಿದೆ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ನೀವು ದೊಡ್ಡ ಕೆಲಸಗಳನ್ನು ಹಾಗೆ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋಪ ಅಥವಾ ಆತುರದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಈ ವಾರ ಹಣಕಾಸಿನ ವಿಷಯಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಈ ವಾರ ಅತ್ಯಂತ ಶುಭ ಮತ್ತು ಪ್ರಯೋಜನಕಾರಿಯಾಗಿರುತ್ತದೆ. ಈ ವಾರದ ಆರಂಭದಲ್ಲಿ ನಿಮಗೆ ಕುಟುಂಬದಿಂದ ಬೆಂಬಲ ಸಿಗುವುದು ನೆಮ್ಮದಿ ತರಲಿದೆ. ಆಪ್ತರಿಂದ ಹಣಕಾಸಿನ ಸಹಾಯವೂ ಸಿಗಲಿದೆ. ಹೀಗಾಗಿ ಬಹಳಷ್ಟು ವಿಚಾರಗಳಲ್ಲಿ ನಿಮಗೆ ಶುಭವಿದೆ. ದೊಡ್ಡ ಆಸೆಯೊಂದನ್ನು ಈಡೇರಿಸಿಕೊಳ್ಳುವಿರಿ. ವ್ಯಾಪಾರ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣಗಳ ಮಾಡುವಿರಿ. ಉದ್ಯೋಗದಲ್ಲಿರುವ ಮಂದಿಗೆ ಈ ವಾರದಲ್ಲಿ ಶುಭವಿದೆ. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಬಡ್ತಿ ಅಥವಾ ಅಪೇಕ್ಷಿತ ಜವಾಬ್ದಾರಿಯ ಬಯಕೆ ಈಡೇರಬಹುದು. ವಾರದ ಉತ್ತರಾರ್ಧದಲ್ಲಿ ನಿಮ್ಮ ಕೆಲಸದಲ್ಲಿ ಕಠಿಣ ಸ್ಥಿತಿ ಇರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ.
ಮೀನ ರಾಶಿ:
ಮೀನ ರಾಶಿಯ ಜನರಿಗೆ ಈ ವಾರದಲ್ಲಿ ಅನೇಕ ರೀತಿಯ ಶುಭ ನೋಡಬಹುದು. ನೀವು ಬಯಸಿದಂತೆ ಮನೆಗಾಗಿ ವಸ್ತು ಖರೀದಿಸಬಹುದು. ಈ ವಾರ ಉದ್ಯೋಗಸ್ಥರಿಗೆ ಉತ್ತಮ ಕೊಡುಗೆಗಳು ಸಿಗಬಹುದು. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳ ಅಥವಾ ಉದ್ಯೋಗ ಬದಲಾಯಿಸುವ ನಿಮ್ಮ ಬಯಕೆಯಲ್ಲಿ ಸಂತಸದ ಸಮಯ ಆಗಿರಲಿದೆ. ಆದಾಯ ಹೆಚ್ಚಳವಾಗಲಿದೆ. ಈಷ ವಾರ ನೀವು ಬಹುಮುಖ್ಯ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ಭೂಮಿ, ಆಸ್ತಿ ಮತ್ತು ವಾಹನವನ್ನು ಸಂಪಾದಿಸುವ ನಿಮ್ಮ ಕನಸುಗಳು ಈ ವಾರ ನನಸಾಗಬಹುದು. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಸ್ವಲ್ಪ ಪ್ರತಿಕೂಲವಾಗಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಇದೆ.







